LatestMysore

ಮೈಸೂರಿನಲ್ಲಿ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೂತನ ಕಚೇರಿ ಉದ್ಘಾಟನೆ

ಮೈಸೂರು: ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೂತನ ಕಚೇರಿಯನ್ನು ಅಗ್ರಹಾರದ ನೂರೊಂದು ಗಣಪತಿ ದೇವಾಲಯದ ಬಳಿ ತೆರೆಯಲಾಗಿದ್ದು, ಈ ಸಂಬಂಧ ನಡೆದ ಕಾರ್ಯಕ್ರಮವನ್ನು ಬಸವೇಶ್ವರರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಗುಂಡ್ಲುಪೇಟೆ ವಿಧಾನ ಕ್ಷೇತ್ರದ ಶಾಸಕರಾದ ಎಚ್ ಎಂ ಗಣೇಶ್ ಪ್ರಸಾದ್  ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು ಸಂಘದ ಪದಾಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿ, ನಿಜಕ್ಕೂ ಸಂಘದ ನಿರಂತರ ಕಾರ್ಯ ಚಟುವಟಿಕೆ ಹಮ್ಮಿಕೊಳ್ಳಲು ಪ್ರತ್ಯೇಕ ಕಚೇರಿ ಮೈಸೂರಿನ ಹೃದಯ ಭಾಗದಲ್ಲಿ ತೆರೆದಿರುವುದು ಸುಲಭವಾಗಿ ವಿವಿಧ ತಾಲೂಕುಗಳಿಂದ ನೌಕರರು ಸುಲಭವಾಗಿ ಬಂದು ಹೋಗಿ ವ್ಯವಹರಿಸಲು ಇದು ಸೂಕ್ತವಾದ ಸ್ಥಳವಾಗಿದೆ. ಆಧ್ಯಾತ್ಮಿಕವಾಗಿಯೂ ಮನಸ್ಸಿಗೆ ಶಾಂತಿ ನೆಮ್ಮದಿ ಸಮಾಧಾನ ಪಡೆಯಲು ದೇವಸ್ಥಾನವು ಸಮೀಪವೇ ಇರುವುದು ಬಹಳ ಸಂತಸ ತರುತ್ತದೆ ಎಂದರು.

ಸಂಘದ ಕಾರ್ಯ ಚಟುವಟಿಕೆ ನೌಕರ ಕ್ಷೇಮಕ್ಕೆ ಮಾತ್ರ ಸೀಮಿತವಾಗದೆ ಸಮುದಾಯಕ್ಕೆ ಪ್ರಸ್ತುತ ಅಗತ್ಯವಿರುವ ಉದ್ಯೋಗ, ವಿವಾಹ, ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡಿರುವುದು ನನಗೆ ವೈಯಕ್ತಿಕವಾಗಿಯೂ ಸಂತೋಷ ತಂದಿದೆ ಇದಕ್ಕೆ ಅಗತ್ಯ ನನ್ನ ಸಹಕಾರ ಸದಾ ಇರುತ್ತದೆ ಎಂದು ಹೇಳಿದರು.

ಬಸವೇಶ್ವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ಸಂಘದ ಅಧಿಕೃತ ವೆಬ್ ಸೈಟ್ ಗೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯರಾದ ಪ್ರೊ ಕೆ ಆರ್ ಮಲ್ಲಿಕಾರ್ಜುನಪ್ಪ ಅವರು, ಸಂಘದ ಧ್ಯೇಯ ಎಲ್ಲರಿಗಾಗಿ ಒಬ್ಬರು.. ಒಬ್ಬರಿಗಾಗಿ ಎಲ್ಲರೂ ಎನ್ನುವ ಸಹಕಾರ ತತ್ವದ ಅಡಿಯಲ್ಲಿ ಕಾರ್ಯನಿರ್ವಹಿದಾಗ ಏಳಿಗೆ ಸಾಧ್ಯ ಎಂದರು.

ಉದ್ಯೋಗ ಮೇಳದ ನೋಂದಣಿಗೆ ಚಾಲನೆ ನೀಡಿ ಮಾತನಾಡಿದ ಉದ್ಯಮಿ ಉತ್ತಂಬಳ್ಳಿ ಗಣೇಶ್ ಲಿಂಗಾಯತ ಮಠಗಳು ನಾಡಿನ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅಪಾರ ನಾನು ಸುತ್ತೂರು ಶ್ರೀ ಮಠದಲ್ಲಿ ಶಿಕ್ಷಣ ಸಂಸ್ಥೆಯಲ್ಲಿ ಪಡೆದು ಶ್ರೀಗಳ ಕೃಪಾಶೀರ್ವಾದ ಫಲವಾಗಿ ಒಬ್ಬ ಉದ್ಯಮಿಯಾಗಿ ರೂಪುಗೊಂಡಿದ್ದೇನೆ. ಈ ಕಾರಣದಿಂದ ಇದುವರೆಗೂ 30 ರಾಷ್ಟ್ರಗಳಲ್ಲಿ ಪ್ರವಾಸ ಮಾಡುವ ಅವಕಾಶ ಸಿಕ್ಕಿದೆ. ನಿರಂತರ ಪರಿಶ್ರಮ ಪೂಜ್ಯ ಸುತ್ತೂರು ಶ್ರೀಗಳವರೆ ಈ ಸಾಧನೆಗೆ ಸ್ಪೂರ್ತಿ ಮತ್ತು ಪ್ರೇರಣೆ ಎಂದರೆ ತಪ್ಪಾಗಲಾರದು ಎಂದರು

ಕಾರ್ಯಕ್ರಮದಲ್ಲಿ ಸ್ವಾಗತಿಸಿ, ಪ್ರಸ್ತಾವಿಕ ನುಡಿಗಳನ್ನಾಡಿದ ಸಂಘದ ಸಂಸ್ಥಾಪಕ ಗೌರವ ಸಲಹೆಗಾರ ಕಲ್ಮಳ್ಳಿ ನಟರಾಜು ಅವರು, ಕಳೆದ 10 ವರ್ಷಗಳಿಂದ ನಿಷ್ಕ್ರಿಯವಾಗಿದ್ದ ಈ ಸಂಘಟನೆ ಬಲ ಪಡಿಸುವಂತೆ ದಿವಗಂತ ಪುಟ್ಟ ಲಿಂಗಯ್ಯ ನನ್ನ ಮೇಲೆ ಹಾಕಿದ ನಿರಂತರ ಪ್ರಯತ್ನದ ಫಲವಾಗಿ ಹತ್ತಾರು ಸಭೆಗಳ ಬಳಿಕ ಇದಕ್ಕೆ ಮರು ಚಾಲನೆ ನೀಡಲಾಯಿತು. ಇದುವರೆಗೆ ಜವಾಬ್ದಾರಿ ನಿರ್ವಹಿಸಿರುವ ಅನೇಕ ಪದಾಧಿಕಾರಿಗಳು ಇದರ ಬೆಳವಣಿಗೆಗೆ ತಮ್ಮದೇ ಕೊಡುಗೆ ನೀಡಿದ್ದಾರೆ.

ಅವರ ಮಾರ್ಗದರ್ಶನ ಮತ್ತು ಸಹಕಾರ ಸಲಹೆ ಜೊತೆಗೆ ಪ್ರಸ್ತುತ ಅಧ್ಯಕ್ಷರಾಗಿರುವ  ಬೆಳಚಲವಾಡಿ ಶಿವಕುಮಾರ್ ಅತ್ಯಂತ ಕ್ರಿಯಾಶೀಲರಾಗಿದ್ದು, ಸಮುದಾಯದ ಜೊತೆಯಲ್ಲೇ ಸಾಗಬೇಕೆನ್ನುವ ಉದ್ದೇಶ ಹೊಂದಿದ್ದಾರೆ. ಅದಕ್ಕೆ ಪೂರಕವಾಗಿ ಉಳಿದ ಪದಾಧಿಕಾರಿಗಳು ಇಂದು ಹಮ್ಮಿಕೊಂಡಿರುವ ಕಾರ್ಯಸೂಚಿಯೇ ಇದಕ್ಕೆ ಸಾಕ್ಷಿಯಾಗಿ ನಮ್ಮೆದುರಿಗೆ ಇದೆ. ಭಿನ್ನಾಭಿಪ್ರಾಯ ಬದಿಗೊತ್ತಿ ಪ್ರಾಮಾಣಿಕವಾಗಿ ಉತ್ತಮ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತು ಜಿಲ್ಲೆಯ ಎಲ್ಲ ಪೂಜ್ಯರ ಮಾರ್ಗದರ್ಶನ ಪಡೆದು ಗಟ್ಟಿ ಗೊಳಿಸೋಣ ಇದಕ್ಕೆ ನಿಮ್ಮೆಲ್ಲರ ಪೂರ್ಣಸಹಕಾರ ಇರಲಿ ಎಂದು ಮನವಿ ಮಾಡಿದರು.

ಅಧ್ಯಕ್ಷರಾದ ಬಿ ಆರ್ ಶಿವಕುಮಾರ್ ಮಾತನಾಡಿ ಮುಂದಿನ ದಿನಗಳಲ್ಲಿ ಸದಸ್ಯತ್ವ ಅಭಿಯಾನ ಹಮ್ಮಿ ಕೊಂಡು ಆರ್ಥಿಕವಾಗಿ ಔದ್ಯೋಗಿಕವಾಗಿ ಶೈಕ್ಷಣಿಕವಾಗಿ ಸೇವೆ ಸಲ್ಲಿಸಲು ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದು ಇದೇ ವೇಳೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಮೈಸೂರು ಜಿಲ್ಲಾ ಘಟಕದ ನಿರ್ದೇಶಕರಾದ  ಕಾನ್ಯ ಶಿವಮೂರ್ತಿ, ಬಸವ ಬಳಗದ ಒಕ್ಕೂಟದ ಅಧ್ಯಕ್ಷ ಕಸಾಪ ಚಂದ್ರಶೇಖರ್,  ಮೈಸೂರು ನಗರ ಮಹಾಪಾಲಿಕೆ ಮಾಜಿ ಸದಸ್ಯರಾದ ಕೆ ವಿ ಮಲ್ಲೇಶ್, ಅಖಿಲ ಭಾರತ ವೀರಶೈವ ಮಹಾಸಭಾ ಮೈಸೂರು ನಿರ್ದೇಶಕ ಆಯರಹಳ್ಳಿ ರೂಪಾಕ್ಷ, ಸರ್ಕಾರಿ ನೌಕರರ ಸಂಘದ ವಿಭಾಗೀಯ ಉಪಾಧ್ಯಕ್ಷ   ಮಾಲಂಗಿ ಸುರೇಶ್ ಪರಮೇಶ್ ಮಾಸ್ಟರ್ ,  ಗಣೇಶ್ ಉಪಾಧ್ಯಕ್ಷ  ಉಮ್ಮತ್ತೂರು ಸುರೇಶ್.

ಖಜಾಂಚಿ ಬಾಗಳಿ ಮಹೇಶ್ ನಿರ್ದೇಶಕರಾದ   ಸಂತೋಷ್ ಬಾನ ಹಳ್ಳಿ ನಾಗೇಂದ್ರ ಗಜೇಂದ್ರ ನಿಕಟ ಪೂರ್ವ ಕಾರ್ಯದರ್ಶಿ ಪ್ರಭು ಸ್ವಾಮಿ ಮಲ್ಲನ ಗುಳಿ ಏಲಕ್ಕೂರು  ಅರಿವಿನ ಮಹಿಳಾ ಬಳಗದ ಅಧ್ಯಕ್ಷೆ ಲೀಲಾಂಬಿಕೆ, ಮಲ್ಲಿಕಾ ಮೀನಾಕ್ಷಿ, ಶರ್ಮಿಳಾ ಮೋಹನ್,  ಶಿಲ್ಪಾ ನಂದೀಶ್, ಮಂಜುಳಾ ಜನ್ನೂರು ಶಿವ ದೇವಾಲಯದ   ಸುರೇಶ ವಾಲಿ ಕಟ್ಟಹಳ್ಳಿ ಪ್ರಕಾಶ್ ಸೇರಿದಂತೆ ವಿವಿಧ ತಾಲೂಕುಗಳ ಪದಾಧಿಕಾರಿಗಳು ಮತ್ತು ವಿವಿಧ ಲಿಂಗಾಯತ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

admin
the authoradmin

Leave a Reply

Translate to any language you want