CrimeLatestMysore

ಹುಣಸೂರಲ್ಲಿ ಮಳೆಯಿಂದ ರಕ್ಷಿಸಿಕೊಳ್ಳಲು ಮರದಡಿಯಲ್ಲಿ ನಿಂತಿದ್ದ ವೃದ್ಧೆ ಸಿಡಿಲಿಗೆ ಬಲಿ… ಈ ಸಾವು ನ್ಯಾಯವೇ…

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಮುಂಗಾರು ಪೂರ್ವ ಮಳೆ ಭಾರೀ ಅನಾಹುತಗಳನ್ನು ಸೃಷ್ಟಿ ಮಾಡುತ್ತಿರುವುದಲ್ಲದೆ ಹಲವರ ಪ್ರಾಣವನ್ನು ಬಲಿ ಪಡೆದಿದೆ. ಈಗಾಗಲೇ ಮೈಸೂರು ಜಿಲ್ಲೆಯಲ್ಲಿ ಸಿಡಿಲಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ. ಇದೀಗ ಸಿಡಿಲು ಬಡಿದು ವೃದ್ದೆಯೊಬ್ಬರು ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕಿನ ಹೊಸಪುರದಲ್ಲಿ ಬುಧವಾರ ಸಂಜೆ ನಡೆದಿದೆ

ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯಹೊಸಪುರ ಗ್ರಾಮದ 65 ವರ್ಷ ವಯಸ್ಸಿನ ಯಶೋಧಮ್ಮ  ಮೃತಪಟ್ಟವರು. ಪತಿ ಹಾಗೂ ಇಬ್ಬರು‌ಹೆಣ್ಣು ಮಕ್ಕಳಿದ್ದಾರೆ. ಯಶೋದಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದ ವೇಳೆ ಒಮ್ಮೆಲೆ ಮೋಡ ಕವಿದು ಬಿರುಗಾಳಿಯೊಂದಿಗೆ ಮಳೆ ಆರಂಭವಾಗಿದೆ.  ಕುಟುಂಬದವರು ಹಾಗೂ ಕೆಲಸ ಮಾಡುತ್ತಿದ್ದ ಕಾರ್ಮಿಕರೊಂದಿಗೆ  ಜಮೀನಿನಲ್ಲಿದ್ದ ಮರದ ಬುಡದಲ್ಲಿ  ಆಶ್ರಯ ಪಡೆದಿದ್ದರು. ಈ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ಇತ್ತು ಪರಿಶೀಲಿಸಿದರು.

ಶವವನ್ನು ಬಿಳಿಕೆರೆ ಆರೋಗ್ಯ ಕೇಂದ್ರದಲ್ಲಿ  ಮರಣೋತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಇನ್ಸ್ ಪೆಕ್ಟರ್ ಪುನಿತ್ ತಿಳಿಸಿದ್ದಾರೆ.

ಪಿರಿಯಾಪಟ್ಟಣದಲ್ಲಿ ಗುಡುಗು ಸಿಡಿಲು ತಂದ ದುರಂತ… ಮಹಿಳೆ, ಎರಡು ಹಸುಗಳು ಬಲಿ.. ಆಗಿದ್ದೇನು?

admin
the authoradmin

Leave a Reply

Translate to any language you want