ಗೋಣಿಕೊಪ್ಪಲು: ಕೊಡಗು ಜಿಲ್ಲೆಯ ವಿವಿಧಡೆಯಲ್ಲಿ ನೆಲೆಸಿರುವ ವೀರ ಮಡಿವಾಳ ಜನಾಂಗದ ಬಾಂಧವರಿಗಾಗಿ ಕ್ರಿಕೆಟ್, ಹಗ್ಗಜಗ್ಗಾಟ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮೇ 9 10 ರಂದು ಗೋಣಿಕೊಪ್ಪದ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಗೋಣಿಕೊಪ್ಪಲಿನ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಕ್ರೀಡಾಕೂಟದ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆ ವೀರ ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ಡಿ.ಪಿ .ರಾಜೇಶ್ ಪದ್ಮನಾಭ ಅವರು ಕ್ರೀಡಾಕೂಟದ ಕುರಿತು ಮಾಹಿತಿ ನೀಡಿದರು.
ಮಡಿವಾಳ ಕ್ರೀಡ ಉತ್ಸವವು ಕೊಡಗು ಜಿಲ್ಲೆಯಲ್ಲಿ ನೆಲಸಿರುವ ಮಡಿವಾಳ ಜನಾಂಗದ ಯುವಕರಿಗಾಗಿ ಏರ್ಪಡಿಸಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ 10 ತಂಡಗಳು ಪಾಲ್ಗೊಳ್ಳಲಿವೆ. ವಿಜೇತ ತಂಡಕ್ಕೆ 20,000 ನಗದು ಬಹುಮಾನ ಹಾಗೂ ಪಾರಿತೋಷಕ, ದ್ವಿತೀಯ ಸ್ಥಾನದ ತಂಡಕ್ಕೆ ಮತ್ತು ಸಾವಿರ ನಗದು ಹಾಗೂ ಪಾರಿತೋಷಕ ನೀಡಲಾಗುವುದು. ಇದೇ ಸಂದರ್ಭ ಮಹಿಳೆಯರಿಗಾಗಿ ಹಗ್ಗ ಜಗ್ಗಾಟ ಸ್ಪರ್ಧೆ ಏರ್ಪಡಿಸಲಾಗಿದ್ದು 6 ತಂಡಗಳು ಭಾಗವಹಿಸಲಿದೆ. ಮಕ್ಕಳಿಗಾಗಿ ಆಟೋ ಹಾಗೂ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಮೇ. 9ರಂದು ಉದ್ಘಾಟನಾ ಕಾರ್ಯಕ್ರಮವನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಅವರ ಕಾನೂನು ಏ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಲಿದ್ದಾರೆ, ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸುಜಾಕುಶಾಲಪ್ಪ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ,ಕೊಡಗು ಜಿಲ್ಲೆಯ ಕಸಾಪ ಅಧ್ಯಕ್ಷರಾದ ಕೇಶವ ಕಾಮತ್, ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಗಣಪತಿ, ಕೊಡವ ಮಡಿವಾಳ ಸಮಾಜದ ಅಧ್ಯಕ್ಷ ಪಾತಂಡ ರಂಜನ್ ಸಂತೋಷ್ ಭಾಗವಹಿಸಲಿದ್ದಾರೆ.

ದಿನಾಂಕ 10 ರಂದು ನಡೆಯುವ ಕ್ರೀಡಾಕೂಟದ ಸಮರೂಪ ಸಮಾರಂಭದಲ್ಲಿ ಮಡಿವಾಳ ಜನಾಂಗದ ಧಾರ್ಮಿಕ ಗುರುಗಳಾದ ಮೂಡಬಿದರೆ ಕರಿಂಜಿ ಮಠದ ಶ್ರೀ. ಮುಕ್ತಾಾನಂದ ಸ್ವಾಮೀಜಿ, ಕರ್ನಾಟಕ ರಾಜ್ಯ ಮಡಿವಾಳರ ಸಂಘದ ಅಧ್ಯಕ್ಷ ಸಿ ನಂಜಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಈ ಸಾಲಿನ ಮುಖ್ಯಮಂತ್ರಿ ಪದಕ ಪ್ರಶಸ್ತಿ ವಿಜೇತ ಪೊಲೀಸ್ ಅಧಿಕಾರಿ ಎಂ.ಜೆ. ದಯಾನಂದ , ಕೊಡಗು ಜಿಲ್ಲೆ ಪೊಲೀಸ್ ಇಲಾಖೆಯಲ್ಲಿ ಜಿಲ್ಲಾ ಪ್ರಶಸ್ತಿ ಪಡೆದಿರುವ ಎಂ.ಡಿ. ಮನು ಕುಮಾರ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸತೀಶ್, ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಸಂಧ್ಯಾ ವೀರಭದ್ರ, ಮಂಡ್ಯ ಜಿಲ್ಲೆಯ ಅರಣ್ಯ ಅಧಿಕಾರಿ ಶೈಲಜಾ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಜನಾಂಗದ ಸಾಧಕರನ್ನು ಸನ್ಮಾನಿಸಲಾಗುವುದು. ಕ್ರೀಡಾಕೂಟದ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಘದ ಕ್ರೀಡಾ ಸಮಿತಿಯ ಸಂಚಾಲಕರುಗಳಾದ ವಿನುಶ್ರೀಜಿತ್, ರತನ್ , ಗಿರಿಜಾ ಪ್ರೇಮ, ಸೇರಿದಂತೆ ಉಪಾಧ್ಯಕ್ಷರಾದ ಗಿರಿಜಾ ಕಾಶಿ, ಕೇಶವ, ಪ್ರಧಾನ ಕಾರ್ಯದರ್ಶಿ ಮಹದೇವ, ಪ್ರಚಾರ ಸಮಿತಿಯ ಅಧ್ಯಕ್ಷ ರವಿಕುಮಾರ್ ಹಾಗೂ ಪದಾಧಿಕಾರಿಗಳಾದ ಗಿರೀಶ್ , ಸತೀಶ್, ರವಿ, ವೇಣು, ದೇವರಾಜ್, ರಮ್ಯಾ ಗಣೇಶ್ ಇನ್ನಿತರರು ಉಪಸ್ಥಿತರಿದ್ದರು








