‘ಜನಮನ ಕನ್ನಡ’ಕ್ಕೆ ವಾರ್ಷಿಕೋತ್ಸವ ಸಂಭ್ರಮ… ಇದು ಸಾಧ್ಯವಾಗಿದ್ದು ನಿಮ್ಮಿಂದಲೇ… ಧನ್ಯವಾದಗಳು
ಮೊದಲ ವಾರ್ಷಿಕೋತ್ಸವದ ಶುಭಾಶಯಗಳು

ಕಾಲಕ್ಕೆ ಯಾವ ಲಗಾಮು ಇಲ್ಲ.... ಅದು ಓಡುತ್ತಲೇ ಇರುತ್ತದೆ. ನಾವು ಅದರ ಜತೆಗೆ ಓಡಬೇಕಷ್ಟೆ.. ಜನಮನಕನ್ನಡ ವೆಬ್ ಸೈಟ್ ಆರಂಭವಾಗಿ ಒಂದು ವರ್ಷ ಪೂರೈಸುತ್ತಿದೆ ಎನ್ನುವುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತಸವಾಗುತ್ತಿದೆ..
ವೆಬ್ ಸೈಟ್ ಮಾಡುವುದು ಒಂದೆರಡು ದಶಕಗಳ ಹಿಂದಿನ ಕನಸಾಗಿತ್ತು. ಅದನ್ನು ನನಸು ಮಾಡಲು ಈಗಾಗಲೇ ಎರಡು ಬಾರಿ ಮೈಸೂರು ನ್ಯೂಸ್ 24, ಕನ್ನಡ ನ್ಯೂಸ್ 1 ಹೀಗೆ ಎರಡು ವೆಬ್ ಸೈಟ್ ಗಳನ್ನು ನಿರ್ಮಿಸಿದರೂ ಮುನ್ನಡೆಸಲು ಸಾಧ್ಯವಾಗಲಿಲ್ಲ. ಅದಕ್ಕೆ ಹಲವು ಕಾರಣಗಳಿದ್ದು ಡಿಜಿಟಲ್ ಮಾಧ್ಯಮದ ಬಗೆಗಿನ ಜ್ಞಾನದ ಕೊರತೆ ಪ್ರಮುಖವಾಗಿದೆ.. ಹಾಗಾಗಿ ಮುನ್ನಡೆಸುವಲ್ಲಿ ಎಡವಿದ್ದರೂ ಅದೊಂದು ಅನುಭವವಾಗಿ ಉಳಿಯಿತು ಎನ್ನುವುದು ಅಷ್ಟೇ ಸತ್ಯ.
ಇವತ್ತು ಜನಮನಕನ್ನಡ ಉತ್ತಮವಾಗಿ ಮೂಡಿ ಬರುತ್ತಿದ್ದರೆ ಅದಕ್ಕೆ ವಿಜಯಪಥ ವೆಬ್ ಸೈಟ್ ನ ಸಂಪಾದಕ ದೇವರಾಜ್ ಕಾರಣ, ಸುಂದರವಾಗಿ ರೂಪಿಸಿಕೊಟ್ಟಿದ್ದಲ್ಲದೆ, ಸಹಕಾರ, ಬೆಂಬಲ ಮತ್ತು ಉತ್ತಮ ಸಲಹೆಗಳಿಂದ ವೆಬ್ ಸೈಟ್ ಮುನ್ನಡೆಯಲು ಹಾಗೆಯೇ.. ಈಗಿನ ಡಿಜಿಟಲ್ ಲೋಕದಲ್ಲಿ ಸಾವಿರಾರು ಕನ್ನಡ ವೆಬ್ ಸೈಟ್ ಗಳ ನಡುವೆ ಒಂದಾಗಿ ಓದುಗರನ್ನು ತಲುವುತ್ತ ಮುನ್ನಡೆಯಲು ಸಾಧ್ಯವಾಗಿದೆ.
ಈಗಿನ ತಲೆಮಾರು ಪತ್ರಿಕೆಗಳಿಂದ ಡಿಜಿಟಲ್ ಕಡೆಗೆ ಮುಖ ಮಾಡುತ್ತಿದ್ದಾರೆ.. ಹೀಗಾಗಿ ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು ಎಂಬ ಉದ್ದೇಶದಿಂದ ವೆಬ್ ಸೈಟ್ ಆರಂಭಿಸಿದ್ದೇವೆ. ಸಾಹಿತ್ಯ ಸೇರಿದಂತೆ ಉತ್ತಮ ವಿಚಾರಗಳಿಂದ ಕೂಡಿದ ಬರಹಗಳಿಗೆ ಆದ್ಯತೆ ನೀಡುತ್ತಿದ್ದೇವೆ. ಇದು ನಮ್ಮೊಂದಿಗೆ ಕೈಜೋಡಿಸುತ್ತಾ ಬಂದಿರುವ ಲೇಖಕ(ಕಿ)ಯರಿಂದ ಸಾಧ್ಯವಾಗಿದೆ.
ವೆಬ್ ಸೈಟ್ ಗೆ ಜೀವ ತುಂಬುವಲ್ಲಿ ನಮ್ಮೊಂದಿಗೆ ಆರಂಭದಿಂದಲೂ ಸಿನಿಮಾ, ಸಾಹಿತ್ಯ, ವೈಚಾರಿಕ ಹೀಗೆ ಎಲ್ಲವನ್ನೂ ಬರೆಯುತ್ತಾ ನಮಗೆ ಬೆನ್ನೆಲುಬಾಗಿ ನಿಂತ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರನ್ನು ಸ್ಮರಿಸಲೇ ಬೇಕಾಗುತ್ತದೆ. ಅವರ ಉತ್ಸಾಹ, ಬರವಣಿಗೆಯಲ್ಲಿನ ಬದ್ಧತೆ, ಮತ್ತು ಆಧುನಿಕತೆಗೆ ಹೊಂದಿಕೊಳ್ಳುತ್ತಾ ಡಿಜಿಟಲ್ ಲೋಕದಲ್ಲಿನ ಅವರ ಸಕ್ರಿಯತೆಗೆ ಸೆಲ್ಯೂಟ್…

ಇನ್ನು ವೆಬ್ ಸೈಟ್ ಗೆ ಸದಾ ಲೇಖನಗಳನ್ನು ಬರೆಯುತ್ತಾ ಪ್ರೋತ್ಸಾಹಿಸುತ್ತಿರುವ ಹಿರಿಯ ಸಾಹಿತಿಗಳಾದ ಬನ್ನೂರು ಕೆ.ರಾಜು, ಎಸ್ ಪ್ರಕಾಶ್ ಬಾಬು, ಲೇಖಕರಾದ ಪರಮೇಶ್ ಕೆ ಉತ್ತನಹಳ್ಳಿ, ಕಾಳಿಹುಂಡಿ ಶಿವಕುಮಾರ್, ಮೈ.ನಾ.ಲೋಕೇಶ್, ಲೇಖಕಿಯರಾದ ಡಾ.ಸರ್ತಾಜ್ ಪಿ ಹೆಚ್, ಡಾ. ಪೂರ್ಣಿಮಾ ಉಮೇಶ್, ಡಾ.ವಿದ್ಯಾ ಸಿ ಎಸ್, ಕೆ.ಟಿ.ವಾತ್ಸಲ್ಯ, ಗಾಯತ್ರಿ ಎಸ್ ಎನ್, ಮೊದಲಾದವರನ್ನು ನೆನಪಿಸಿಕೊಳ್ಳುತ್ತಾ ಧನ್ಯವಾದಗಳನ್ನು ಹೇಳಲೇ ಬೇಕಾಗುತ್ತದೆ..
ದೈನಂದಿನ ಸುದ್ದಿ ಹಾಗೂ ವಿಶೇಷ ವರದಿಗಳನ್ನು ನೀಡುತ್ತಾ ಸಹಕರಿಸುತ್ತಿರುವ ರಘು ಹೆಬ್ಬಾಲೆ, ಸಂಘಟನೆ ಮಂಜುನಾಥ್, ಜಿಟೆಕ್ ಶಂಕರ್, ಹಿರೀಕ್ಯಾತನಹಳ್ಳಿ ಸ್ವಾಮಿಗೌಡ, ಹೆಚ್.ಪಿ.ನವೀನ್ ಕುಮಾರ್, ಮನುಕುಮಾರ್, ರಾಜೇಶ್ ಎಂ ಎನ್, ಸಿನಿಮಾ ಸುದ್ದಿಗಳನ್ನು ನೀಡುತ್ತಿರುವ ಡಾ.ಪ್ರಭುಗಂಜಿಹಾಳ ಅವರಿಗೆ ನಮನಗಳು. ತಮ್ಮ ಸಂಸ್ಥೆಯ ಸುದ್ದಿಗಳನ್ನು ನೀಡುತ್ತಾ ವೆಬ್ ಸೈಟ್ ನ ಶ್ರೇಯೋಭಿವೃದ್ಧಿಯನ್ನು ಬಯಸುತ್ತಿರುವ ವಿಶ್ವವಚನ ಫೌಂಡೇಶನ್ ನ ವಚನಕುಮಾರಸ್ವಾಮಿ ದಂಪತಿಗೆ, ಅಖಿಲ ಭಾರತ ವೀರಶೈವ ಮೈಸೂರು ಜಿಲ್ಲಾ ಘಟಕದ ನಿರ್ದೇಶಕರಾದ ಕಲ್ಮಳ್ಳಿ ನಟರಾಜು ಸೇರಿದಂತೆ ಹಲವರ ಸಹಕಾರವನ್ನು ಮರೆಯುವಂತಿಲ್ಲ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ನಂಬಿಕೆ ಇದ್ದರಷ್ಟೇ ನಾವು ಮುನ್ನಡೆಯಲು ಸಾಧ್ಯ..
ಇನ್ನು ಮುಂದೆಯೂ ನಿಮ್ಮೆಲ್ಲರ ಸಹಕಾರವನ್ನು ಬಯಸುತ್ತೇನೆ… ಡಿಜಿಟಲ್ ಲೋಕದಲ್ಲಿ ‘ಜನಮನಕನ್ನಡ’ದ ಛಾಪು ಮೂಡಿಸಬೇಕಾದರೆ ನಿಮ್ಮ ಬೆಂಬಲ ಹೀಗೆಯೇ ಇರಲಿ.. ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು.. ನಿಮ್ಮ ಅಭಿಪ್ರಾಯದ ನಿರೀಕ್ಷೆಯಲ್ಲಿ…
ಜನಮನಕನ್ನಡ ಬಳಗ







