LatestMysore

ಕಾಳೇನಹಳ್ಳಿ  ಪೌರಕಾರ್ಮಿಕರ ಮನೆ ಸಮಸ್ಯೆ ಪರಿಹರಿಸಲು ಶಾಸಕ ಡಿ.ರವಿಶಂಕರ್ ಕ್ರಮ

 ಕೆ.ಆರ್.ನಗರ(ಜಿಟೆಕ್ ಶಂಕರ್): ತಾಲೂಕಿನ ಕಾಳೇನಹಳ್ಳಿ ಸರ್ವೆ ನಂಬರ್ 265ರಲ್ಲಿ ಪೌರಕಾರ್ಮಿಕರು ನಿರ್ಮಾಣ ಮಾಡಿಕೊಂಡಿರುವ ಮನೆಗಳನ್ನು ಮಾಲೀಕರಿಂದ ಬಿಡಿಸಿಕೊಟ್ಟು ಅವರಿಗೆ ಸರ್ಕಾರದ ವತಿಯಿಂದ ಪರಿಹಾರ ಕೊಡಿಸಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದರು.

ಕಾಳೇನಹಳ್ಳಿಯ ಪೌರಕಾರ್ಮಿಕರ ಮನೆಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ನಂತರ ಮಾತನಾಡಿದ ಅವರು ಸಮಸ್ಯೆ ಸದರಿ ಜಮೀನಿನಲ್ಲಿರುವ 18 ಮನೆಗಳನ್ನು ಪ್ರಸ್ತುತ ಇರುವವರಿಗೆ ಕೊಡಿಸುತ್ತೇನೆ ಎಂದರು.

ನಂತರ ಜಮೀನಿನ ಮಾಲೀಕ ಮುಕುಂದರಾವ್ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಜಮೀನಿನ ಒಟ್ಟು ವಿಸ್ತೀರ್ಣವನ್ನು ನಿಯಮಾನುಸಾರ ಅಳತೆ ಮಾಡಿ 6 ಎಕರೆ ಜಮೀನಿನ ಪೈಕಿ ಅದರಲ್ಲಿ 26 ಗುಂಟೆ ಜಮೀನನ್ನು ಬಿಟ್ಟುಕೊಡುವಂತೆ ಮಾಲೀಕರಿಗೆ ಮನವಿ ಸಲ್ಲಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡುವಂತೆ ಕೋರಿದರು.

ಇದಕ್ಕೆ ಪೂರಕವಾಗಿ ಸ್ಪಂದಿಸಿದ ಮಾಲೀಕರು ತಮಗೆ ಸರ್ಕಾರದ ವತಿಯಿಂದ ಪರಿಹಾರದ ಹಣವನ್ನು ನೀಡಿದರೆ ಅದನ್ನು ಮನೆ ನಿರ್ಮಾಣ ಮಾಡಿಕೊಂಡಿರುವವರಿಗೆ ನೀಡುವುದಾಗಿ ಸಕಾರಾತ್ಮಕವಾಗಿ ಸ್ಪಂದಿಸಿದರು. ನಂತರ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಜಮೀನಿನೆ ಸಂಬಂಧಿಸಿದ ದಾಖಲೆಗಳನ್ನು ಸರಿಪಡಿಸುವುದಾಗಿ ಸೂಚಿಸಿದ ಶಾಸಕರು ಈ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರು.

ತಾ.ಪಂ.ಇಒ ವಿ.ಪಿ.ಕುಲದೀಪ್, ರಾಜಸ್ವ ನಿರೀಕ್ಷ ಶಶಿಕುಮಾರ್,  ಎಡಿಎಲ್ ಆರ್ ಶ್ರೀಕಂಠಶರ್ಮ, ಭೂಮಾಕ ಕುಮಾರ್ , ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ರಾಜು, ತಾಲೂಕು ಅಧ್ಯಕ್ಷ ನಂಜುಂಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ವಕ್ತಾರ ಸೈಯದ್ ಜಾಬೀರ್, ದೊಡ್ಡೇಕೊಪ್ಪಲು ಗ್ರಾ.ಪಂ.ಮಾಜಿ ಅಧ್ಯಕ್ಷರುಗಳಾದ ಕೆ.ಪಿ.ಜಗದೀಶ್, ಬಲರಾಮು,  ಮಾಜಿ ಸದಸ್ಯ ಜಯರಾಮು,  ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶಂಕರ್, ತಾಲೂಕು ಬಗರ್ ಹುಕುಂ ಸಮಿತಿ ಸದಸ್ಯ ಅಪ್ಪಾಜಿಗೌಡ,  ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ಪಿ‌.ಪ್ರಶಾಂತ್, ಮುಖಂಡರಾದ ರಾಮಚಾರಿ, ಹೆಚ್.ಹೆಚ್.ನಾಗೇಂದ್ರ, ಎಂ.ಟಿ.ರಾಜೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

admin
the authoradmin

Leave a Reply