LatestMysore

ಜನರಿಂದ ಓಟಿನ ಹಕ್ಕು ಕಿತ್ತುಕೊಳ್ಳಲು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ: ದೊಡ್ಡಸ್ವಾಮೇಗೌಡ

ಕೆ.ಆರ್.ನಗರ(ಸಂಘಟನೆ ಮಂಜುನಾಥ್):  ಈ ದೇಶದ ನಾಗರಿಕರಿoದ ಓಟಿನ ಹಕ್ಕು ಕಿತ್ತುಕೊಳ್ಳಲು ಕಾಗ್ರೆಸ್ ಪಕ್ಷ ಬಿಡುವುದಿಲ್ಲ ಎಂದು ಎಂಸಿಡಿಸಿಸಿ ಬ್ಯಾoಕ್ ಅಧ್ಯಕ್ಷ ದೊಡ್ಡಸ್ವಾಮೆಗೌಡ ಹೇಳಿದರು.

ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದ ತೋಟದ ಮನೆಯಲ್ಲಿ ಮತಪಟ್ಟಿ ಪರಿಷ್ಕರಣೆ ಜಾಗೃತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಉದ್ದೇಶಿಸಿ ಮಾತನಾಡಿ, ದೇಶದ ಜನತೆಯೊಂದಿಗೆ ಕಾoಗ್ರೇಸ್ ಪಕ್ಷ ಎಂದಿಗೂ ಜೊತೆಗಿರುತ್ತದೆ ಧೈರ್ಯ ಗೆಡಬೇಡಿ ಎಂದು ಹೇಳಿದರು.

ಮತದಾರರ ಪಟ್ಟಿಯಿಂದ ಮತದಾರರ ಕೈಬಿಡುವ ಕೆಲಸ ಮಾಡಿ ಓಟು ಕಿತ್ತುಕೊಳ್ಳುವ, ಜನರಿಗೆ ಅನಗತ್ಯವಾಗಿ ತೊಂದರೆ ಕೊಡುವ ಎಸ್ ಐಆರ್ ನ್ನು ಬಿಜೆಪಿ ಕುಮ್ಮಕ್ಕಿನಿಂದ ಚುನಾವಣಾ ಆಯೋಗವು ಆರoಬಿಸಿದೆ. ಆದರೆ ಈ ದೇಶದ ಒಬ್ಬ ನಾಗರಿಕರ ಓಟು ಹೋಗಲು ಬಿಡುವುದಿಲ್ಲ. ಪಕ್ಷದ ಮುಖoಡರು ಮತ್ತ್ತು ಕಾರ್ಯಕರ್ತರು ಬಿಎಲ್ಓ ಗಳ ಜೊತೆಗಿದ್ದು ಮತದಾರರ ಹೆಸರು ಕೈಬಿಡದoತೆ ಎಚರಿಕೆ ವಹಿಸುವoತೆ ಹೇಳಿದರು. ಶಾಸಕ ಡಿ.ರವಿಶಂಕರ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಇದೇ ಸಂದರ್ಭದಲ್ಲಿ ಮತಪಟ್ಟಿ ಪರಿಷ್ಕರಣೆಯ ಬಗ್ಗೆ ಜಾಗೃತಿ ಕರ್ಣಾಟಕ ತಂಡದಿಂದ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಹದೇವ್, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ನಗರಾಧ್ಯಕ್ಷ ಎಂಜೆ ರಮೇಶ್, ವಕ್ತಾರ ಸೈಯದ್ ಜಾಬೀರ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಚೀರನಹಳ್ಳಿ ಶಿವಣ್ಣ, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಪ್ರಸನ್ನಕದಂ, ಹೊಸೂರು ಡೈರಿ ಮಾದು.

ಹೆಬ್ಬಾಳ ಪರಶುರಾಮ್, ಪ್ರಭಾಕರ, ಪಿ ಎಲ್ ಡಿ  ಬ್ಯಾಂಕ್ ಮಾಜಿ ಅಧ್ಯಕ್ಷರಾದ ಎನ್‌ ಸಿ ಪ್ರಸಾದ್, ಚಂದ್ರಹಾಸ ಚಂದ್ರೇಗೌಡ, ರಮೇಶ್ ಕಲಾವತಿ, ಹೆಬ್ಬಾಳು ಸೋಮಣ್ಣ,  ಹಾಗೂ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನಿಂದ ಆಗಮಿಸಿದ್ದ ಪಕ್ಷದ ಮುಖಂಡರು ಕಾರ್ಯಕರ್ತರು ಮತ್ತಿತರರು ಪಾಲ್ಗೊಂಡಿದ್ದರು.

admin
the authoradmin

Leave a Reply

Translate to any language you want