ಹುಣಸೂರು (ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ಶ್ರೀ ಅಂಬೇಡ್ಕರ್ ಯುವಕ ಸಂಘದಿಂದ 135 ನೇ ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ತಾಲೂಕು ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಹಾಗೂ ಉದ್ಯಮಿ ಹರವೆ ಶ್ರೀಧರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡುತ್ತಾ ಡಾ. ಬಿ ಆರ್ ಅಂಬೇಡ್ಕರ್ ಅವರು ತಂದುಕೊಟ್ಟ ಸಂವಿಧಾನದಿಂದ ಈ ದಿನ ಸಮಾನವಾಗಿ ಜಾತಿ ಭೇದವಿಲ್ಲದೆ ವೇದಿಕೆ ಹಂಚಿಕೊಳ್ಳಲು ಸಾಧ್ಯವಾಗಿದೆ.

ನಮ್ಮ ಜೀವನ ಸಾರ್ಥಕವಾಗಬೇಕಾದರೆ ನಾವು ಎಷ್ಟು ಸಂತೋಷವಾಗಿದ್ದೇವೆ ಎಂಬುದು ಮುಖ್ಯವಲ್ಲ ನಮ್ಮ ಜೊತೆ ಇರುವವರು ಎಷ್ಟು ಸಂತೋಷವಾಗಿದ್ದಾರೆ ಎಂಬುದು ಮುಖ್ಯ. ನಮ್ಮ ಹಿಂದೆ ಮುಂದೆ ಇರುವವರು ಸುಖ ಸಂತೋಷದಿಂದ ಇದ್ದಾರೆ ಎಂಬುದು ಮುಖ್ಯ ಇದರಿಂದ ನಮ್ಮ ಜೀವನ ಸುಖಕರವಾಗಿರುತ್ತದೆ ಎಂದು ಡಾ. ಬಿ ಆರ್ ಅಂಬೇಡ್ಕರ್ ಹೇಳಿರುವ ಮಾತನ್ನು ನಾವು ಪಾಲಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದರು.
ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕ ಎಚ್ ಆರ್ ಸುರೇಶ್ ಮಾತನಾಡಿ ದೀನ ದಲಿತರು ಹಿಂದುಳಿದ ಜನರಿಗೆ ಸಮಾನತೆ ಕಲ್ಪಿಸುವ ದೂರ ದೃಷ್ಟಿಯನ್ನು ಹೊಂದಿದ ಮಹಾನ್ ನಾಯಕ ಡಾ. ಬಿ ಆರ್ ಅಂಬೇಡ್ಕರ್ ರವರು ಇಂದಿನ ಯುವಕರು ಇವರ ಬಾಲ್ಯದ ಜೀವನದ ಇತಿಹಾಸವುಳ್ಳ ಪುಸ್ತಕಗಳನ್ನು ಓದಿ ಯುವಕರು ತಮ್ಮ ಇಂದಿನ ಸಮಾಜಕ್ಕೆ ಅವರ ಜೀವನವನ್ನು ಪರಿಚಯಿಸುವಂತಹಾಗಬೇಕು

ಯುವಕರು ಮದ್ಯಪಾನವನ್ನು ತ್ಯಜಿಸುವ ಕಲ್ಪನೆಯನ್ನು ಅಂಬೇಡ್ಕರ್ ಇಟ್ಟುಕೊಂಡಿದ್ದರು ಯುವಕರು ಮದ್ಯ ಸೇವನೆ ಬಿಟ್ಟು ವಿದ್ಯಾಭ್ಯಾಸಕ್ಕೆ ಬೆಲೆಕೊಟ್ಟು ನಿಂತು ಮನಸ್ಸಿನಲ್ಲಿ ಗುರಿಯೊಂದಿಗೆ ಅಂಬೇಡ್ಕರ್ ರವರ ಆದರ್ಶಗಳನ್ನು ಬೆಳಸಿಕೊಂಡಾಗ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ರವಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಮಹೇಶ್ ರಾಮೇಗೌಡ, ಶ್ರೀಧರ್, ಪ್ರಥಮ ದರ್ಜೆ ಗುತ್ತಿಗೆದಾರ ಸತೀಶ್, ಪ್ರೌಢಶಾಲಾ ಶಿಕ್ಷಕ ಕುಬೇರ, ಕಾಳೇಗೌಡ, ತಾಲೂಕು ಜೆಡಿಎಸ್ ಎಸ್ ಸಿ ಘಟಕದ ಮಾಜಿ ಅಧ್ಯಕ್ಷ ಬಸವರಾಜು , ಮುಖಂಡರಾದ ಪಾಪಣ್ಣ, ಮರೂರು ಶಿವರಾಜ್, ಕೆಂದಯ್ಯ, ಕೃಷ್ಣಯ್ಯ, ಪುಟ್ಟರಾಜ್, ಶಿವಯ್ಯ, ಚನ್ನರಸ, ರಾಜಯ್ಯ, ನಂಜಯ್ಯ, ಸೇರಿದಂತೆ ಸಂಘದ ಪದಾಧಿಕಾರಿಗಳು, ಯುವಕರು ಹಾಗೂ ಮಹಿಳೆಯರು ಹಾಜರಿದ್ದರು.








