Job NewsLatest

ವೀರಶೈವ ಸಂಸ್ಕೃತ ವೇದ ಪಾಠಶಾಲೆ, ಉಚಿತ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ

ಬೆಂಗಳೂರು :  ಶ್ರೀಗುರು ಶಿವಪ್ಪಯ್ಯ ಶಿವಯೋಗಿ ಎಜ್ಯೂಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಕಳೆದ 21 ವರ್ಷಗಳಿಂದ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ‘ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳಮಠ’ದಲ್ಲಿ ನಡೆಸುತ್ತಿರುವ ವೀರಶೈವ ಸಂಸ್ಕೃತ ವೇದ ಪಾಠಶಾಲೆಗೆ ಹಾಗೂ ಉಚಿತ ವಿದ್ಯಾರ್ಥಿ ನಿಲಯಕ್ಕೆ 2026-27ರ ಶೈಕ್ಷಣಿಕ ವರ್ಷದ ಪ್ರವೇಶಕ್ಕಾಗಿ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ರಾಜ್ಯದ ಯಾವುದೇ ಜಿಲ್ಲೆಯ ಪ್ರಾಥಮಿಕ 5, 6 ಹಾಗೂ 7ನೆಯ ತರಗತಿ ಪಾಸಾದ ಪ್ರತಿಭಾನ್ವಿತ ಬಡ ಜಂಗಮ ವಿದ್ಯಾರ್ಥಿಗಳು ಪ್ರವೇಶ ಬಯಸಿ ಅರ್ಜಿ ಸಲ್ಲಿಸಬಹುದಾಗಿದೆ.

ಶ್ರೀಮಠದಲ್ಲಿ ಸುಸಜ್ಜಿತ ವಿದ್ಯಾರ್ಥಿನಿಲಯವಿದ್ದು, ಉಚಿತ ವಸತಿ, ಊಟದ(ಪ್ರಸಾದದ) ವ್ಯವಸ್ಥೆಯಿದೆ. ಧಾರ್ಮಿಕ, ವೈದಿಕ ಮತ್ತು ಆಧ್ಯಾತ್ಮಿಕ ಶಿಕ್ಷಣದೊಂದಿಗೆ ಸ್ಥಳೀಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮೂಲಕ ಸಾಂಪ್ರದಾಯಿಕ ಶಾಲಾ ಶಿಕ್ಷಣವನ್ನೂ ನೀಡಲಾಗುವುದು. ರಾಜ್ಯದ ಯಾವುದೇ ಜಿಲ್ಲೆಯ ವೀರಶೈವ ಬಡ ಪ್ರತಿಭಾನ್ವಿತ ಜಂಗಮ ವಿದ್ಯಾರ್ಥಿಗಳು ಮೊಬೈಲ್ ಸಂಖ್ಯೆ: 9845480675,  8660693154 ಕ್ಕೆ ಸಂಪರ್ಕಿಸಿ ತಮ್ಮ ಸಂಪೂರ್ಣ ವೈಯಕ್ತಿಕ ಮಾಹಿತಿಯೊಂದಿಗೆ ‘ಧರ್ಮದರ್ಶಿಗಳು, ಶ್ರೀಗುರುಶಿವಪ್ಪಯ್ಯ ಶಿವಯೋಗಿ ಏಜ್ಯುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ ಉಗರಗೋಳ-591110 ಸವದತ್ತಿ ತಾಲ್ಲೂಕು, ಬೆಳಗಾವಿ ಜಿಲ್ಲೆ’ ಇವರಿಗೆ ಮೇ-23ರ ಒಳಗಾಗಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿ ಪಾಲಕರು ಇಲ್ಲವೇ ಪೋಷಕರು ತಮ್ಮ ಮಕ್ಕಳೊಂದಿಗೆ ಮೇ-24ರಂದು(ರವಿವಾರ) ಮುಂಜಾನೆ 11 ಗಂಟೆಗೆ ಸವದತ್ತಿ ತಾಲೂಕಿನ ಉಗರಗೋಳದ ಶ್ರೀಗುರುಶಿವಪ್ಪಯ್ಯ ಶಿವಯೋಗಿಗಳಮಠದಲ್ಲಿ ಜರುಗುವ ಪ್ರವೇಶ ಪರೀಕ್ಷೆಗೆ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕೆಂದು ಟ್ರಸ್ಟ್ ಧರ್ಮದರ್ಶಿ ಮತ್ತು ನಿವೃತ್ತ ಕೆ.ಎ.ಎಸ್. ಅಧಿಕಾರಿ ಬೆಂಗಳೂರಿನ ಎಂ. ಆರ್. ಹಿರೇಮಠ ತಿಳಿಸಿದ್ದಾರೆ.

admin
the authoradmin

Leave a Reply

Translate to any language you want