LatestMysore

ಸಿಬಿಟಿ ಕಾಲೋನಿ  ಕೃಷಿ ಪತ್ತಿನ ಸಂಘಕ್ಕೆ 33.94 ಲಕ್ಷ ಲಾಭ.. ಸದಸ್ಯರ ಪರಿಶ್ರಮಕ್ಕೆ ಪ್ರಶಂಸೆ

ಹುಣಸೂರು(ಮನುಕುಮಾರ್): ಹುಣಸೂರು ತಾಲ್ಲೂಕಿನ ಸಿಬಿಟಿ ಕಾಲೋನಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2025-26ನೇ ಸಾಲಿನಲ್ಲಿ 33ಲಕ್ಷದ 94 ಸಾವಿರ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಸಿ.ಕುಪ್ಪುಸ್ವಾಮಿ ತಿಳಿಸಿದರು.

2025-2026 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಎಲ್ಲರ ಪರಿಶ್ರಮದಿಂದ ಪ್ರತಿ ವರ್ಷವು ಸಂಘ ಉತ್ತಮ ಲಾಭದಾಯಕವಾಗಿ ನಡೆದುಕೊಂಡು ಬರುತ್ತಿದ್ದು, ಹಲವಾರು ವರ್ಷಗಳಿಂದ  ಸ್ಥಗಿತಗೊಂಡಿದ್ದ ಟ್ರ್ಯಾಕ್ಟರ್ ಸಾಲವನ್ನು 2024- 25 ರಿಂದ ಮರು ಜಾರಿಗೊಳಿಸಿ 10 ಜನಕ್ಕೆ,  ಈಗಾಗಲೇ ಟ್ರಾಕ್ಟರ್  ಸಾಲ ಸೌಲಭ್ಯ ಕಲ್ಪಸಲಾಗಿದೆ. ಅಲ್ಲದೆ 25   ಹೊಸ ರೈತರಿಗೆ  ಸಾಲ ಸೌಲಭ್ಯ ಕಲ್ಪಿಸಲಾಗಿದ್ದು ವಿತರಿಸಬೇಕಾಗಿದೆ.. ಮುಂದೆಯೂ ನಿಮ್ಮೆಲ್ಲರ ಸಹಕಾರದೊಂದಿಗೆ ಸಂಘವನ್ನು ಲಾಭವಾಯಕವಾಗಿ ಮುನ್ನಡೆಸಲಾಗುವುದು ಎಂದರು.

ಯೋಜನಾ ಪ್ರಾಧಿಕಾರದ ಅದ್ಯಕ್ಷ ಹಾಗೂ ನಿರ್ದೇಶಕ ಹೆಚ್.ಪಿ ಅಮರ್ ನಾಥ್ ಇಬ್ಬರು ರೈತರಿಗೆ ಹೊಸ ಟ್ರಾಕ್ಟರ್ ವಿತರಣೆ ಮಾಡಿ ಮಾತನಾಡಿ,  ನಮ್ಮ ಸಂಘವು ಬದ್ದತೆಯ ಆಡಳಿತದಿಂದಾಗಿ ಜಿಲ್ಲೆಯಲ್ಲೇ ಉತ್ತಮ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಸ್ತುತ 1628  ಸದಸ್ಯರಾಗಿದ್ದು, ಮುಂದೆ ವ್ಯಾಪಕ ಪ್ರಚಾರದ ಮೂಲಕ ಎಲ್ಲಾ ರೈತರನ್ನು ಸದಸ್ಯರನ್ನಾಗಿಸಬೇಕಿದೆ. ಸಂಘದ ಮೂಲಕ ರೈತರಿಗೆ ಇನ್ನೂ ಹೆಚ್ಚಿನ ಬೆಳೆ ಸಾಲ-ಸೌಲಭ್ಯ ಕಲ್ಪಿಸಲು ಕ್ರಮವಹಿಸಲಾಗುವುದು ಎಂದರು.

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ…

ಸಂಘದ ವ್ಯಾಪ್ತಿಗೆ  ಒಳಪಡುವ ಸರ್ಕಾರಿ ಶಾಲೆಗಳಾದ ನಂಜಾಪುರ, ಗೌರಿಪುರ, ಹೋನ್ನಿಕುಪ್ಪೆ, ಹೊಸಕೊಟೆ, ಸಿ.ಬಿ.ಟಿ.ಕಾಲೋನಿ, ವಿನೋಭಾ ಕಾಲೋನಿ, ಸೇರಿದ  ಪ್ರತಿಭಾವಂತ ಮಕ್ಕಳನ್ನು ಹಾಗೂ ಉತ್ತಮ ರೈತರನ್ನು ಪುರಸ್ಕರಿಸಿ ಸನ್ಮಾನಿಸಿದರು.  ಮು. ಕಾ. ನಿರ್ವಾಣಾಧಿಕಾರಿ ಸೆಂದಿಲ್ ಕುಮಾರ್ 2025 – 26 ನೇ ಸಾಲಿನ ಆಡಳಿತ ವರದಿ ಹಾಗೂ ಜಮಾ ಖರ್ಚುನ್ನು ಓದಿ ಸಭೆಗೆ ವರದಿ ಮಂಡಿಸಿದರು.

ಆರೋಗ್ಯ ತಪಾಸಣೆ ಶಿಬಿರ…

ಪ್ರತಿ ವರ್ಷದಂತೆ ಈ ವರ್ಷವು ಸಂಘದ ವತಿಯಿಂದ ಸದಸ್ಯರಿಗೆ ಅಪೋಲೊ ಆಸ್ಪತ್ರೆಯ ಸಹಯೋಗದೊಂದಿಗೆ ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು. ಹೃದ್ರೋಗ ತಪಾಸಣೆ  ಶಿಬಿರದಲ್ಲಿ 200 ಕ್ಕೂ ಹೆಚ್ಚು ಜನ ಶಿಬಿರದ ಉಪಯೋಗ ಪಡೆದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಜವರನಾಯಕ, ಮಾಜಿ ಅದ್ಯಕ್ಷ ಹಾಗೂ ನಿರ್ದೇಶಕ ಶಿವಲಿಂಗಪ್ಪ,  ಸಂಘದ ನಿರ್ದೇಶಕರಾದ ಮಹದೇವ್, ಆರ್. ದೊರೆಸ್ವಾಮಿ, ಸುರೇಶ್, ತಂಗಮ್ಮ, ವೇಲುಮಣಿ, ವಿ. ಪ್ರದೀಪ್, ಶಂಕರಪ್ಪ, ಧನರಾಜ್, ಮುಖಂಡರಾದ ರವಿ,  ಚಿಕ್ಕಣ್ಣೇಗೌಡ, ನಂಜಾಪುರ ಶಿವಕುಮಾರ್, ಮನುಕುಮಾರ್,  ಮನೋಹರ್, ಚಲುವರಾಜ್,   ಡಿ.ಎನ್, ನೌಕರರ ವರ್ಗದ ಸದಸ್ಯರಾದ ಆರ್.ಮಾಣಿಕ್ಯ, ವಿ.ಸುನೀಲ್ ಕುಮಾರ್, ಡಿ.ರೋಷನ್ ಸೇರಿದಂತೆ ಅನೇಕರು ಹಾಜರಿದ್ದರು.

admin
the authoradmin

ನಿಮ್ಮದೊಂದು ಉತ್ತರ