LatestNews

ಯಳಂದೂರಲ್ಲಿ ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಮಾತಾಡಿದ ಕಿಡಿಗೇಡಿ ವಿರುದ್ದ ಕ್ರಮಕ್ಕೆ ವಕೀಲರ ಪ್ರತಿಭಟನೆ

ಯಳಂದೂರು(ನಾಗರಾಜ ವೈಕೆ ಮೊಳೆ): ಬುದ್ದ ಬಸವಣ್ಣ ಡಾ. ಬಿ‌.ಆರ್ ಅಂಬೇಡ್ಕರ್ ರವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕಿಡಿಗೇಡಿ  ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಯಳಂದೂರು ವಕೀಲರು ಸಂಘದ ಎಲ್ಲಾ ವಕೀಲರು ನ್ಯಾಯಾಲಯದ  ಕಲಾಪಗಳಿಂದ ಹೊರಗುಳಿದು ನ್ಯಾಯಾಲಯದ ಆವರಣದ ಮುಂದೆ ಶುಕ್ರವಾರ ಪ್ರತಿಭಟಿಸಿದರು.

ಪಟ್ಟಣದ  ನ್ಯಾಯಾಲಯದ ವಕೀಲರ ಸಂಘದ ಕಛೇರಿಯಲ್ಲಿ  ಸರ್ವ ಸದಸ್ಯರ ತುರ್ತು ಸಭೆ ಕರೆದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾದ  ಜಯಶಂಕರ ಅಂಬಳೆ ಮಾತನಾಡಿ ಮಂಡ್ಯ ಜಿಲ್ಲೆಯ ವೇದಮೂರ್ತಿ ಎಂಬ ವ್ಯಕ್ತಿಯು ಮಹಾಜ್ಞಾನಿ ಬುದ್ದ ಸಮಾಜ ಸುಧಾರಕ ಬಸವಣ್ಣ ಸಂವಿಧಾಧ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಕುರಿತಾಗಿ ಅವಾಚ್ಯ ಶಬ್ದಗಳಿಂದ ಮಾತನಾಡುವ ಮೂಲಕ ಅವಮಾನ ಮಾಡಿದ್ದಾನೆ.

ಈಗಾಗಲೇ ಆರೋಪಿಯ ವಿರುದ್ದ ಹಲವು ಠಾಣೆಗಳಲ್ಲಿ ದೂರು ದಾಖಲಾಗಿದ್ದು ಈಗಾಗಲೇ ಆತನನ್ನು ಬಂದಿಸಿರುತ್ತಾರೆ ಈತನ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ ಗಡಿ ಪಾರು ಮಾಡಬೇಕು ರಾಜ್ಯದ ಯಾವುದೇ ವಕೀಲರು ಆರೋಪಿಯ ಪರ ವಕಾಲತ್ತು ವಹಿಸಬಾರದು ಮಹಾನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಇಂತಹ ವ್ಯಕ್ತಿಗಳಿಗೆ ತಕ್ಕ ಶಿಕ್ಷೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಇಂತಹವರು ಸಂಖ್ಯೆ ಜಾಸ್ತಿಯಾಗುತ್ತಿದೆ ಸಾಮಾಜಿಕ ಜಾಲತಾಣಗಳ ಮೂಲಕ ದಿಢೀರ್ ಖ್ಯಾತಿಗಳಿಸಬೇಕೆಂಬ ದುರುದ್ದೇಶದಿಂದ ರಾಷ್ಟ್ರ ನಾಯಕರ ಬಗ್ಗೆ ಕೇವಲವಾಗಿ ಮಾತನಾಡುವ ಇಂತಹ ವ್ಯಕ್ತಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವ ಅಗತ್ಯವಿದೆ ಎಂದು ಆಗ್ರಹಿಸಿದರು.

ಬಳಿಕ ಎಲ್ಲಾ ವಕೀಲರು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಹೊರಗೆ ಬಂದು ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದರು ಸಂದರ್ಭದಲ್ಲಿ ಉಪಾಧ್ಯಕ್ಷ ಮುತ್ತುರಾಜ್ ಕಾರ್ಯದರ್ಶಿ ಜಿ.ಎನ್.ಸಂಪತ್ ಗಂಗವಾಡಿ ಖಜಾಂಚಿ ರಂಜಿತಾ ಜಂಟಿ ಕಾರ್ಯದರ್ಶಿ ಮಹೇಶ್ ಮಾಜಿ ಅಧ್ಯಕ್ಷರಾದ ಸಿ.ಆರ್ ನಾಗರಾಜು ಸಿ.ಸಿದ್ಧರಾಜು ಕೆ.ಬಿ.ಶಶಿಧರ ರಾಜಣ್ಣ ಹೊನ್ನೂರು ಕೃಷ್ಣ ಅಂಬಳೆ ಎಂ ರವೀಶ್ ಪರಶಿವಮೂರ್ತಿ ಅಶ್ವಿನ್ ಕುಮಾರ್ ನಾಗರಾಜು ಹೊನ್ನೂರು ಕಾಂತರಾಜು ಶ್ರೀನಿವಾಸ ಮೂರ್ತಿ ಪ್ರಸನ್ನ ಕುಮಾರ್ ಚಂದನ ಉಮಾ ಮೇಘ ಇತರರು ಹಾಜರಿದ್ದರು

admin
the authoradmin

ನಿಮ್ಮದೊಂದು ಉತ್ತರ