ಸಾಹಿತಿ ಕುಮಾರಕವಿ ಬಿ.ಎನ್ ನಟರಾಜ್ ಸೇರಿ 16 ಮಂದಿ ಸಾಧಕರಿಗೆ ಕಸ್ತೂರಿ ಸಿರಿರತ್ನ ಪ್ರಶಸ್ತಿ
ಜೂನ್ 14ರಂದು ಮಂಡ್ಯದಲ್ಲಿ ಪ್ರಶಸ್ತಿ ಪ್ರದಾನ


ಮಂಡ್ಯ: ಕಸ್ತೂರಿ ಸಿರಿಗನ್ನಡ ವೇದಿಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಕಸ್ತೂರಿ ಸಿರಿರತ್ನ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು 2025-26ನೇ ಸಾಲಿನಲ್ಲಿ ಸುಮಾರು 16 ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದ್ದು ಅವರ ಪೈಕಿ ಹಿರಿಯ ಸಾಹಿತಿಗಳು, ಜನಮನಕನ್ನಡದ ಅಂಕಣಕಾರರೂ ಆಗಿರುವ ಕುಮಾರಕವಿ ಬಿ.ಎನ್ ನಟರಾಜ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗುತ್ತಿರುವುದು ಹೆಮ್ಮೆಯ ವಿಷಯ… ಅವರಿಗೆ ಜನಮನಕನ್ನಡ ಬಳಗ ಶುಭ ಹಾರೈಸುತ್ತಿದೆ.

ಉಳಿದಂತೆ ಮಂಡ್ಯದ ಗಂಟಲು ತಜ್ಞ ಡಾ. ಕೆ ಬಿ ಶಿವಕುಮಾರ್, ಕೀಲಾರದ ಶಿಕ್ಷಕ ಕೆ ನಾಗರಾಜು, ಹೊನಗಾನಹಳ್ಳಿ ಶಿಕ್ಷಕ ಕೆ ಮಹದೇವು, ಮಂಡ್ಯದ ನಿವೃತ್ತ ಶಿಕ್ಷಕ ವೀರಪ್ಪ ಕೀಲಾರ, ಶಿಕ್ಷಕಿ ಹೆಚ್.ಆರ್.ಜಯಮ್ಮ, ನಿವೃತ್ತ ಶುಶ್ರೂಷಕಿ ಬಿ ಎನ್ ವಸಂತ ನಾಗಲಿಂಗೇಗೌಡ, ನಾಟಿ ವೈದ್ಯೆ ಕೆ ಟಿ ಲಕ್ಷ್ಮಮ್ಮ, ಮೈಸೂರಿನ ಸಮಾಜ ಸೇವಕಿ ಶ್ರೀಮತಿ ಚೋಂದಮ್ಮ ಪೂಣಚ್ಚ, ಕೆಆರ್ ಪೇಟೆ ಶಿಕ್ಷಕಿ ಟಿ ಜೆ ವಿಮಲ, ಗೋಣಿಕೊಪ್ಪದ ಮನೋವಿಜ್ಞಾನಿ ಕೆ ಜಿ ಪುಟ್ಟರಾಜು, ಕ್ಯಾತನಹಳ್ಳಿ ಯೋಗ ಶಿಕ್ಷಕ ಕೆ.ಎಸ್.ಭಾನುಕುಮಾರ್, ಮಳವಳ್ಳಿ ನಿ. ಮುಖ್ಯಶಿಕ್ಷಕ ವಿ.ಎಲ್ ಬಸವರಾಜು, ಬೆಂಗಳೂರಿನ ಕ್ರೀಡಾಪಟು ಎಂ ರಾಜಗೋಪಾಲ್, ಮಂಡ್ಯದ ಸಮಾಜ ಸೇವಕ ಚಿಕ್ಕಚನ್ನಯ್ಯ, ಮಂಡ್ಯದ ಅರ್ಚಕ ಕೆ.ಆರ್ ಬಸವರಾಜು ಮೊದಲಾದವರು ಪ್ರಶಸ್ತಿಗೆ ಬಾಜನರಾಗಿದ್ದಾರೆ.

2025-26ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅಂಕವೀರ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿ ಪುರಸ್ಕೃತರಿಗೆ ಜೂನ್ 14ರಂದು ಮಂಡ್ಯದ ಸೇವಾಕಿರಣ ವೃದ್ದಾಶ್ರಮದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.

ಅಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಷಬ್ರ ಮುಮ್ಮಡಿ ಷಡಕ್ಷರ ದೇಶೀಕೇಂದ್ರ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಮಾಜ ಸೇವಕ ಆರ್ ಯೋಗಾನಂದ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಿವೃತ್ತ ಪ್ರಾಂಶುಪಾಲ ಹಾಗೂ ಸೇವಾಕಿರಣ ವೃದ್ಧಾಶ್ರಮದ ಟ್ರಸ್ಟಿ ಜಿ ವಿ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಡ್ಯದ ಮಾನಸಿಕ ನರರೋಗ ತಜ್ಞ ಡಾ.ಟಿ ಎಸ್ ಸತ್ಯನಾರಾಯಣರಾವ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕಸ್ತೂರಿ ಸಿರಿಗನ್ನಡ ರಾಜ್ಯಾಧ್ಯಕ್ಷ ಪೊತೇರ ಮಹದೇವು, ಡಾ ಹೆಚ್ ಸಿ ಆನಂದ್, ಡಾ ಹೆಚ್ ಆರ್ ಕನ್ನಿಕಾ, ಕಿರಣ್ ರಾಮಲಿಂಗೇಗೌಡ, ಶ್ರೀಮತಿ ಸುಜಾತ ಕೃಷ್ಣ, ಶ್ರೀಮತಿ ಹೇಮಾ ನಂದೀಶ್, ಕೆ ಮಂಜುಳ ರಮೇಶ್, ಹೆಚ್.ಈ ರಮೇಶ್ ಉಪಸ್ಥಿತರಿರುವರು.







