ಕೆ.ಆರ್.ನಗರ(ಜಿಟೆಕ್ ಶಂಕರ್): ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಸಂಘದ ವತಿಯಿಂದ 3 ಕೋಟಿ ರೂ.ಗಳನ್ನು ಸ್ವ-ಸಹಾಯ ಸಂಘಗಳ ಮೂಲಕ ಸಾಲ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಬಿ.ಎಲ್.ಪ್ರಾಣೇಶ್ ಹೇಳಿದರು.
ತಾಲೂಕಿನ ಬ್ಯಾಡರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಕಚೇರಿ ಆವರಣದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂಘದ ವ್ಯಾಪ್ತಿಯಲ್ಲಿ 85 ಸ್ವ- ಸಹಾಯ ಸಂಘಗಳನ್ನು ರಚನೆ ಮಾಡಿ ಪ್ರಸ್ತುತ 78 ಸಂಘ ಕಾರ್ಯನಿರ್ವಹಿಸುತ್ತಿದೆ ಎಂದರು.
ಇದರ ಜತೆಗೆ ರೈತರ ಹಿತ ಕಾಯಲು ಸಂಘದ ಆಡಳಿತ ಮಂಡಳಿ ಬದ್ದವಾಗಿದ್ದು 1825 ಮಂದಿ ಷೇರುದಾರ ಸದಸ್ಯರಿರುವ ಈ ಸಂಘ 116.43 ಷೇರು ಬಂಡವಾಳ ಹೊಂದಿದ್ದು ಸಂಘ ಸರ್ಕಾರದಿಂದ 2.06 ಲಕ್ಷದ ಜತೆಗೆ ಒಟ್ಟು 118.59 ಲಕ್ಷ ಷೇರು ಬಂಡವಾಳ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.
2025-26ನೇ ಸಾಲಿನಲ್ಲಿ ಕೆಸಿಸಿ ಸಾಲ 919.89 ಲಕ್ಷ, ಲಿಂಕೇಜ್ ಸಾಲ 50 ಲಕ್ಷ ವಿತರಣೆ ನೀಡಲಾಗಿದ್ದು 1081.59 ಲಕ್ಷ ರೂಗಳು ರೈತರಿಂದ ವಸೂಲಾತಿ ಮಾಡಬೇಕಾಗಿದ್ದು 1175.22 ಲಕ್ಷ ರೂಗಳನ್ನು ಕೇಂದ್ರ ಬ್ಯಾಂಕ್ ಗೆ ಸಂಘದ ವತಿಯಿಂದ ಪಾವತಿಸಬೇಕಾಗಿದೆ ಎಂದು ಮಾಹಿತಿ ನೀಡಿದ ಅಧ್ಯಕ್ಷರು 2025-26ನೇ ಸಾಲಿನಲ್ಲಿ 7.80 ಲಕ್ಷ ರೂಗಳನ್ನ ನಷ್ಟ ಅನುಭವಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಆಡಳಿತ ಮಂಡಳಿ ಸಹಕಾರದಿಂದ ಸಾಲ ವಸೂಲಾತಿಗೆ ಕ್ರಮ ಕೈಗೊಳ್ಳುವುದರಲ್ಲದೆ 2026-27ನೇ ಸಾಲಿನಲ್ಲಿ ಕೆಸಿಸಿ ಬೆಳೆ ಸಾಲವನ್ನು 15 ಕೋಟಿ ರೂಗಳಿಗೆ ಹೆಚ್ಚಿಸುವುದು ಮತ್ತು ಷೇರು ಬಂಡವಾಳ ಹೆಚ್ಚಿಸಲು ಸಭೆಯಲ್ಲಿ ನಿರ್ಣಯ ಮಾಡಲಾಗಿದೆ ಎಂದು ಮಾಹಿತಿ ನೀಡಿದ ಅವರು ಸಾಲ ಪಡೆದಿರುವ ಷೇರುದಾರ ಸದಸ್ಯರು ಮುಂದಿನ ದಿನಗಳಲ್ಲಿ ಸುಸ್ತಿ ಆಗದಂತೆ ನೋಡಿ ಕೊಳ್ಳುವಂತೆ ಮನವಿ ಮಾಡಿದರು.
ಎಂಸಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪ್ರತಾಪ್, ಉಪಾಧ್ಯಕ್ಷ ಉದಯಕುಮಾರ್, ಬಿ.ಎಂ.ಮುರುಳೀಧರ, ಕುಮಾರ್, ಎಸ್.ಕೆ. ಗೌತಮ್, ರಮೇಶ್, ಹರೀಶ್, ಕರಿಯಯ್ಯ, ಜೆ.ಎಲ್.ರಮೇಶ್, ಶ್ರೀಕಾಂತ್, ಭಾಗ್ಯ, ಉಮಾ, ಎಂಡಿಸಿಸಿ ಬ್ಯಾಂಕ್ ಪ್ರತಿನಿಧಿ ಎನ್.ದಿನೇಶ್, ಮುಖ್ಯಕಾರ್ಯನಿರ್ವಣಾಧಿಕಾರಿ ಸಚಿನ್ ಕುಮಾರ್, ಸಹಾಯಕ ಎಸ್.ಕೆ.ಮಹದೇವ, ಗಣಕಯಂತ್ರಿಕ ಅಶ್ವಿನಿ ಸೇರಿದಂತೆ ಷೇರುದಾರ ರೈತ ಸದಸ್ಯರು ಹಾಜರಿದ್ದರು.








