ಯಳಂದೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಯಳಂದೂರು ತಾಲ್ಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಭಾನುವಾರ ಪಟ್ಟಣದ ಶ್ರೀ ವಾಲ್ಮೀಕಿ ಸಮುದಾಯ ಭವನದಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ಕಾರ್ಯಕ್ರಮವನ್ನು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಉದ್ಘಾಟಿಸಿ ಮಾತನಾಡಿದ ಅವರು ಪತ್ರಿಕಾರಂಗದ ಜವಾಬ್ದಾರಿ, ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ಪಾತ್ರ ಹಾಗೂ ಗ್ರಾಮೀಣ ಭಾಗದ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಮತ್ತು ಸರ್ಕಾರದ ಗಮನಕ್ಕೆ ತರುವಲ್ಲಿ ಪತ್ರಕರ್ತರ ಹೊಣೆಗಾರಿಕೆ ಕುರಿತು ಮಾತನಾಡಿದರು.ಪತ್ರಕರ್ತರ ಭವನಕ್ಕೆ ನಿವೇಶನವನ್ನು ಬೇಗ ಮಾಡಿಸಿಕೊಡುವುದಾಗಿ ತಿಳಿಸಿದರು.
ಮಾಜಿ ಸಚಿವರಾದ ಎನ್. ಮಹೇಶ್ ರವರು ಮಾತನಾಡಿ ಪತ್ರಿಕೆಗಳು ಕೇವಲ ಸುದ್ದಿಯನ್ನು ನೀಡುವ ಮಾಧ್ಯಮವಾಗಿರದೆ, ಸಮಾಜದ ಆಗುಹೋಗುಗಳನ್ನು ದಾಖಲಿಸುವ ಹಾಗೂ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಪ್ರಮುಖ ವೇದಿಕೆಯಾಗಿವೆ. ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳ ನಡುವೆ ಸುದ್ದಿಯ ನಿಖರತೆ, ವಸ್ತುನಿಷ್ಠತೆ ಹಾಗೂ ಸಾಮಾಜಿಕ ಹೊಣೆಗಾರಿಕೆಗೆ ಪತ್ರಕರ್ತರು ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಸಂಘದ ಜಿಲ್ಲಾಧ್ಯಕ್ಷರು ಆರ್. ಎನ್ ಸಿದ್ದಲಿಂಗಸ್ವಾಮಿ ಆಶಯ ನುಡಿಗಳನ್ನು ಹಾಡಿದರು. ಸಂಘದ ಯಳಂದೂರು ತಾಲ್ಲೂಕು ಘಟಕದ ಅಧ್ಯಕ್ಷ ವಿ. ನಾಗರಾಜು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಆರ್. ಮಹೇಂದ್ರ ಕೋಮಾರನಪುರ, ಡಾ.ವೈ ಎಂ.ಶ್ರೀಕಂಠಮೂರ್ತಿ, ಡಾ.ಆರ್. ನಂಜುಂಡಯ್ಯ, ವೈ ಜಿ ನಿರಂಜನ್ ಸ್ವಾಮಿ, ಡಿ ಪಿ ಶಂಕರ್, ರಂಗಸ್ವಾಮಿ ರವರನ್ನು ಸನ್ಮಾನಿಸಲಾಯಿತು. ಇದೆ ಸಂದರ್ಭದಲ್ಲಿ ಅನಾರೋಗ್ಯ ಒಳಗಾಗಿದ ರಂಗಸ್ವಾಮಿಗೆ ಜಿಲ್ಲಾ ಸಂಘದಿಂದ ಧನ ಸಹಾಯ ಮಾಡಿದರು.
ಪತ್ರಿಕಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮವು ಪತ್ರಿಕಾರಂಗದ ಸಾಮಾಜಿಕ ಜವಾಬ್ದಾರಿಯನ್ನು ಮತ್ತೊಮ್ಮೆ ನೆನಪಿಸುವಂತಾಗಿದ್ದು, ಪತ್ರಕರ್ತರು ಜನಪರವಾಗಿ ಹಾಗೂ ವಸ್ತುನಿಷ್ಠವಾಗಿ ಕಾರ್ಯನಿರ್ವಹಿಸುವ ಸಂಕಲ್ಪದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಕೂರು ಪ್ರಸಾದ್, ರಾಜ್ಯ ಸಮಿತಿ ಸದಸ್ಯರು ಸಿ. ಮಹೇಂದ್ರ,ಕೊಳ್ಳೇಗಾಲ ವಿಧಾನ ಸಭಾ ಕ್ಷೆತ್ರದ ಜೆಡಿಎಸ್ ಅಧ್ಯಕ್ಷರು ಬಿ. ಪುಟ್ಟಸ್ವಾಮಿ,ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರು ಅಮ್ಮನಪುರ ಮಹೇಶ್, ಗ್ಯಾರಂಟಿ ಯೋಜನೆ ತಾಲ್ಲೂಕು ಅಧ್ಯಕ್ಷರು ಪ್ರಭುಪ್ರಸಾದ್, ಬಿಳಿಗಿರಿರಂಗನ ಬೆಟ್ಟದ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಗುಂಬಳ್ಳಿ ರಾಜಣ್ಣ, ಗುತ್ತಿಗೆದಾರ ಓಲೆ ಮಹಾದೇವ, ರೋಟರಿ ಕ್ಲಬ್ ಅಧ್ಯಕ್ಷರು ರಿತೇಶ್, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬೂದಂಬಳ್ಳಿ ಗಿರೀಶ್,

ಉಪಾಧ್ಯಕ್ಷರು ಗುಂಬಳ್ಳಿ ನಾಗೇಂದ್ರ, ಖಜಾಂಚಿ ಇರ್ಪನ್, ಸಹ ಕಾರ್ಯದರ್ಶಿ ಪ್ರಸನ್ನ ಕೆಸ್ತೂರು, ಜಿಲ್ಲಾ ಕಾರ್ಯದರ್ಶಿ ಯರಿಯೂರು ನಾಗೇಂದ್ರ, ಜಿಲ್ಲಾ ನಿರ್ದೇಶಕರು ಭಾನುಪ್ರಕಾಶ್, ತಾಲ್ಲೂಕು ನಿರ್ದೇಶಕರು ವೈ ಕೆ ಮೋಳೆ ನಾಗರಾಜು, ಮದ್ದೂರು ಮಂಜು, ಮುಷರಪ್, ರಾಜಶೇಖರ್ ಕೋಮಾರನಪುರ, ಮಣಿಕಂಠನಾಯಕ ಸದಸ್ಯರು ಡಿ ಪಿ ಶಂಕರ್, ಗಣಿಗನೂರು ಚಿನ್ನಸ್ವಾಮಿ, ರಂಗಸ್ವಾಮಿ,ಯುವ ಮುಖಂಡರು ಕೆಸ್ತೂರು ರಾಜೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.








