ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟಗಳ ನಡುವಿನ ಒಂದು ವಿಶಿಷ್ಟವಾದ ಚಾರಣ ಎಂದರೆ ಅದು ನಿಶಾನಿ ಮೊಟ್ಟೆ ಚಾರಣ ಐತಿಹಾಸಿಕವಾಗಿ ಇದು ಪಶ್ಚಿಮ ಘಟ್ಟಗಳ ನಡುವಿನ ಒಂದು ಕಷ್ಟಕರ ಚಾರಣವಾಗಿದೆ. ಆದರೂ ಬೆಟ್ಟದ ತುತ್ತ ತುದಿ ತಲುಪಿದಾಗ ಕಷ್ಟವೆಲ್ಲ ಸುಖದ ಅನುಭವವಾಗುವುದಂತು ನಿಜ….

ಬೆಳಿಗ್ಗೆ 11 ಗಂಟೆಗೆ ನಿಶಾನಿ ಮೊಟ್ಟೆ ಚಾರಣ ಪ್ರಾರಂಭಿಸಿದೆವು ಸುತ್ತಲೂ ದಟ್ಟ ಹಸಿರಿನಿಂದ ಕೂಡಿದ್ದ ಕಾಡು ಪ್ರದೇಶವಾದ ಪಶ್ಚಿಮ ಬೆಟ್ಟಗಳ ಕೆಳಗಿನಿಂದ ಚಾರಣ ಪ್ರಾರಂಭಿಸಿದೆವು. ಸುಂದರ ಪರಿಸರ ತಂಪಾದ ಗಾಳಿ ಅರಣ್ಯದ ಮಧ್ಯದಲ್ಲಿ ಕಾರಣವೂ ಬಲು ಸೊಗಸಾಗಿತ್ತು ಪ್ರಕೃತಿಯ ಮೌನವನ್ನು ಸ್ವಾಗತಿಸುತ್ತಾ.. ದಾರಿಯುವುದಕ್ಕೂ ಕಲ್ಲುಗಳು ಹುಲ್ಲುಗಾವಲು ಮತ್ತು ಇಳಿಜಾರುಗಳು ಇದ್ದುದರಿಂದ ಚಾರಣವೋ ತುಂಬಾ ಕಷ್ಟಕರವಾಗಿತ್ತು ಆದರೆ ಪ್ರತಿಯೊಂದು ಹೆಜ್ಜೆಯೂ ಹೊಸ ದೃಶ್ಯವನ್ನು ಪರಿಚಯಿಸುತ್ತಿದ್ದವು ಆ ದೃಶ್ಯವನ್ನು ನನ್ನ ಕಣ್ಣಿಂದ ನೋಡಿ ಆಯಾಸವು ಮರೆತು ಹೋದವು..

ಬೆಟ್ಟದ ಮೇಲಕ್ಕೆ ಏರುತ್ತಿದ್ದಂತೆ ಕೆಳಗೆ ಕಾಣಿಸುತ್ತಿದೆ ಕಣಿವೆಗಳು ಭೂಕುಸಿತ ದೂರದ ಬೆಟ್ಟದ ಸಾಲು ಅದ್ಭುತವಾಗಿತ್ತು. ನೀಲಿ ಆಕಾಶದ ಕೆಳಗೆ ಪ್ರಕೃತಿಯ ಸುಂದರ ಚಿತ್ರವೊಂದು ಕಾಣುತ್ತಿದ್ದವು. ಶಿಖರವನ್ನು ತಲುಪುತ್ತಾ ಬೆಟ್ಟವು ಮೇಲ್ಮುಖವಾಗಿ ಇರುವುದರಿಂದ ನನಗೆ ಉಸಿರು ಮೇಲಿಂದ ಕೆಳಗೆ ಬಂದ ಅನುಭವ ಆದರೆ ಕೆಳಗೆ ನೋಡಿದ ದೃಶ್ಯವನ್ನು ಸವೆದು ಎಲ್ಲಾ ಆಯಾಸವು ಮರೆತು ಹೋಯಿತು.
ಇದನ್ನೂ ಓದಿ: ‘ನಾನು’ ಎರಡಕ್ಷರದ ಪದವಲ್ಲ… ಒಂದೊಳ್ಳೆಯ ಬಾಳಹಾದಿಗೆ ಬೆಳಕು ತೋರುವ ಹಣತೆ…!
ಪ್ರಕೃತಿಯ ಸೌಂದರ್ಯವನ್ನು ಬೆಟ್ಟದ ಮೇಲೆ ನಿಂತು ಸವೆದಾಗ ಆ ಅನುಭವವೇ ತುಂಬಾ ರೋಚಕವಾದ ದೃಶ್ಯ ಸವೆಯಲು ಮನಮೋಹಕ 1 ಗಂಟೆಗೆ ಶಿಖರವನ್ನು ತಲುಪಿದ ಕ್ಷಣದಲ್ಲಿ ಅನುಭವಿಸಿದ ಸಂತೋಷವನ್ನು ಪದಗಳಲ್ಲಿ ವಿವರಿಸಲು ಕಷ್ಟ

ನಿಶಾನಿ ಮೊಟ್ಟೆಯ ಶಿಖರಾದ ಮೇಲೆ ಒಂದು ಕನ್ನಡ ಬಾವುಟವನ್ನು ಹಿಡಿದು ನಿಂತಾಗ ಎಲ್ಲಾ ಆಯಾಸವನ್ನು ಮರೆತು ಹೋಯಿತು. ಸುತ್ತಲಿನ ವಿಶಾಲ ಪರ್ವತ ಪ್ರದೇಶ ಮುಂದೆ ತಲಕಾವೇರಿ ಪ್ರಕೃತಿಯ ಮುಂದೆ ಮನುಷ್ಯ ಎಷ್ಟು ಚಿಕ್ಕವನು ಎಂಬುವುದು ಅರಿವಾಯಿತು ವಿಶಾಲವಾದ ಆಕಾಶ ಮತ್ತು ಬೆಟ್ಟಗಳ ಸೌಂದರ್ಯ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತಾಯಿತು.

ಈ ಚಾರಣ ನನಗೆ ಕೇವಲ ಚಾರಣವಾಗಿರಲಿಲ್ಲ ಅದು ತಲಕಾವೇರಿ, ಮಡಿಲಿನ ಪ್ರಕೃತಿಯನ್ನು ಹತ್ತಿರದಿಂದ ಅನುಭವಿಸುವ ಕಷ್ಟವನ್ನು ಎದುರಿಸಿ ಗುರಿ ತಲುಪುವುದು ಜೀವನದ ಸಂತೋಷಗಳನ್ನು ಅರಿಯುವ ಸುಂದರವಾದ ದೃಶ್ಯವಾಯಿತು. ಅಷ್ಟೇ ಅಲ್ಲ ಮನಪಟಲದಲ್ಲಿ ಅಚ್ಚಳಿಯದಂತೆ ಉಳಿದು ಹೋಯಿತು.

ಇದನ್ನೂ ಓದಿ: ನೆನಪಾಗಿ ಕಾಡುವ ಮಡಿಕೇರಿಯ ನೆಹರು ಮಂಟಪ… ಇದರ ವೈಭವ ಹೇಗಿತ್ತು ಗೊತ್ತಾ?








