LatestLife style

ಸುಧಾರಿತ ಹೃದಯದ ಆರೈಕೆಗಾಗಿ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯಲ್ಲಿ ಎರಡನೇ ಕ್ಯಾಥ್ ಲ್ಯಾಬ್ ಆರಂಭ

ಬೆಂಗಳೂರು: ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯು ತನ್ನ ಎರಡನೇ ಕ್ಯಾಥಟರೈಸೇಷನ್ ಲ್ಯಾಬೊರೇಟರಿ (ಕ್ಯಾಥ್ ಲ್ಯಾಬ್)ಗೆ ನಿಯೋಜಿಸಿದ್ದು ಸಕಾಲಿಕ ಹೃದಯ ಚಿಕಿತ್ಸೆಗಳನ್ನು ನೀಡಲು ಮತ್ತು ಬೆಂಗಳೂರು ಹಾಗೂ ನೆರೆಹೊರೆಯ ಜಿಲ್ಲೆಗಳಲ್ಲಿ ಹೃದಯದ ಪರಿಣಿತ ಆರೈಕೆಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ತನ್ನ ಸಾಮರ್ಥ್ಯ ವಿಸ್ತರಿಸಲಿದೆ.

ಈ ಹೊಸ ಕ್ಯಾಥ್ ಲ್ಯಾಬ್ ಅನ್ನು ಖ್ಯಾತ ಹೃದ್ರೋಗ ತಜ್ಞ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ.ಸಿ.ಎನ್. ಮಂಜುನಾಥ್ ಉದ್ಘಾಟಿಸಿದರು. ಅವರೊಂದಿಗೆ ಆಸ್ಪತ್ರೆಯ ಕಾರ್ಡಿಯಾಕ್ ಸೈನ್ಸ್ ತಂಡದ ಹಿರಿಯ ತಜ್ಞರು ಉಪಸ್ಥಿತರಿದ್ದರು, ಅವರೊಂದಿಗೆ ಕರ್ನಾಟಕ ಪ್ರದೇಶದ ಅಪೋಲೋ ಹಾಸ್ಪಿಟಲ್ಸ್ ಸಿಇಒ ಶ್ರೀ ಅಕ್ಷಯ್ ಓಲೇಟಿ ಹಾಗೂ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷ ಶ್ರೀ ಉದಯ್ ದಾವ್ಡಾ ಉಪಸ್ಥಿತರಿದ್ದರು.

ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯು ಪ್ರಸ್ತುತ ವಾರ್ಷಿಕ 4,000ಕ್ಕೂ ಹೆಚ್ಚು ಹೃದಯರೋಗದ ಪ್ರಕರಣಗಳನ್ನು ನಿರ್ವಹಿಸಬಲ್ಲದು. 2015ರಲ್ಲಿ ಅನುಷ್ಠಾನಗೊಳಿಸಲಾದ ಆಸ್ಪತ್ರೆಯ ಮೊದಲ ಕ್ಯಾಥ್ ಲ್ಯಾಬ್ 27,000ಕ್ಕೂ ಹೆಚ್ಚು ಪ್ರಕ್ರಿಯೆಗಳನ್ನು ನಿರ್ವಹಿಸುತ್ತಿದ್ದು ಅದು ತುರ್ತು ಹಾಗೂ ಯೋಜಿತ ಹೃದಯ ಚಿಕಿತ್ಸೆಗಳನ್ನು ದಿನಪೂರ್ತಿ ನೀಡುತ್ತಿದೆ.

ಎರಡನೇ ಕ್ಯಾಥ್ ಲ್ಯಾಬ್ ನೊಂದಿಗೆ ಈ ಆಸ್ಪತ್ರೆಯು ಪ್ರತಿ ತಿಂಗಳೂ ಸುಮಾರು 200 ಹೆಚ್ಚುವರಿ ಚಿಕಿತ್ಸೆಗಳನ್ನು ನಿರ್ವಹಿಸಲು ಶಕ್ತವಾಗಿದ್ದು ಇದರ ಸಾಮರ್ಥ್ಯವನ್ನು ತಿಂಗಳಿಗೆ ಸುಮಾರು 500 ಪ್ರಕ್ರಿಯೆಗಳಿಗೆ ಕೊಂಡೊಯ್ಯುತ್ತದೆ. ಈ ವಿಸ್ತರಣೆಯು ಪ್ರತಿ ವರ್ಷ 3,000 ಹೆಚ್ಚುವರಿ  ರೋಗಿಗಳಿಗೆ ಅನುಕೂಲ ಕಲ್ಪಿಸುವ ನಿರೀಕ್ಷೆ ಇದೆ.

ಹೊಸದಾಗಿ ಅನುಷ್ಠಾನ ಮಾಡಲಾದ ಸೌಲಭ್ಯವು ಜಿಇ ಅಲ್ಲಿಯಾ ಪ್ಲಾಟ್ ಫಾರಂನೊಂದಿಗೆ ಸನ್ನದ್ಧವಾಗಿದ್ದು ಅದು ಸಂಕೀರ್ಣ ಪ್ರಕ್ರಿಯೆಗಳಿಗೆ ಬೆಂಬಲಿಸುವ ಸುಧಾರಿತ ಫ್ಯೂಷನ್ ಇಮೇಜಿಂಗ್ ತಂತ್ರಜ್ಞಾನನ್ನು ಒದಗಿಸುತ್ತದೆ ಅಲ್ಲದೆ ರೇಡಿಯೇಷನ್ ಪ್ರಭಾವ ಮತ್ತು ಕಾಂಟ್ರಾಸ್ಟ್ ಬಳಕೆ ಕಡಿಮೆ ಮಾಡುತ್ತದೆ. ಈ ವ್ಯವಸ್ಥೆಯನ್ನು ಇಂಟರ್ವೆನ್ಷನಲ್ ಕಾರ್ಡಿಯಾಲಜಿ, ಸ್ಟ್ರಕ್ಚರಲ್ ಹಾರ್ಟ್ ಡಿಸೀಸ್, ಎಲೆಕ್ಟ್ರೊಫಿಸಿಯಾಲಜಿ, ವ್ಯಾಸ್ಕುಲರ್ ಇಂಟರ್ವೆನ್ಷನ್ಸ್, ನ್ಯೂರೋ ಇಂಟರ್ವೆನ್ಷನ್ ಮತ್ತು ಪೀಡಿಯಾಟ್ರಿಕ್ ಕಾರ್ಡಿಯಾಲಜಿಯಲ್ಲಿ ಬಳಸಲಾಗುತ್ತದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಖ್ಯಾತ ಹೃದ್ರೋಗ ತಜ್ಞ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಸಂಸದರಾದ ಡಾ. ಸಿ.ಎನ್. ಮಂಜುನಾಥ್, “ಹೃದಯದ ತುರ್ತು ಪರಿಸ್ಥಿತಿಗಳಲ್ಲಿ ಪ್ರತಿ ನಿಮಿಷವೂ ಮುಖ್ಯವಾಗಿರುತ್ತದೆ. ಚಿಕಿತ್ಸೆಯಲ್ಲಿ ತಡವಾಗುವುದು ಫಲಿತಾಂಶಗಳ ಮೇಲೆ ಅಪಾರ ಪರಿಣಾಮ ಬೀರುತ್ತದೆ, ಆದ್ದರಿಂದಲೇ ಕ್ಯಾಥ್ ಲ್ಯಾಬ್ ಮೂಲಸೌಕರ್ಯ ವಿಸ್ತರಣೆಯು ಮುಖ್ಯವಾಗಿದೆ.

ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯಲ್ಲಿ ಎರಡನೇ ಕ್ಯಾಥ್ ಲ್ಯಾಬ್ ನಿಯೋಜನೆಯು ಬೆಂಗಳೂರಿನಲ್ಲಿ ಸುಧಾರಿತ ಹೃದಯರೋಗ ಮತ್ತು ನಾಳೀಯ ಸಮಸ್ಯೆಗಳ ಚಿಕಿತ್ಸೆಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನೆರವಾಗಲಿದೆ” ಎಂದರು.

ಈ ಸಂದರ್ಭ ಕುರಿತು ಮಾತನಾಡಿದ ಕರ್ನಾಟಕ ಪ್ರದೇಶದ ಅಪೋಲೋ ಹಾಸ್ಪಿಟಲ್ಸ್ ಸಿಇಒ ಶ್ರೀ ಅಕ್ಷಯ್ ಓಲೇಟಿ, “ಹಲವು ವರ್ಷಗಳಿಂದ ಸುಧಾರಿತ ಮಧ್ಯಪ್ರವೇಶಗಳಿಗೆ ಬೇಡಿಕೆ ಕ್ರಮೇಣ ಹೆಚ್ಚಾಗುತ್ತಿದೆ. ಎರಡನೇ ಕ್ಯಾಥ್ ಲ್ಯಾಬ್ ನಾವು ಹೆಚ್ಚು ರೋಗಿಗಳಿಗೆ ಅವಕಾಶ ಕಲ್ಪಿಸುವಲ್ಲಿ , ವೇಳಾಪಟ್ಟಿಯ ಮಿತಿಗಳಿಲ್ಲದೆ ಸಂಕೀರ್ಣ ಪ್ರಕ್ರಿಯೆಗಳನ್ನು ಕೈಗೊಳ್ಳುವ ಮತ್ತು ತುರ್ತು ಪರಿಸ್ಥಿತಿಯಲ್ಲಿ ವೇಗದಲ್ಲಿ ಪ್ರತಿಕ್ರಿಯಿಸಲು ಪ್ರಾಯೋಗಿಕ ಹೆಜ್ಜೆಯಾಗಿದೆ. ಇದು ಕರ್ನಾಟಕದಾದ್ಯಂತ ಪರಿಣಿತ ಆರೈಕೆ ಸೇವೆಗಳನ್ನು ಸದೃಢಗೊಳಿಸುವಲ್ಲಿ ನಮ್ಮ ಮುಂದುವರಿದ ಹೂಡಿಕೆಯನ್ನು ಕೂಡಾ ಬಿಂಬಿಸುತ್ತದೆ” ಎಂದರು.

ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷ ಶ್ರೀ ಉದಯ್ ದಾವ್ಡೆ, “ಹೃದಯದ ತುರ್ತು ಪರಿಸ್ಥಿತಿಗಳು ಮುಂಚೆಯೇ ತಿಳಿಸಿ ಬರುವುದಲ್ಲ. ತುರ್ತು ಪ್ರಕರಣಗಳು ಬರುವುದು, ರೆಫರಲ್ ಗಳು ಮತ್ತು ನಿಗದಿ ವೇಳಾಪಟ್ಟಿ ಒಂದೇ ಅವಧಿಯಲ್ಲಿ ಬಂದು ಗೊಂದಲವಾಗುವ ಸಂದರ್ಭಗಳಿವೆ. ಹೆಚ್ಚುವರಿ ಕ್ಯಾಥ್  ಲ್ಯಾಬ್ ನಮಗೆ ಅಂತಹ ಸನ್ನಿವೇಶಗಳನ್ನು ದಕ್ಷತೆಯಿಂದ ನಿರ್ವಹಿಸಲು ಮತ್ತು ನಮ್ಮ ವೈದ್ಯರ ತಂಡಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸುತ್ತದೆ. ರೋಗಿಗಳಿಗೆ ಇದರ ಅರ್ಥ ಚಿಕಿತ್ಸೆಗೆ ತ್ವರಿತ ಲಭ್ಯತೆ ಮತ್ತು ಕಾಯುವ ಅವಧಿ ಕಡಿಮೆಯಾಗುತ್ತದೆ” ಎಂದರು.

ಈ ವಿಸ್ತರಿಸಿದ ಸೌಲಭ್ಯವು ಸಂಕೀರ್ಣ ಕರೋನರಿ ಇಂಟರ್ವೆನ್ಷನ್ಸ್, ಸ್ಟ್ರಕ್ಚರಲ್ ಹಾರ್ಟ್ಪ್ರೊಸೀಜರ್ಸ್, ಸುಧಾರಿತ ಎಲೆಕ್ಟ್ರೊಫಿಸಿಯಾಲಜಿ ಪ್ರೊಸೀಜರ್ಸ್, ಪೆರಿಫೆರಲ್ ವ್ಯಾಸ್ಕುಲರ್ ಇಂಟರ್ವೆನ್ಷನ್ಸ್, ನ್ಯೂರೋ-ಇಂಟರ್ವೆನ್ಷನನ್ ಪ್ರೊಸೀಜರ್ಸ್ ಮತ್ತು ಪೀಡಿಯಾಟ್ರಿಕ್ ಕಾರ್ಡಿಯಾಕ್ ಇಂಟರ್ವೆನ್ಷನ್ ಒಳಗೊಂಡು ವಿಸ್ತಾರ ಶ್ರೇಣಿಯ ಚಿಕಿತ್ಸೆಗಳಿಗೆ ಬೆಂಬಲಿಸುತ್ತದೆ.

ಹೃದಯ ವಿಜ್ಞಾನಗಳ ತಂಡವನ್ನು ಡಾ. ಬಿ.ಸಿ. ಶ್ರೀನಿವಾಸ್, ಡಾ. ಜಯರಂಗನಾಥ್ ಎಂ., ಡಾ. ಶ್ರೀನಿವಾಸ್ ಕೆ.ಎಚ್., ಡಾ.ವಿಕ್ರಮ್ ಬ. ಕೊಲ್ಹಾರಿ, ಡಾ. ಸೋಮಶೇಖರ್ ಸಿ.ಎಂ., ಡಾ.ರೂಪಾ ಆರ್., ಡಾ. ಮನೋಜ್ ಕುಮಾರ್ ಎಸ್.ಪಿ., ಡಾ.ಆನಂದ್ ಸುಬ್ರಮಣ್ಯಂ ಮತ್ತು ಡಾ. ಶಶಿಧರ್ ಕೆ.ಪಿ., “ಕ್ಯಾಥ್ ಲ್ಯಾಬ್ ಗಳಲ್ಲಿ ನಡೆಸುವ ಚಿಕಿತ್ಸೆಗಳ ವ್ಯಾಪ್ತಿಯು ಕಳೆದ ಕೆಲ ವರ್ಷಗಳಿಂದ ಗಮನಾರ್ಹವಾಗಿ ವಿಸ್ತರಿಸಿದೆ. ಹೊಸ ವ್ಯವಸ್ಥೆಯು ಸುಧಾರಿತ ಇಮೇಜಿಂಗ್ ಗುಣಮಟ್ಟ ಸುಧಾರಿಸುವುದಲ್ಲದೆ ಸಂಕೀರ್ಣ ಚಿಕಿತ್ಸೆಗಳಲ್ಲಿ ರೇಡಿಯೇಷನ್ ಮತ್ತು ಕಾಂಟ್ರಾಸ್ಟ್ ಬಳಕೆಗೆ ತೆರೆದುಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ಅಷ್ಟೇ ಮುಖ್ಯವಾದುದು ಹೆಚ್ಚುವರಿ ಕ್ಯಾಥ್ ಲ್ಯಾಬ್ ನಮಗೆ ತುರ್ತು ರೋಗಿಗಳಿಗೆ ವೇಗದ ಪ್ರತಿಕ್ರಿಯೆಯ ಸಮಯ ನೀಡುವುದಲ್ಲದೆ ನಿಗದಿತ ವೇಳಾಪಟ್ಟಿಯ ಚಿಕಿತ್ಸೆಗಳನ್ನು ಅಡೆತಡೆ ಇಲ್ಲದೆ ನಿರ್ವಹಿಸಲು ಸಾಧ್ಯವಾಗುತ್ತದೆ” ಎಂದರು.

ಎರಡನೇ ಕ್ಯಾಥ್ ಲ್ಯಾಬ್ ನಿಂದ ತಕ್ಷಣದ ಅನುಕೂಲಗಳಲ್ಲಿ ಒಂದೆಂದರೆ ತುರ್ತು ರೋಗಿಗಳಿಗೆ ಸುಧಾರಿತ ಲಭ್ಯತೆ. ಹೆಚ್ಚುವರಿ ಸೌಲಭ್ಯವು ತೀವ್ರ ಹೃದಯದ ಸಮಸ್ಯೆಯಿಂದ ಬರುವ ರೋಗಿಗಳಿಗೆ ತಡ ಮಾಡದೆ ಚಿಕಿತ್ಸೆಗೆ ಕೊಂಡೊಯ್ಯಲು ಸಾಧ್ಯವಾಗುವುದಲ್ಲದೆ ಆಯ್ದ ಚಿಕಿತ್ಸೆಗಳಿಗೆ ಕಾಯುವ ಅವಧಿಗಳನ್ನು ಕಡಿಮೆ ಮಾಡುತ್ತದೆ.

ಈ ತಂತ್ರಜ್ಞಾನವು ಪೀಡಿಯಾಟ್ರಿಕ್ ರೋಗಿಗಳಿಗೆ ಹೆಚ್ಚು ಉಪಯುಕ್ತವಾಗಿದೆ. ಹಿಂದಿನ ತಲೆಮಾರಿನ ಸಿಸ್ಟಂಗೆ ಹೋಲಿಸಿದರೆ ಈ ಹೊಸ ಪ್ಲಾಟ್ ಫಾರಂ ರೇಡಿಯೇಷನ್ ಪ್ರಭಾವವನ್ನು “50 ಶೇಕಡಾವಾರು” ಕಡಿಮೆ ಮಾಡುತ್ತದೆ, ಇದು ಸಂಕೀರ್ಣ ಮಧ್ಯಪ್ರವೇಶಗಳು ಅಗತ್ಯವಿರುವ ಹಾಗೂ ಚಿಕಿತ್ಸೆಯ ಸಂದರ್ಭದಲ್ಲಿ ಫಾಲೋ-ಅಪ್ ಇಮೇಜಿಂಗ್ ಅಗತ್ಯವಿರುವ ಮಕ್ಕಳಿಗೆ ಬಹಳ ಉಪಯುಕ್ತವಾಗಿದೆ.

ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯು 200 ಹಾಸಿಗೆಗಳ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಾಗಿದೆ ಮತ್ತು ಪ್ರಸ್ತುತ 350 ಹಾಸಿಗೆಗಳಿಗೆ ವಿಸ್ತರಿಸುತ್ತಿದೆ. ಈ ಎರಡನೇ ಕ್ಯಾಥ್ ಲ್ಯಾಬ್ ಸೇರ್ಪಡೆಯು ಆಸ್ಪತ್ರೆಯ ಹೃದಯ ವಿಜ್ಞಾನಗಳ ಕಾರ್ಯಕ್ರಮವನ್ನು ಮತ್ತಷ್ಟು ಸದೃಢಗೊಳಿಸಿದೆ ಮತ್ತು ಕಾರ್ಡಿಯಾಲಜಿ, ಕಾರ್ಡಿಯೋಥೆರೋಸಿಕ್ ಸರ್ಜರಿ, ವ್ಯಾಸ್ಕುಲರ್ ಸರ್ಜರಿ ಮತ್ತು ಸಂಬಂಧಿಸಿದ ಸ್ಪೆಷಾಲಿಟಿಗಳಲ್ಲಿ ಸಮಗ್ರ ಆರೈಕೆ ನೀಡುವ ಸಾಮರ್ಥ್ಯ ಹೆಚ್ಚಿಸಿದೆ.

admin
the authoradmin

Leave a Reply

Translate to any language you want