LatestMysore

ಹೆಚ್.ಸಿ ಮಹದೇವಪ್ಪ ರಿಗೆ ಸಚಿವ ಸ್ಥಾನ ನೀಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

ಯಳಂದೂರು(ನಾಗರಾಜ ವೈಕೆ ಮೋಳೆ): ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ದಲಿತ ಸಮುದಾಯದ ಪ್ರಶ್ನಾತೀತ ನಾಯಕ ಅಂದ್ರೆ ಅದು ಡಾ.ಹೆಚ್ .ಸಿ.ಮಹದೇವಪ್ಪ ಅವರಿಗೆ ಸಚಿವ ಸ್ಥಾನ ನೀಡುವಂತೆ ಡಾ. ಎಚ್ ಸಿ ಮಹದೇವಪ್ಪ ಅಭಿಮಾನಿ ಬಳಗ ಆಗ್ರಹಿಸಿದೆ.

ಯಳಂದೂರು  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹದೇವಪ್ಪ ಅಭಿಮಾನಿ ಬಳಗದ ಅಧ್ಯಕ್ಷ ಒಡಗೆರೆ ಡಾ.ಮಹದೇವ್ ಅವರು, ರಾಜ್ಯದಲ್ಲಿ ದಲಿತ ಸಮುದಾಯದ ಪ್ರಶ್ನಾತೀತ ನಾಯಕ ಅಂದ್ರೆ ಅದು ಡಾ.ಹೆಚ್ ಸಿ.ಮಹದೇವಪ್ಪ. ಅವರಿಗೆ ಮುಖ್ಯಮಂತ್ರಿ  ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ರಚನೆಯಾಗಿರುವ ಸರ್ಕಾರದಲ್ಲಿ ಮಂತ್ರಿ ಸ್ಥಾನ ನೀಡಬೇಕೆಂದು ರಾಜ್ಯದ ಉದ್ದಗಲಕ್ಕೆ ಪ್ರತಿಭಟನೆ ಮಾಡಲಾಗಿದೆ

ಒಂದು ವೇಳೆ ಮುಂಬರುವ ಸಚಿವ ಸಂಪುಟದಲ್ಲಿ ಮಹದೇವಪ್ಪರಿಗೆ ಮಂತ್ರಿ ಸ್ಥಾನ ನೀಡದಿದ್ದಲ್ಲಿ ಕಾಂಗ್ರೆಸ್ ಸರ್ಕಾರ ಅದಕ್ಕೆ ತಕ್ಕ ಬೆಲೆ ತರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಹೆಚ್ ಸಿ ಮಹದೇವಪ್ಪ ಅಭಿಮಾನಿ ಬಳಗದ ಸದಸ್ಯರಾದ ವೈ‌.ಕೆ.ಮೋಳೆ ಪರಶಿವಮೂರ್ತಿ, ಮದ್ದೂರು ಚಕ್ರವರ್ತಿ, ನಾರಾಯಣ, ಹೆಗ್ಗೋಡಿಪುರ ಆನಂದ್, ಇರಸವಾಡಿ ಜಾನಿ, ಸುರೇಶ್ ಶಿವು, ಗೌಡ ಹಳ್ಳಿ ಚಂದ್ರು, ಮರಿಸ್ವಾಮಿ, ಹೊನ್ನೂರು ಹರೀಶ್, ಸುರೇಶ್, ಮಲ್ಲಿಕಾರ್ಜುನ, ರಘು ಕುಮಾರ್, ರವಿಕುಮಾರ್, ಮಹದೆವಸ್ವಾಮಿ ಮುಂತಾದವರು ಹಾಜರಿದ್ದರು

admin
the authoradmin

Leave a Reply

Translate to any language you want