LatestMysore

ತಂಬಾಕು ಬೆಳೆಗಾರರೇ  ಕಾಯಿರಿ… ರಾಸಾಯನಿಕ ಗೊಬ್ಬರದ ಗುಣಮಟ್ಟ ಪರೀಕ್ಷಿಸಿದ ಬಳಿಕ ಬಳಸಿ…

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ವಿವಿಧ ರಾಸಾಯನಿಕ ಗೊಬ್ಬರಗಳ ಮಾದರಿ ಯನ್ನು ಸಂಗ್ರಹಿಸಿ ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯಕ್ಕೆ ರವಾನಿಸಲಾಗುವುದು ಎಂದು ಹುಣಸೂರು ಕೃಷಿ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಅನಿಲ್ ತಿಳಿಸಿದರು.

ಕಟ್ಟೆಮಳಲವಾಡಿ ಡಿ.ದೇವರಾಜ ಅರಸು ತಂಬಾಕು ಹರಾಜು  ಮಾರುಕಟ್ಟೆಯ ಗೋದಾಮಿನಲ್ಲಿ ಸಂಗ್ರಹಿಸಿರುವ ರಸಗೊಬ್ಬರ ಮಾದರಿಯನ್ನು ಸಂಗ್ರಹಿಸಿದ ನಂತರ ಮಾತನಾಡಿ ಪ್ರತಿ ವರ್ಷ ತಂಬಾಕು ಮಂಡಳಿಯಿಂದ ತಂಬಾಕು ಬೆಳೆಗಾರರಿಗೆ ಪೂರೈಸುವ  ರಾಸಾಯನಿಕ ಗೊಬ್ಬರದ ಗುಣಮಟ್ಟವನ್ನು ಪರೀಕ್ಷಿಸಿದಂತೆ ಈ ವರ್ಷವೂ ಪರೀಕ್ಷೆ ನಡೆಸಲು ಪ್ರಯೋಗಾಲಯಕ್ಕೆ ಕಳಿಸಲಾಗುವುದು.

ಗುಣಮಟ್ಟದ ವರದಿ ಬಂದ ಬಳಿಕ ವಿತರಣೆ ಮಾಡಲು ಅನುಮತಿ ನೀಡಿದ ನಂತರ ಮಂಡಳಿ ರೈತರಿಗೆ ನೀಡಬೇಕು ಈ ಹಿನ್ನಲೆಯಲ್ಲಿ ಪ್ರಯೋಗಾಲಯಕ್ಕೆ ಕಳಿಸುವುದಕ್ಕೆ ಪಟ್ಟಿ ಮಾಡಲು ತಂಬಾಕು ಹರಾಜು ಮಾರುಕಟ್ಟೆಯ ಮೂರೂ ದಾಸ್ತಾನು ಗೋದಾಮು ಹಾಗೂ ಚಿಲ್ಕುಂದ ಹರಾಜು ಮಾರುಕಟ್ಟೆಯ ಒಂದು ದಾಸ್ತಾನು ಗೋದಾಮುಗಳಲ್ಲಿ ವಿವಿಧ ರಾಸಾಯನಿಕ ಗೊಬ್ಬರಗಳನ್ನು ಸಂಗ್ರಹಿಸಿ ಇಡಲಾಗಿದೆ.

ಮಂಡಳಿಯು ಈ ವರ್ಷ ತಂಬಾಕು ಬೆಳೆಯುವ ರೈತರಿಗೆ 3400 ಮೆಟ್ರಿಕ್ ಟನ್ ರಸಗೊಬ್ಬರಿಗೆ ಬೇಡಿಕೆ ಇದ್ದು ಈ ಪೈಕಿ  1300 ಮೆಟ್ರಿಕ್ ಟನ್ ಗೊಬ್ಬರವನ್ನು 13 ಕಂಪನಿಗಳು ಸರಬರಾಜು ಮಾಡಿವೆ. ಪ್ರಸ್ತುತ ಸಿಎನ್, ಅಮೋನಿಯಂ ಸಲ್ಫೇಟ್, ಡಿಎಪಿ, ರಸ ಗೊಬ್ಬರಗಳು ದಾಸ್ತಾನುಗೊಂಡಿವೆ.

ಎಲ್ಲಾ ದಾಸ್ತಾನು ಮಾಡಿರುವ ಗೋದಾಮುಗಳಲ್ಲಿ ಸಂಗ್ರಹಿಸಿರುವ ಹಲವು ಚೀಲಗಳಲ್ಲಿ ತೆಗೆದು ಗುಣಮಟ್ಟದ ಮಾದರಿಗೆ ಕಳುಹಿಸಿ ಲಾಗುವುದು. 1985ರ ಅನ್ವಯ ರಸಗೊಬ್ಬರ ನಿಯಂತ್ರಣ ಕಾಯ್ದೆ ಪ್ರಕಾರ ರಸ ಗೊಬ್ಬರಗಳು ರೈತರ ಬಳಕೆಗೆ ಯೋಗ್ಯವಾಗಿದಿಯೇ ಎಂದು ಪರಿಶೀಲಿಸಲು ಇಂತಹ ಕ್ರಮ ಕೈಗೊಳ್ಳಲಾಗಿದೆ ಇದರ ಗುಣಮಟ್ಟದ ವರದಿ ಮೂರ್ನಾಲ್ಕು ದಿನಗಳಲ್ಲಿ ಬರಲಿದ್ದು ಯೋಗ್ಯವಾಗಿದೆ ಎಂದು ಬಂದಲ್ಲಿ ರೈತರಿಗೆ ವಿತರಿಸಲು ಕೃಷಿ ಇಲಾಖೆ ತಂಬಾಕು ಮಂಡಳಿಗೆ ಸೂಚನೆ ನೀಡಲಿದೆ ಎಂದರು.

ವಿವಿಧ ಫ್ಲಾಟ್ ಫಾರಂನ ಕಾಫ್ ಕಮಿಟಿಯ ಸದಸ್ಯರಾದ ನಿಂಗೇಗೌಡ, ಕರುಣಾಕರನ್, ರಾಜಶೇಖರ್, ಪ್ರಭಾಕರ್, ಹರಾಜು ಮಾರುಕಟ್ಟೆಯ ಅಧೀಕ್ಷರಾದ ಸಿದ್ದರಾಜು,ಮೀನಾ, ಪ್ರಭಾಕರ್, ಸೇರಿದಂತೆ ಮಂಡಳಿಯ ಸಿಬ್ಬಂದಿ ಹಾಗೂ ಕೃಷಿ ಇಲಾಖೆಯ ಸಿಬ್ಬಂದಿ  ಹಾಜರಿದ್ದರು.

admin
the authoradmin

Leave a Reply

Translate to any language you want