LatestMysore

ಮೈಸೂರು ಜಿಲ್ಲಾ ಮಡಿವಾಳರ ಸಂಘದ ಜಿಲ್ಲಾಧ್ಯಕ್ಷರಾಗಿ ಧರ್ಮರಾಜ್ ಅವಿರೋಧ ಆಯ್ಕೆ

ಮಡಿವಾಳರ ಸಂಘದ ರಾಜ್ಯಾಧ್ಯಕ್ಷ ಸಿ ನಂಜಪ್ಪ ಘೋಷಣೆ

ಮೈಸೂರು(ರಾಜೇಶ್ ಎಂ ಎನ್): ನಗರದ ಜಲದರ್ಶಿನಿ ಗೆಸ್ಟ್ ಹೌಸ್ ನಲ್ಲಿ ಕರ್ನಾಟಕ ರಾಜ್ಯ ಮಡಿವಾಳ ಸಂಘದ ವತಿಯಿಂದ ಮೈಸೂರು ಜಿಲ್ಲೆಯ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸಭೆಯನ್ನು ರಾಜ್ಯಾಧ್ಯಕ್ಷ ಸಿ ನಂಜಪ್ಪ ಅವರ ನೇತೃತ್ವ ದಲ್ಲಿ ಮೈಸೂರು ಜಿಲ್ಲೆಯ ತಾಲ್ಲೂಕುಗಳ ಅಧ್ಯಕ್ಷರು ಕಾರ್ಯದರ್ಶಿಗಳ ಹಾಗೂ ಮುಖಂಡರ ಸಮ್ಮುಖದಲ್ಲಿ ನಡೆಸಲಾಯಿತು

ಸಭೆಯಲ್ಲಿ ಜಿಲ್ಲೆಯ ಪದಾಧಿಕಾರಿಗಳು ಹಾಗೂ ಮುಖಂಡರ ಅಭಿಪ್ರಾಯ ಪಡೆದು ಎಲ್ಲರ ಸಮ್ಮುಖದಲ್ಲಿ ಅವಿರೋಧವಾಗಿ ಕೆ ಆರ್ ನಗರ ತಾಲ್ಲೂಕಿನ ಧರ್ಮರಾಜ್ ಅವರನ್ನು ಮೈಸೂರು ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷರಾಗಿ ರಾಜ್ಯಾಧ್ಯಕ್ಷ ಸಿ ನಂಜಪ್ಪ ಘೋಷಣೆ ಮಾಡಿದರು.

ಆ ನಂತರ ಕರ್ನಾಟಕ ರಾಜ್ಯ ಮಡಿವಾಳರ ಸಂಘದ ರಾಜ್ಯದ್ಯಕ್ಷ ಸಿ ನಂಜಪ್ಪ ಮಾತನಾಡಿ ಈ ದಿನ ಸಮಾಜದ ಸಂಘಟನೆ ದೃಷ್ಟಿಯಿಂದ ಸರ್ವಾನು ಮತದಿಂದ ಅವಿರೋಧವಾಗಿ ಧರ್ಮರಾಜ್ ಅವರನ್ನು ಆಯ್ಕೆ ಮಾಡಲಾಗಿದೆ ಮೈಸೂರು ಜಿಲ್ಲೆ ವ್ಯಾಪ್ತಿಯ ಎಲ್ಲ ತಾಲೂಕುಗಳಲ್ಲೂ ಸಮಾಜದ ಸಂಘಟನೆ ಮತ್ತಷ್ಟು ಬಲಪಡಿಸಬೇಕು ಸಮುದಾಯದವರ ಕಷ್ಟ ಸುಖಗಳಿಗೆ ಸ್ಪಂದಿಸಬೇಕು ಎಂದು ತಿಳಿಸಿದರು.

ನೂತನ ಮೈಸೂರು ಜಿಲ್ಲಾ ಮಡಿವಾಳರ ಸಂಘದ ಕೆ ಆರ್ ನಗರ ಧರ್ಮರಾಜ್ ಮಾತನಾಡಿ ನಾನು ಮಾತನಾಡುವುದಿಲ್ಲ ಕೆಲಸ ಮಾಡಿ ತೋರಿಸುತ್ತೇನೆ ಸಂಘಕ್ಕಾಗಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಸಮಾಜವನ್ನು ಮತ್ತಷ್ಟು ಸಂಘಟಿಸುತ್ತೇನೆ, ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಡಿವಾಳರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ರಾಜ್ಯ ಗೌರವಾಧ್ಯಕ್ಷ ಈರಣ್ಣ, ಉಪಾಧ್ಯಕ್ಷ ರಾಜಣ್ಣ, ಎಸ್ ಸಿ ಹೊರಟ ಸಮಿತಿಯ ರಾಜ್ಯಾಧ್ಯಕ್ಷ ಸಿದ್ದಗಂಗಯ್ಯ, ನಂಜನಗೂಡು ತಾಲೂಕು ಅಧ್ಯಕ್ಷ ಪ್ರಸನ್ನ, ಬಸವರಾಜು, ಎಚ್ ಡಿ ಕೋಟೆ ತಾಲೂಕು ಅಧ್ಯಕ್ಷ ಎಲೆಹುಡಿ ಚಂದ್ರ ಶೆಟ್ಟಿ, ಹೇಮಂತ್, ಟಿ ನರಸೀಪುರ ತಾಲೂಕು ಅಧ್ಯಕ್ಷ ಮಹದೇವಸ್ವಾಮಿ, ಅರುಣ್ ಕುಮಾರ್.

ಮೈಸೂರು ತಾ ಅಧ್ಯಕ್ಷ ಜಯರಾಮ್, ಮಹೇಶ್, ಮೈಸೂರು ನಗರ ಅಧ್ಯಕ್ಷ ವರುಣ ಮಹದೇವ್, ನಂಜುಂಡಯ್ಯ, ಹುಣಸೂರು ತಾಲೂಕು ಅಧ್ಯಕ್ಷ ಶಂಕರ್, ನಾಗಪ್ಪ ಶೆಟ್ಟಿ, ಸರಗೂರು ತಾಲೂಕು ಅಧ್ಯಕ್ಷ ಧರಣೇಶ್, ವೆಂಕಟೇಶ್, ಪಿರಿಯಾಪಟ್ಟಣ ಅಧ್ಯಕ್ಷ ಮಾದೇಶ್, ವೆಂಕಟೇಶ್, ಸಾಲಿಗ್ರಾಮ ಅಧ್ಯಕ್ಷ ಉಮೇಶ್, ಹರೀಶ್, ಮೈಸೂರು ಜಿಲ್ಲಾ ಜೆಡಿಎಸ್ ಮಹಿಳೆ ಅಧ್ಯಕ್ಷ ದ್ರಾಕ್ಷಾಯಿಣಿ, ಮುಖಂಡರಾದ ಸಿದ್ದಪ್ಪಾಜಿ, ರಮೇಶ್ ಕೋಟೆ, ಭೈರ್ಯ ಹರೀಶ್, ಚೌಡ ಶೆಟ್ಟಿ, ಸಣ್ಣ ಸ್ವಾಮಿ, ನಾಗರಾಜ್, ಹಾಗೂ ಮಡಿವಾಳ ಸಮಾಜದ ಮುಖಂಡರು ಉಪಸ್ಥಿತರಿದ್ದರು.

admin
the authoradmin

Leave a Reply

Translate to any language you want