LatestNews

ತಾಯಂದಿಯರಿಗೆ ಯಾರೂ ದುಃಖ ಕೊಡಬೇಡಿ:ಬ್ರಹ್ಮಾಕುಮಾರಿ ಶಾರದಾಜೀ

ಗುಂಡ್ಲುಪೇಟೆಯಲ್ಲಿ ತಾಯಂದಿರ ದಿನಾಚರಣೆ

ಗುಂಡ್ಲುಪೇಟೆ: ತಾಯಿ ಇಲ್ಲದೆ ಜಗತ್ತಿಲ್ಲ ಜಗತ್ತಿಲ್ಲದೆ ತಾಯಿ ಇಲ್ಲ ಆದ್ದರಿಂದ ತಾಯಂದಿರಿಗೆ ಯಾರೂ ಎಂದೂ ದುಃಖ ಕೊಡಬೇಡಿ. ದುಃಖ ಕೊಟ್ಟರೆ ದುಃಖದಿಂದ ಸಾಯಬೇಕಾಗುತ್ತದೆ ಎಂದು ಮಂಡ್ಯ ಈಶ್ವರೀಯ ವಿಶ್ವವಿದ್ಯಾಲಯಗಳ ಜಿಲ್ಲಾ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಶಾರದಾಜೀ ಅಭಿಪ್ರಾಯಪಟ್ಟರು.

ಪಟ್ಟಣದ ಶ್ವೇತಾದ್ರಿ ಬಡಾವಣೆಯಲ್ಲಿರುವ ಜ್ಞಾನ ಸೂರ್ಯ ಭವನದಲ್ಲಿ ಏರ್ಪಡಿಸಲಾಗಿದ್ದ ತಾಯಂದಿರ ದಿನಾಚರಣೆಯನ್ನು ಉದ್ಘಾಟಿಸಿ  ಮಾತನಾಡುತ್ತಿದ್ದರು. ಒಂದೇ ಮಾತರಂ ಗಾಯನ ಮಾತೆಯರಿಗೆ ಇದೆ ಹೊರತು ಪುರುಷರಿಗಿಲ್ಲ. ಹಾಗಾಗಿ ಭಗವಂತನು ಸಹ ಮಾತೆಯರಿಗೆ ಜ್ಞಾನದ ಕಳಶವನ್ನು ಕೊಟ್ಟು, ನಾಲ್ಕು ಗೋಡೆ ಮಧ್ಯೆ ನೆಲಗುತ್ತಿದ್ದ ಮಾತೆಯರನ್ನ ವಿಶ್ವದ ಮಾತೆಯರನ್ನಾಗಿ ಮಾಡಿದ್ದಾರೆ ಎಂದು ಅಭಿಪ್ರಾಯ ಪಟ್ಟರು.

ಮನೋಬಲ ತರಬೇತುಧಾರೆ ರಾಜ ಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಮಾತನಾಡಿ ಭಾರತದ ಸನಾತನ ಸಂಸ್ಕೃತಿಯ ಮೂಲ ಬೇರು ಮಾತೆಯಾಗಿದ್ದಾರೆ. ಮಾತೆಯರು ಏನು ಬೇಕಾದರೂ ಮಾಡಲು ಸಾಧ್ಯವಿದೆ. ಆದರೆ ಇಂದು ರಸ್ತೆಗಳು ದೊಡ್ಡದಾಗುತ್ತಿವೆ. ಮನೆಗಳು ದೊಡ್ಡದಾಗುತ್ತಿವೆ. ಕಾಂಪೌಂಡ್ ಗಳು ದೊಡ್ಡದಾಗುತ್ತಿವೆ. ಆದರೆ ಮನಸ್ಸು ಮಾತ್ರಸಂಕುಚಿತವಾಗುತ್ತಿದೆ. ಮನೆಯಲ್ಲಿ ತಂದೆ ತಾಯಿ ಕಂಡ್ರೆ ಮಕ್ಕಳಿಗೆ ಆಗುತ್ತಿಲ್ಲ ಮಕ್ಕಳನ್ನು ಕಂಡರೆ ತಂದೆ ತಾಯಿಗಳಿಗೆ ಆಗುತ್ತಿಲ್ಲ ಕಾರಣ ಮಾತೆಯರು ಆಧ್ಯಾತ್ಮಿಕವಾಗಿ ಸಶಕ್ತಿಕರಣಗೊಳ್ಳುತ್ತಿಲ್ಲ.

ಮನಸ್ಸಿನಲ್ಲಿ ಕಾಮ ಕ್ರೋಧ ಲೋಭಮೋ ಅಹಂಕಾರಗಳು ತಾಂಡವಾಡುತ್ತಿದೆ. ಮನಸೆಂಬ ಹೂದೋಟ ದಿವ್ಯ ಗುಣಗಳೆಂಬ ಹೂಗಳಿಂದ ಸುಶೋಭಿತ ವಾಗುವುದರ ಬದಲು ಮುರಳಿ ದುಃಖ ಕೊಡುವ ಮುಳ್ಳಿನ ಕಾಡೇ ಆವರಿಸಿಕೊಂಡಿದೆ ಎಂದು ವಿಷಾದಿಸಿದರು.

ಗುಂಡ್ಲು ಸುದ್ದಿಯ ವರದಿಗಾರ್ತಿಯರಾದ ತಾರಾ ಮಾತನಾಡಿ ಕುಟುಂಬವೆಂಬುದು ವಿಶ್ವವಿದ್ಯಾಲಯವಿದ್ದಂತೆ ಅದು ಬಹಳ ಒತ್ತಡದಲ್ಲಿರುವುದರಿಂದ ತಾಯಂದಿರಿಗೂ ಸರಿದೂಗಿಸುವುದು ಕಷ್ಟವಾಗುತ್ತಿದೆ. ಅದನ್ನ ಸರಳೀಕರಣ ಮಾಡಿಕೊಳ್ಳುವ ವಿಧಿ ವಿಧಾನವನ್ನು ತಿಳಿಸಿಕೊಡುತ್ತಿರುವ ಈಶ್ವರೀಯ ವಿಶ್ವವಿದ್ಯಾಲಯದ ಕಾರ್ಯ ಶ್ಲಾಘನೀಯವಾದದ್ದು ಎಂದರು. ಆಡ್ ಶಾಪ್ ಕಂಪನಿಯ ತರಬೇತುದಾರರಾದ ಸಂಧ್ಯಾ ಮಾತನಾಡಿ ಆಯುರ್ವೇದದಿಂದ ಹೇಗೆ ಆರೋಗ್ಯಕರ ಜೀವನವನ್ನು ನಡೆಸಬಹುದು. ಮಾತೆಯರು ನ್ಯಾಪ್ಕಿನ್ ಗಳನ್ನ ಹೇಗೆ ಬಳಸಬೇಕು  ಎಂಬ ವಿಧಿ ವಿಧಾನಗಳನ್ನು ತಿಳಿಸಿಕೊಟ್ಟರು.

ಬಿಕೆ ಆರಾಧ್ಯ ಸ್ವಾಗತಿಸಿದರು. ರಾಜಯೋಗಿನಿ ಬ್ರಹ್ಮಾಕುಮಾರಿ ವೀಣಾಜಿ ವಂದಿಸಿದರು. ಕಾರ್ಯಕ್ರಮದಲ್ಲಿ ಹೊಳೆನರಸೀಪುರದ ಸರೋಜಾಜೀ, ಶಾಂಭವೀಜೀ, ವಿಜಿಯಾಜೀ,ಗೌರಿ, ಗಿರಿಜಾ, ರೇಖಾ, ಭಾಗ್ಯ, ಹಾಜರಿದ್ದರು.

admin
the authoradmin

Leave a Reply

Translate to any language you want