ಹಿರೀಕ್ಯಾತನಹಳ್ಳಿಗೆ ಶಾಸಕ ಜಿ.ಡಿ ಹರೀಶ್ ಗೌಡ ಪತ್ನಿ ವರ್ಷಾ ಹರೀಶ್ ಗೌಡ ಭೇಟಿ; ಸಂತ್ರಸ್ತರಿಗೆ ಸಾಂತ್ವನ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮಕ್ಕೆ ಶಾಸಕ ಜಿ.ಡಿ ಹರೀಶ್ ಗೌಡ ಪತ್ನಿ ವರ್ಷಾ ಹರೀಶ್ ಗೌಡ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿದರು.
ಈ ವೇಳೆ ಮಾತನಾಡಿ ಗ್ರಾಮಕ್ಕೆ ಶಾಸಕರು ಹಲವಾರು ಭೇಟಿ ನೀಡಿ ಗ್ರಾಮದ ಸಮಸ್ಯೆ ಹಾಗೂ ಹಲವಾರು ಕಾಮಗಾರಿಗಳಿಗೆ ಬಗ್ಗೆ ಈಗಾಗಲೇ ಯೋಜನೆ ರೂಪಿಸುತ್ತಿದ್ದು ಮತ್ತಷ್ಟು ಗ್ರಾಮದ ಅಭಿವೃದ್ಧಿಗೆ ಬೇಕಾಗಿರುವ ಕೆಲಸ ಕಾರ್ಯಗಳ ಬಗ್ಗೆ ಕಾರ್ಯಕರ್ತರನ್ನು ಭೇಟಿ ಮಾಡುವುದರ ಜೊತೆಗೆ ಗ್ರಾಮದಲ್ಲಿ ಹಲವಾರು ಬಡ ಕುಟುಂಬಗಳು ಮಳೆ ಬಿರುಗಾಳಿಗೆ ಮನೆಯ ಶೀಟ್ ಹಾಗೂ ಇತ್ತೀಚೆಗೆ ಸುಮಾರು ಎರಡು ಲಕ್ಷ ರೂಪಾಯಿ ಬೆಲೆ ಬಾಳುವ ಆಕಸ್ಮಿಕ ಬೆಂಕಿಯಿಂದ ಗೋವಿನ ಮೇವನ್ನು ಕಳೆದುಕೊಂಡ ಕುಟುಂಬಗಳನ್ನು ಭೇಟಿ ಮಾಡಿ ಸಮಸ್ಯೆಯನ್ನು ಆಲಿಸಿ ಅವರಿಗೆ ಧೈರ್ಯ ತುಂಬಿ ಅವರಿಗೆ ವೈಯಕ್ತಿಕವಾಗಿ ಧನ ಸಹಾಯ ಮಾಡಿದರು.

ಜೊತೆಗೆ ವಿವಿಧ ಸಮಾಜದ ರೈತರು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಿರುವ ಬಗೆ ಮಾಹಿತಿಯನ್ನು ಪಡೆದು ಮುಂದಿನ ಬಾರಿ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಗ್ರಾಮದ ರೈತರನ್ನು ಪರಿಗಣಿಸಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.
ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಸುರೇಂದ್ರ, ಮಹಾ ಪ್ರಧಾನ ಕಾರ್ಯದರ್ಶಿ ಹರವೆ ಶ್ರೀಧರ್, ತಾಲೂಕು ಜೆಡಿಎಸ್ ಪಕ್ಷದ ಮುಖಂಡರಾದ ಸತೀಶ್ ಪಾಪಣ್ಣ, ನಾಗೇಶ್, ಸಿ.ಡಿ. ರಘು, ಮಹದೇಶ್, ಹರೀಶ್, ಮಹಾದೇವ, ವೆಂಕಟೇಶ್, ಆನಂದ, ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.







