ಕೆ ಆರ್ ನಗರ(ಸಂಘಟನೆ ಮಂಜುನಾಥ್): ತಾಲೂಕು ವ್ಯವಸಾಯೋತ್ಪನ ಮಾರಾಟ ಸಹಕಾರ ಸಂಘ.ನಿ (ಟಿಎಪಿಸಿಎoಎಸ್ ) ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆ ರಂಗೇರಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದ್ದು ನಿರ್ದೇಶಕರ ಸ್ಥಾನದ ಆಕಾಂಕ್ಷಿಗಳು ಇದೀಗ ನಾಮಪತ್ರ ಸಲ್ಲಿಸುತ್ತಿದ್ದಾರೆ.
ಇದೀಗ ಬಿ ವರ್ಗ ದಿಂದ ಗ್ರಾಹಕರ ಮಂಡಳಿ ಮಾಜಿ ನಿರ್ದೇಶಕ ಹೊಸೂರು ಎಸ್ ಟಿ ಕೀರ್ತಿ ಸಹಾಯಕ ಚುನಾವಣಾ ಅಧಿಕಾರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ಇದೇ ವೇಳೆ ಅವರೊಂದಿಗೆ ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ದಾಮೋದರ್ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಹೆಚ್ಆರ್ ಕೃಷ್ಣಮೂರ್ತಿ, ಎಚ್ಎಸ್ ಜಗದೀಶ್, ಶ್ರೀರಾಂಪುರ ಪ್ರಸನ್ನ, ಹೆಬ್ಬಾಳು ಬಾಲು ಗ್ರಾ ಪಂ ಮಾಜಿ ಉಪಾಧ್ಯಕ್ಷ ಕುಪ್ಪೆ ನವೀನ್, ಮಾಜಿ ಸದಸ್ಯ ಮಧು ಕುಮಾರ್ (ಮದಿ) ಜತೆಗಿದ್ದರು.

ಟಿಎಪಿಸಿಎoಎಸ್ ನಿರ್ದೇಶಕ ಸ್ಥಾನದ ಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದು, ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಒಟ್ಟಾರೆ ಚುನಾವಣೆ ಕುತೂಹಲಕಾರಿಯಾಗಿದೆ.








