LatestMysore

ನೆನೆಗುದಿಗೆ ಬಿದ್ದಿರುವ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ದೊರಕಿಸಿಕೊಡಲು ಮನವಿ

ಮೈಸೂರು:  ಕನ್ನಡ ಕ್ರಿಯಾ ಸಮಿತಿಯ ಪದಾಧಿಕಾರಿಗಳು, ಸಮಿತಿಯು ಅಧ್ಯಕ್ಷರಾದ  ಮ ಗು ಸದಾನಂದಯ್ಯ ರವರ ನೇತೃತ್ವದಲ್ಲಿ ಭಾರತೀಯ ಭಾಷಾ ಸಂಸ್ಥಾನದ ನೂತನ  ನಿರ್ದೇಶಕರಾದ ಡಾ.ಬಸವರಾಜುರವರನ್ನು ಭೇಟಿ ಮಾಡಿ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ದೊರಕಿಸಿಕೊಡುವ  ಬಗ್ಗೆ ಹಾಗೂ ಕನ್ನಡ ಭಾಷಾ ಸಂಶೋಧನೆಗೆ ಹೆಚ್ಚಿನ ಒತ್ತು ನೀಡುವ ಮತ್ತಿತರ ವಿಷಯಗಳ ಬಗ್ಗೆ ಮನವಿ ಸಲ್ಲಿಸಲಾಯಿತಲ್ಲದೆ, ನಿರ್ದಿಷ್ಟ ಕಾಲಮಿತಿಯಲ್ಲಿ    ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ ನೀಡಲಾಯಿತು.

ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್, ಡಾ. ಕಾಳೇಗೌಡ  ನಾಗವಾರ, ಬಾಲಕೃಷ್ಣ  ಪ್ರೊ.ಕಾಳ ಚನ್ನೇಗೌಡ, ಡಾ..ಜಯಪ್ಪ ಹೊನ್ನಾಳಿ, ಡಾ. ವಿನೋದಮ್ಮ,  ಪಂಡಿತಾರಾಧ್ಯ ಅರವಿಂದ ಶರ್ಮ,   ಜಿ ಪ್ರಕಾಶ್,  ನಂ. ಸಿದ್ದಪ್ಪ, ಮೈ ನಾ ಲೋಕೇಶ್, ಸ್ವಾಮಿ, ನಂದೀಶ,  ಲೋಕೇಶಪ್ಪ ಶ್ರೀಮತಿ ಸವಿತಾ ಪ. ಮಲ್ಲೇಶ್. ಹೊರೆಯಲ ದೊರೆ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಮನವಿ ಸ್ವೀಕರಿಸಿ, ಅಹವಾಲು ಆಲಿಸಿದ ನಿರ್ದೇಶಕರು, ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿ ಆದಷ್ಟು ಶೀಘ್ರವಾಗಿ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

admin
the authoradmin

Leave a Reply

Translate to any language you want