ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಯುವಕನಿಗೆ ಚಾಕು ತೋರಿಸಿ, ನಂತರ ಖಾರದಪುಡಿ ಎರಚಿ ಚಾಕುವಿನಿಂದ ಇರಿದು ಹಣ ಕಿತ್ತು ಪರಾರಿಯಾಗಿರುವ ಘಟನೆ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಚಿಟ್ಟಕ್ಯಾತನಹಳ್ಳಿ ಗ್ರಾಮದ ಬಳಿ ಬುಧವಾರ ಮಧ್ಯಾಹ್ನ ಘಟನೆ ನಡೆದಿದೆ.
ಹರವೆ ಕಲ್ಲಹಳ್ಳಿ ಗ್ರಾಮದ ಸಚಿನ್ ಎಂಬ ಯುವಕ ತನ್ನ ತಂದೆಯೊಂದಿಗೆ ಹುಣಸೂರಿನ ಆಸ್ಪತ್ರೆಗೆ ತೆರಳಿದ್ದರು. ತಂದೆಯನ್ನು ಆಸ್ಪತ್ರೆಯಲ್ಲಿ ತೋರಿಸಿ ನಂತರ ಹುಣಸೂರಿನಲ್ಲೇ ಬಿಟ್ಟು ಬರುವಾಗ ಬೇಕರಿ ಮುಂದೆ ತನ್ನ ತಂದೆ ರೂ.20 ಸಾವಿರ ಹಣ ನೀಡಿದ್ದಾರೆ. ಇದನ್ನು ನೋಡಿದ ದುಷ್ಕರ್ಮಿಗಳು ಹುಣಸೂರಿನಿಂದ ಹಿಂಬಾಲಿಸಿಕೊಂಡು ಬಂದು ಸುಮಾರು 12 ಕಿಲೋಮೀಟರ್ ನಂತರ ಯುವಕನಿಗೆ ಖಾರದ ಪುಡಿ ಎರಚಿ ನಂತರ ಅವನ ಕೈಯನ್ನು ಕೊಯ್ದು ಪರಾರಿಯಾಗಿದ್ದಾರೆ ದುಷ್ಕರ್ಮಿಗಳ ಬೈಕಿಗೆ ಯಾವುದೇ ನಂಬರ್ ಪ್ಲೇಟ್ ಇರಲಿಲ್ಲ ಜೊತೆಗೆ ಮಾಸ್ಕ್ ಧರಿಸಿದ್ದರು ಎಂದು ಹೇಳಲಾಗಿದೆ.
ತಕ್ಷಣ ಯುವಕನನ್ನು ಸ್ಥಳಿಯರು ಹುಣಸೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ ನಂತರ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದು ದೂರು ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಕ್ರಮ ವಹಿಸಿದ್ದಾರೆ.








