LatestMysore

ಊರಿನವರೆಲ್ಲರೂ ಒಂದು ಕಡೆ ಸೇರಿ ಪರಸ್ಪರ ಸಮಾಜದ ಬೆಳವಣಿಗೆಗಾಗಿ ಸ್ಪಂದಿಸುವುದೇ ಪೂಜೆ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮೀಗೌಡ): ಪೂಜೆ ಎಂದರೆ ಎಲ್ಲಾ ಕುಟುಂಬಗಳು ಒಂದು ಕಡೆ ಸೇರುವುದು ಅದು ಸಂಘಟನೆಯ ದ್ಯೋತಕವಾಗಿದ್ದು,  ಒಂದು ಗ್ರಾಮ ಅಥವಾ ಊರಿನ ಒಡೆದ ಮನಸ್ಸುಗಳೆಲ್ಲ ಒಂದು ಕಡೆ ಸೇರಿ ಪರಸ್ಪರ ಸಮಾಜದ ಬೆಳವಣಿಗೆಗಾಗಿ ಸ್ಪಂದಿಸುವುದು.  ಎಂದು  ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಡಾ. ಕೆ ಎಸ್ ರೇಣುಕಾ ಪ್ರಸಾದ್ ಹೇಳಿದರು

ಅವರು ಹರವೆ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಾಮೂಹಿಕ ಲಕ್ಷ್ಮಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನ ಬಾಷಣಕಾರರಾಗಿ ಮಾತನಾಡಿ, ಈ ನಿಟ್ಟಿನಲ್ಲಿ ಈ ದಿನ ನಡೆದ ಪೂಜಾ ಕಾರ್ಯವು ಹರವೆ ಗ್ರಾಮದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ  ಸಂಘದ ಎಲ್ಲಾ  ಮಹಿಳೆಯರನ್ನು ಒಂದು ಕಡೆ ಸೇರಿಸಿ ಜಾಗೃತಿ ಹಾಗೂ ಜವಾಬ್ದಾರಿ ಹಂಚಿಕೊಳ್ಳುವುದಾಗಿದೆ.

ಮನುಷ್ಯನ ರೂಪದಲ್ಲಿಯೇ ದೇವರು ಇದ್ದು ಭಕ್ತಿಯ ಮೂಲಕ ಅಂದರೆ ಜವಾಬ್ದಾರಿಯ ಮೂಲಕ ಕುಟುಂಬಗಳನ್ನು ಸಂಘಟಿಸುವುದು ಹಾಗೂ ಆ ಮೂಲಕ ಒಂದು ಊರನ್ನೇ ಕುಟುಂಬವನ್ನಾಗಿಸುವುದು ಭಕ್ತಿಯ ಲಕ್ಷಣವಾಗುತ್ತದೆ ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯೊ ಸಾಂಕೇತಿಕವಾಗಿ ಪೂಜೆ ಮಾಡುವುದರ ಮೂಲಕ ಇಡೀ ಗ್ರಾಮದ ಎಲ್ಲಾ ಕುಟುಂಬಗಳನ್ನು ಒಂದು ಕಡೆ ಸೇರಿಸುವ ಜಾಗೃತಿಯನ್ನು ಮೂಡಿಸುವ ಅರಿವನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಿದೆ.

ಪುರುಷ ಪ್ರಧಾನ ಸಮಾಜದಂತೆ ಕಾಣುವ ಸಾಮಾಜಿಕ ಸಂರಚನೆಯಲ್ಲಿ ಮಹಿಳೆಯು ಸಮಾನತೆಯನ್ನು ಸಾಧಿಸುವ ಹಾಗೂ ಪುರುಷ ಪ್ರಧಾನ ಸಮಾಜಕ್ಕಿಂತ ಮೇಲ್ಗೈ ಸಾಧಿಸಿ ಕೌಟುಂಬಿಕ ಮತ್ತು ಸಾಮಾಜಿಕ ಸಬಲೀಕರಣದ ಜವಾಬ್ದಾರಿಯನ್ನು ಮಹಿಳೆಯರು ನಿರ್ವಹಿಸುತ್ತಾರೆ ಮುನ್ನಡೆಸುತ್ತಾರೆ ಎಂಬುದನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಸಾಧಿಸಿದೆ ಎಂದರು

ಜಿಲ್ಲಾ ಜನ ಜಾಗೃತಿ ಸಮಿತಿಯ ಸದಸ್ಯ ದಾ.ರಾ. ಮಹೇಶ್ ಮಾತನಾಡಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯು ಸುಮಾರು 20 ವರ್ಷಗಳಿಂದ ಇದೇ ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿದ್ದು ವಸತಿ ಇಲ್ಲದವರಿಗೆ ವಸತಿ ವ್ಯವಸ್ಥೆಯನ್ನು ವ್ಯಸನ ನಿರ್ಮೂಲನ ಕಾರ್ಯಗಾರಗಳನ್ನು ಹಾಗೂ ಮಹಿಳೆಯರನ್ನು ಮತ್ತು ಕುಟುಂಬಗಳನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು ಈ ಮೂಲಕ ನಿಜವಾಗಿಯೂ ಗ್ರಾಮೀಣಾಭಿವೃದ್ಧಿ ಆಗುತ್ತಿದೆ ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ಗ್ರಾಮಸ್ಥರು ನೆನೆಯಬೇಕು ಎಂದು ಅಭಿಪ್ರಾಯಪಟ್ಟರು.

ತಾಲೂಕು ಯೋಜನಾಧಿಕಾರಿ ನಾರಾಯಣ ಶೆಟ್ಟಿ ರವರು ಮಾತನಾಡಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯಾಗಿದ್ದು ಎಲ್ಲರನ್ನೂ ವಿಶೇಷವಾಗಿ ಮಹಿಳೆಯರನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸ್ವಾವಲಂಬಿಗಳನ್ನಾಗಿ ರೂಪಿಸಲು ಶ್ರಮಿಸುತ್ತಿದೆ ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯಕರ್ತರು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ ನಮಗೆ ಬೆನ್ನೆಲುಬಾಗಿ ರಾಜಶ್ರೀ ವೀರೇಂದ್ರ ಹೆಗಡೆ ರವರು ಡಾಕ್ಟರ್ ಹೇಮಾವತಿ ವಿ ಹೆಗಡೆ ರವರು ಬೆಂಬಲ ನೀಡುತ್ತಿದ್ದಾರೆ ಎಂದು ಸ್ಮರಿಸಿದರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸತ್ಯನಾರಾಯಣ ಸ್ವಾಮಿ ಸಾಮೂಹಿಕ ಪೂಜೆಯ ಅಧ್ಯಕ್ಷರಾದ ಲತಾ ರವರು ಮಾತನಾಡಿ ಪೂಜೆಯ ನೆಪದಲ್ಲಿ ಗ್ರಾಮಸ್ಥರನ್ನು ಒಂದು ಕಡೆ ಸೇರಿಸುವ ಮಹಿಳೆಯರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದು ಅಧ್ಯಕ್ಷೀಯ ಮಾತುಗಳಾಡಿದರು. ಕಾರ್ಯಕ್ರಮದಲ್ಲಿ   ಮೇಲ್ವಿಚಾರಕಿ  ರೇಣುಕಾ  ಗ್ರಾಮೀಣಾಭಿವೃದ್ಧಿ ಸಂಸ್ಥೆ  ಎಸ್ ಪಿ ಗಳಾದ ಸುಮಂತ್ ಪವಿತ್ರಾ ಲೀಲಾವತಿ ಕುಮಾರಿ ವಲಯದ ಎಲ್ಲಾ ಕಾರ್ಯಕರ್ತರು ಭಾಗವಹಿಸಿದ್ದರು ಸುಮಾರು 500ಕ್ಕೂ ಹೆಚ್ಚು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮೂಲಕ ಕಾರ್ಯನಿರ್ವಹಿಸುತ್ತಿರುವ ಸ್ವಸಹಾಯ ಸಂಘದ ಮಹಿಳೆಯರು ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು.

admin
the authoradmin

Leave a Reply

Translate to any language you want