ಭಾರತೀಯ ವಾಯುಪಡೆಯಲ್ಲಿ (IAF) ಅಗ್ನಿವೀರ್ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವವರು ವಿಜ್ಞಾನ ವಿಭಾಗ (Science Subjects): 10+2 / ದ್ವಿತೀಯ ಪಿಯುಸಿ (ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್) ವಿಷಯಗಳಲ್ಲಿ ಕನಿಷ್ಠ ಶೇ.50ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು ಮತ್ತು ಇಂಗ್ಲಿಷ್‌ನಲ್ಲಿ ಕಡ್ಡಾಯವಾಗಿ ಶೇ.50ರಷ್ಟು ಅಂಕ ಪಡೆದಿರಬೇಕು. ಅಥವಾ 3 ವರ್ಷಗಳ ಇಂಜಿನಿಯರಿಂಗ್ ಡಿಪ್ಲೊಮಾ ಮುಗಿಸಿರಬೇಕು.
ಇತರ ವಿಭಾಗಕ್ಕೆ ಯಾವುದೇ ವಿಭಾಗದಲ್ಲಿ (ಆರ್ಟ್ಸ್ / ಕಾಮರ್ಸ್ / ಸೈನ್ಸ್) 10+2 / ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟಾರೆ ಕನಿಷ್ಠ ಶೇ.50ರಷ್ಟು ಅಂಕ ಮತ್ತು ಇಂಗ್ಲಿಷ್ ವಿಷಯದಲ್ಲಿ ಶೇ.50ರಷ್ಟು ಅಂಕಗಳೊಂದಿಗೆ ಪಾಸ್ ಆಗಿರಬೇಕು. ವಯೋಮಿತಿ: 17.5 ರಿಂದ 22 ವರ್ಷಗಳೊಳಗೆ ಅಂದರೆ (ಜುಲೈ 1, 2005 ಮತ್ತು ಜನವರಿ 1, 2010 ರ ನಡುವೆ ಜನಿಸಿರಬೇಕು)
ದೇಹದಾರ್ಢ್ಯ: ಕನಿಷ್ಠ ಎತ್ತರ (Height): ಪುರುಷರು: 152.5 ಸೆಂ.ಮೀ | ಮಹಿಳೆಯರು: 152 ಸೆಂ.ಮೀ ಇರಬೇಕು. ಅರ್ಜಿಯನ್ನು ಸಲ್ಲಿಸಲು ಕಡೆ ದಿನಾಂಕ: ಜುಲೈ 26, 2026 (ರಾತ್ರಿ 11:00 ಗಂಟೆಯವರೆಗೆ), ಆನ್‌ಲೈನ್ ಪರೀಕ್ಷೆ ನಡೆಯುವ ದಿನಾಂಕ: ಸೆಪ್ಟೆಂಬರ್ 22 ಮತ್ತು 23, 2026
ದೈಹಿಕ ಸಾಮರ್ಥ್ಯ ಪರೀಕ್ಷೆ ಯಲ್ಲಿ 1.6 ಕಿ.ಮೀ ಓಟವನ್ನು ಪುರುಷರು 7 ನಿಮಿಷಗಳಲ್ಲಿ ಹಾಗೂ ಮಹಿಳೆಯರು 8 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಇದರೊಂದಿಗೆ ಪುಶ್-ಅಪ್ಸ್, ಸಿಟ್-ಅಪ್ಸ್ ಮತ್ತು ಸ್ಕ್ವಾಟ್ಸ್ ಪರೀಕ್ಷೆಗಳಿರುತ್ತವೆ. ಎಲ್ಲಾ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು (General/OBC/EWS/SC/ST): ₹550 + 18% GST) ಆನ್‌ಲೈನ್ ಮೂಲಕ ಪಾವತಿಸಬೇಕು).
ಆಯ್ಕೆ ಪ್ರಕ್ರಿಯೆ: ಮೂರು ಹಂತದಲ್ಲಿ ನಡೆಯಲಿದ್ದು, ಮೊದಲ ಹಂತ: ಆನ್‌ಲೈನ್ ಲಿಖಿತ ಪರೀಕ್ಷೆ (Online Written Exam), ಎರಡನೇ ಹಂತ: ದೈಹಿಕ ಸಾಮರ್ಥ್ಯ ಪರೀಕ್ಷೆ (PFT) ಮತ್ತು ಅಡಾಪ್ಟೆಬಿಲಿಟಿ ಟೆಸ್ಟ್, ಮೂರನೇ ಹಂತ: ವೈದ್ಯಕೀಯ ತಪಾಸಣೆ (Medical Examination) ಮೂಲಕ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಭಾರತೀಯ ವಾಯುಪಡೆಯ ಅಧಿಕೃತ ಜಾಲತಾಣವಾದ agnipathvayu.cdac.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ.








