ಕಟ್ಟೆಮಳಲವಾಡಿ ಸರ್ಕಾರಿ ಪ್ರೌಢಶಾಲೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ಯಾಡ್ ನೀಡಿ ಬೀಳ್ಕೊಡುಗೆ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಕಟ್ಟೆಮಳಲವಾಡಿ ಸರ್ಕಾರಿ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ಪರೀಕ್ಷಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ಯಾಡ್ ನೀಡಿ ಬೀಳ್ಕೊಡಲಾಯಿತು.
ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಕಟ್ಟೆಮಳಲವಾಡಿ ಸರ್ಕಾರಿ ಪ್ರೌಢಶಾಲೆಯ 2025 -26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗುವ 44 ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ಯಾಡ್ ನೀಡುವುದರ ಜೊತೆಗೆ ಶಾರದಾ ಪೂಜೆ ಕಾರ್ಯಕ್ರಮ ನಡೆಸಿ ಗೌರವದಿಂದ ಬೀಳ್ಕೊಡಲಾಯಿತು. ಅಲ್ಲದೆ ಶುಭ ಹಾರೈಸಲಾಯಿತು.

ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ಯಾಡ್ ದಾನಿಗಳಾದ ಮೈಸೂರು ಜಿಲ್ಲಾ ಡಿಎಸ್ಎಸ್ ನ ಸಂಚಾಲಕಿ ಮಹದೇವಮ್ಮ ಮಾತನಾಡಿ ಇಂದಿನ ಸಮಾಜದ ನಾಗರಿಕರು ದೇವಸ್ಥಾನಗಳಿಗೆ ಹೆಚ್ಚು ಹೆಚ್ಚು ಹರಕೆ ಕಾಣಿಕೆ ನೀಡಿದಂತೆ ಮಕ್ಕಳೇ ದೇವರು ಎಂಬ ಭಾವನೆಯಲ್ಲಿ ಮಕ್ಕಳ ಭವಿಷ್ಯದ ಶಿಕ್ಷಣಕ್ಕೆ ಸಹಾಯ ಮಾಡಿದಾಗ ಮಕ್ಕಳಲ್ಲಿ ದೇವರನ್ನು ಕಾಣುತ್ತೇವೆ.
ಜೊತೆಗೆ ಸರ್ಕಾರಿ ಶಾಲೆಯಲ್ಲಿ ಓದುವ ಬಡ ಮಕ್ಕಳಿಗೆ ಸಹಾಯ ಮಾಡುವ ಮನೋಭಾವನೆಯನ್ನು ಬೆಳೆಸಿಕೊಂಡಾಗ ನಾವು ಮಾಡುವ ಸಹಾಯ ವಿದ್ಯಾರ್ಥಿಗಳು ಸಹ ಮುಂದೊಂದು ದಿನ ನೆನೆದು ನಿಮ್ಮಂತೆ ಮತ್ತೊಬ್ಬರಿಗೆ ಸಹಾಯ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಲು ಸಹಾಯವಾಗುತ್ತದೆ ಎಂದರು.

ಮುಖ್ಯ ಶಿಕ್ಷಕಿ ಸುಮಾ ರಾಣಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರು, ನಿರ್ದೇಶಕರುಗಳಾದ ಅಶೋಕ,ಸತೀಶ್, ಶಿವು, ಸೋಮಸುಂದರ್, ಜ್ಯೋತಿ, ಹಾಗೂ ಪೋಷಕರು ಸಹ ಶಿಕ್ಷಕರು ಇದ್ದರು.







