LatestState

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಮಂಡ್ಯದ ಜಿಲ್ಲಾಧ್ಯಕ್ಷರಾಗಿ ಚಂದ್ರು ಮಂಡ್ಯ ನೇಮಕ

ಮಂಡ್ಯ: ನಾಡಿನ ಪ್ರತಿಷ್ಠಿತ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಸಂಘಟನೆಯಾದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು ಕಳೆದೊಂದು ದಶಕದಿಂದ ಕರ್ನಾಟಕ ರಾಜ್ಯದ ಉದ್ದಗಲ ಮಾತ್ರವಲ್ಲದೆ, ಹೊರ ರಾಜ್ಯಗಳಲ್ಲೂ ಸಕ್ರಿಯಾಗಿ ಕಾರ್ಯೋನ್ಮುಖವಾಗಿದ್ದು, ವೇದಿಕೆಯ ಮಂಡ್ಯ ಜಿಲ್ಲಾ ಘಟಕವನ್ನು ನೂತನವಾಗಿ ಆರಂಭಿಸಲಾಗುತ್ತಿದ್ದು, ಇದರ ಪ್ರಪ್ರಥಮ ಅಧ್ಯಕ್ಷರಾಗಿ ಮದ್ದೂರು ತಾಲ್ಲೂಕಿನ ಮಲ್ಲನಕುಪ್ಪೆಯ ರಂಗಕರ್ಮಿ ಹಾಗೂ ಸಂಘಟಕ ಚಂದ್ರು ಮಂಡ್ಯ ಅವರನ್ನು ಸಂಘನೆಯ ರಾಜ್ಯಾಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ ಅವರ ಅನುಮೋದನೆಯ ಮೇರೆಗೆ ನೇಮಕ ಮಾಡಲಾಗಿದೆ ಎಂದು ವೇದಿಕೆಯ ರಾಜ್ಯ ಉಪಾಧ್ಯಕ್ಷ ಟಿ. ಸತೀಶ್ ಜವರೇಗೌಡ ತಿಳಿಸಿದ್ದಾರೆ.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ನಿಯಮಗಳಿಗೆ ಅನುಗುಣವಾಗಿ ಜಿಲ್ಲಾ ಘಟಕಗಳಿಗೆ ಅರ್ಹ ಪದಾಧಿಕಾರಿಗಳನ್ನೂ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಘಟಕಗಳನ್ನು ಆರಂಭಿಸಿ, ಅವುಗಳಿಗೆ ಸಮರ್ಥ ಪದಾಧಿಕಾರಿಗಳನ್ನು ನೇಮಿಸಿ, ಉತ್ತಮ ಗುಣಮಟ್ಟದ ಅರ್ಥಪೂರ್ಣ ಸಾಹಿತ್ಯಾತ್ಮಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಯಶಸ್ವಿಯಾಗಿ ನಡೆಸುವಂತೆ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ಚಂದ್ರು ಮಂಡ್ಯ ಅವರಿಗೆ ರಾಜ್ಯಾಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅವರು ನೇಮಕಾತಿ ಪತ್ರದಲ್ಲಿ ಸೂಚಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸಜಗೌ ಅವರು ತಿಳಿಸಿದ್ದಾರೆ.

admin
the authoradmin

Leave a Reply