ಸರಗೂರು(Dasegowdru): ತಾಲೂಕಿನ ಇಟ್ನ ಗ್ರಾಮದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಹಾಗೂ ಉದ್ಘಾಟನಾ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

ಶಾಸಕ ಅನಿಲ್ ಚಿಕ್ಕಮಾದು ಅವರ ಪತ್ನಿ ಸೌಮ್ಯ ಅನಿಲ್ ಚಿಕ್ಕಮಾದು ಮಾತನಾಡಿ, “ಇಂದಿನ ಯುವಕರು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಸಮಾಜದ ಏಳಿಗೆಗೆ ಶ್ರಮಿಸಬೇಕು. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ತತ್ವಗಳನ್ನು ಜೀವನದಲ್ಲಿ ಅನುಸರಿಸಬೇಕು. ಮಕ್ಕಳು ಶಿಕ್ಷಣದ ಜೊತೆಗೆ ಆರೋಗ್ಯದ ಮೇಲೂ ಹೆಚ್ಚು ಗಮನ ಹರಿಸಬೇಕು. ಅಂಬೇಡ್ಕರ್ ಅವರು ಹೆಣ್ಣು ಮಕ್ಕಳ ಶಿಕ್ಷಣ, ಮತದಾನ ಹಕ್ಕು ಸೇರಿದಂತೆ ಅನೇಕ ಸಾಮಾಜಿಕ ಹಕ್ಕುಗಳನ್ನು ನಮಗೆ ಒದಗಿಸಿದ್ದಾರೆ. ಸಂವಿಧಾನದ ಬಲದಿಂದಲೇ ನಮ್ಮ ಕುಟುಂಬಕ್ಕೆ ಮೂರು ಬಾರಿ ಶಾಸಕರಾಗಿ ಸೇವೆ ಮಾಡುವ ಅವಕಾಶ ದೊರೆತಿದೆ, ಎಂದು ತಿಳಿಸಿದರು.

ಅಂತರಸಂತೆ ಸಾರನಾಥ ಬುದ್ಧ ವಿಹಾರದ ಗೌತಮಿ ಬಂತೇಜಿ ಆಶೀರ್ವಚನ ನೀಡಿದರು. ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಇಟ್ನ ರಾಜಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜ ಸೇವಕ ಎಸ್.ವಿ. ವೆಂಕಟೇಶ್, ಸಮಾಜ ಸೇವಕಿ ಮಮತಾ ವೆಂಕಟೇಶ್, ಪುರಸಭಾ ಸದಸ್ಯ ಎಚ್.ಸಿ. ನರಸಿಂಹಮೂರ್ತಿ, ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಎಚ್.ಡಿ. ಶಿವರಾಜು, ಮಾಜಿ ಅಧ್ಯಕ್ಷ ಸರಗೂರು ಶಿವಣ್ಣ, ಜಿ.ಪಂ ಮಾಜಿ ಸದಸ್ಯ ಪಿ. ರವಿ ಸೇರಿದಂತೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕರು, ಸಂವಿಧಾನವನ್ನು ಜಾರಿಗೊಳಿಸಿ ಸಮಸಮಾಜ ನಿರ್ಮಾಣ ಮಾಡುವುದು ಅಂಬೇಡ್ಕರ್ ಅವರ ಮಹತ್ತಾದ ಗುರಿಯಾಗಿತ್ತು. ಸಮಾನತೆ, ಸಾಮಾಜಿಕ ನ್ಯಾಯ, ಸಹಬಾಳ್ವೆ ಹಾಗೂ ಆರ್ಥಿಕ ಸಮಾನತೆಯನ್ನು ಸಮಾಜದಲ್ಲಿ ನೆಲೆಗೊಳಿಸಲು ಅವರು ಅಕ್ಷರಶಃ ಜೀವನವನ್ನೇ ಅರ್ಪಿಸಿದರು.

ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳಾದ ಆರ್.ಕೆ. ಮೇಘನ, ಆರ್.ಕೆ. ಶಾಲಿನಿ, ನಿವೇದಿತಾ, ಸೋನು ಹಾಗೂ ಸಹನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕ್ರಾಂತಿಗೀತೆಗಳ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಾಯಿತು.
ಗ್ರಾಮದ ಯಜಮಾನ ಸಿ. ಸುರೇಶ್, ಚಿಕ್ಕ ಯಜಮಾನ ಅನಿಲ್ ಕುಮಾರ್, ಅಂಬೇಡ್ಕರ್ ಟ್ರಸ್ಟ್‌ನ ನಂಜುಂಡ, ಚಿನ್ನಪ್ಪ, ನಿಂಗರಾಜು, ಚಂದ್ರು, ಭೈರಯ್ಯ, ಕುಮಾರ, ದೊಡ್ಡಪ್ಪಾಜಿ, ಚಿಕ್ಕಣ್ಣ, ಸೋಮಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ದೇವಲಾಪುರ ಸಿದ್ದರಾಜು, ಜೀವಿಕ ಜಿಲ್ಲಾ ಸಂಚಾಲಕ ಬಸವರಾಜು, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಹೆಗ್ಗನೂರು ನಿಂಗರಾಜು, ಕಸಾಪ ಗ್ರಾಮೀಣ ಕಾರ್ಯದರ್ಶಿ ಮಹೇಶ್, ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಆರ್. ನಾಗರಾಮ್, ದಸಂಸ ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು, ಅಂಬೇಡ್ಕರ್ ಭವನ ಟ್ರಸ್ಟ್ ಅಧ್ಯಕ್ಷ ಎಸ್.ಡಿ. ಸಣ್ಣಸ್ವಾಮಿ ಸೇರಿದಂತೆ ನೂರಾರು ಮಂದಿ ಸೇರಿದಂತೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.








