LatestMysore

ರಾಜ್ಯದಲ್ಲಿ ಭೂ ಸುಧಾರಣಾ ಕಾಯಿದೆ  ಜಾರಿಗೆ ತಂದು ಹೊಸ ಭಾಷ್ಯ ಬರೆದವರು ಅರಸು

ಕೆ.ಆರ್.ನಗರ(ಜಿಟೆಕ್ ಶಂಕರ್): ರಾಜ್ಯದಲ್ಲಿ ಭೂ ಸುಧಾರಣಾ ಕಾಯಿದೆಯನ್ನು ಜಾರಿಗೆ ತರುವ ಮೂಲಕ ಹೊಸ ಭಾಷ್ಯ ಬರೆದ ಹಿಂದುಳಿದ ವರ್ಗಗಳ ನೇತಾರ ಡಿ.ದೇವರಾಜ ಅರಸು ದೇಶ ಕಂಡ ಅಪರೂಪದ ಜನನಾಯಕ ಎಂದು ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ ಹೇಳಿದರು.

ಪಟ್ಟಣದ ತಾಲೂಕು ಕಛೇರಿಯ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ನಡೆದ ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅವರ 111ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಅರಸರು ಮಾಡಿದ ಜನಪರ ಕೆಲಸಗಳು ಮತ್ತು ಜಾರಿಗೆ ತಂದ ಯೋಜನೆಗಳು ಅಜರಾಮರ. ಜೀತಪದ್ದತಿ ನಿರ್ಮೂಲನೆ ಜತೆಗೆ ಹತ್ತು ಹಲವು ಜನ ಮತ್ತು ಬಡವರ ಅನುಕೂಲದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಅಧಿಕಾರ ನಡೆಸಿದ ಅಂತಹ ವ್ಯಕ್ತಿ ನಮ್ಮ ನಾಡಿನಲ್ಲಿ ಜನಿಸಿದ್ದು ಎಲ್ಲರ ಪುಣ್ಯ ವಿಶೇಷ ಎಂದರು.

ಸಮಾನತೆಯ ಸಮಾಜ ನಿರ್ಮಾಣ ಮಾಡಲು ಅಹನರ್ಶಿನಿ ಕೆಲಸ ಮಾಡುವುದರ ಜತೆಗೆ ಬಡವ ಮತ್ತು ಶ್ರೀಮಂತನ ನಡುವಿನ ವ್ಯತ್ಯಾಸವನ್ನು ತೊಡೆದು ಹಾಕಲು ಅವರು ಜಾರಿ ಮಾಡಿದ ಭೂ ಸುಧಾರಣಾ ಕಾಯಿದೆ ಅನುಕೂಲವಾಯಿತ್ತಲ್ಲದೆ ಅದರಿಂದ ಲಕ್ಷಾಂತರ ಬಡ ರೈತರ ಬದುಕು ಹಸನಾಯಿತು ಎಂದು ಪ್ರಶಂಸೆ ವ್ಯಕ್ತಪಡಿಸಿದರು.  ತಮಗೆ ದೊರೆತ ರಾಜಕೀಯ ಅಧಿಕಾರವನ್ನು ಎಂದಿಗೂ ಸ್ವ್ವಾರ್ಥಕ್ಕೆ ಬಳಕೆ ಮಾಡಿಕೊಳ್ಳದ ಡಿ.ದೇವರಾಜ ಅರಸರು ದೇಶದ ಎಲ್ಲಾ ರಾಜಕೀಯ ನಾಯಕರಿಗೆ ಮಾದರಿಯಾಗಿದ್ದು ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು ನಡೆಯುವ ಮೂಲಕ ಗೌರವ ಸಲ್ಲಿಸಬೇಕೆಂದು ತಹಶೀಲ್ದಾರರು ತಿಳಿಸಿದರು.

ಕೆಸ್ತೂರುಕೊಪ್ಪಲು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜಶಾಸ್ತ್ರ ಉಪನ್ಯಾಸಕ ಹೆಚ್.ಪಿ.ಲೋಕೇಶ್ ಪ್ರಧಾನ ಭಾಷಣ ಮಾಡಿ ಡಿ.ದೇವರಾಜಅರಸು ಅವರ ಜೀವನ ಮತ್ತು ಸಾಧನೆಯ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರಲ್ಲದೆ ವಿಶಾಲ ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಿದ ದೀಮಂತ ಎಂದು ಕೊಂಡಾಡಿದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಬಿಸಿಎಂ ಇಲಾಖೆಯ ಪರವಾಗಿ ಸನ್ಮಾನಿಸಿ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಕಾರ್ಯಕ್ರಮ ಆರಂಭಕ್ಕೂ ಮೊದಲು ಡಿ.ದೇವರಾಜು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಣೆ ಮಾಡಲಾಯಿತು.

ಪುರಸಭೆ ಮಾಜಿ ಅಧ್ಯಕ್ಷ ಕೋಳಿಪ್ರಕಾಶ್, ಉಪ್ಪಾರರ ಸಂಘದ ತಾಲೂಕು ಅಧ್ಯಕ್ಷ ಮಹದೇವ, ತಾಲೂಕು ಕುಂಬಾರರ ಸಂಘದ ಮಾಜಿ ಅಧ್ಯಕ್ಷ ತಿಮ್ಮಶೆಟ್ಟಿ, ಮುಖಂಡರಾದ ರಾಮಚಾರಿ, ನೇತ್ರಾವತಿ, ಮಂಜುನಾಥ್, ವ್ಯಾನ್‌ಸುರೇಶ್, ರಾಮಯ್ಯ, ಬಿಸಿಎಂ ಇಲಾಖೆಯ ವಿಸ್ತರಣಾಧಿಕಾರಿ ಕೆ.ಮಘನಾ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶಂಕರಮೂರ್ತಿ, ಕಾರ್ಮಿಕ ನಿರೀಕ್ಷಕ ಗೋವಿಂದರಾಜಯಾದವ್, ಸಿಡಿಪಿಒ ಸಿ.ಎಂ.ಅಣ್ಣಯ್ಯ, ಸಹಾಯಕ ಕೃಷಿ ನಿರ್ದೇಶಕ ಸುಹಾಸಿನಿ, ತಾಲೂಕು ಆರೋಗ್ಯಾಧಿಕಾರಿ ಸಂತೋಷ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉದಯಶಂಕರ್, ಎಂ.ಎಸ್.ಮಹದೇವ್, ನಿಲಯ ಪಾಲಕರಾದ ಮಧುಸೂದನ್, ಜಿ.ಜೆ.ಮಹೇಶ್, ಲೋಕೇಶ್, ಬಿಸಿಎಂ ಇಲಾಖೆಯ ಸಿಬ್ಬಂದಿಗಳಾದ ಎಂ.ಎಸ್.ಬೆನಕರಾಜು, ಸತೀಶ್, ದಿಲೀಪ್, ಆಶಾ, ಗೀತಾ, ಬೇಬಿಶ್ರೀ, ಪ್ರದೀಪ್, ದಿವ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.

 

admin
the authoradmin

Leave a Reply