ಕನ್ನಡ ಸಿನಿಮಾಗಳಲ್ಲಿ ನಟಿಸಿ ಗಮನಸೆಳೆದ ತೆಲುಗಿನ ಹಿರಿಯ ನಟಿ ರಾಜಶ್ರೀ… ಇವರು ನಟಿಸಿದ ಚಿತ್ರಗಳೆಷ್ಟು?

ಹಳೆ ತಲೆಮಾರಿನ ನಟಿಯರನ್ನು ನೋಡಿದರೆ ಅವರ ಪೈಕಿ ಹೆಚ್ಚಿನವರು ಆ ಕಾಲಕ್ಕೆ ಬಹುಭಾಷಾ ಚಿತ್ರಗಳಲ್ಲಿ ನಟಿಸಿ ಚಿತ್ರರಸಿಕರನ್ನು ರಂಜಿಸಿದವರೇ ಜಾಸ್ತಿ… ಅವತ್ತು ಚಿತ್ರ ರಸಿಕರು ಎಲ್ಲ ಭಾಷೆಯ ನಟ, ನಟಿಯರನ್ನು ಇಷ್ಟಪಡುತ್ತಿದ್ದರು. ಅವರ ಅಭಿನಯನವನ್ನು ಮೆಚ್ಚುತ್ತಿದ್ದರು. ಹೀಗಾಗಿಯೇ ಅವರೆಲ್ಲರೂ ಬಹುಭಾಷಾ ಚಿತ್ರಗಳಲ್ಲಿ ಹೆಸರು ಮಾಡಲು ಸಾಧ್ಯವಾಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ… ಇಂತಹ ನಟಿಯರ ಪೈಕಿ ಕುಸುಮಾ ಕುಮಾರಿ(ರಾಜಶ್ರೀ, ಗ್ರೇಸಿ) ಒಬ್ಬರಾಗಿದ್ದಾರೆ. ಇವರನ್ನು ನೆನಪಿಸುವ ಕಾರ್ಯವನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಮಾಡಿದ್ದಾರೆ…

ಇದನ್ನೂ ಓದಿ: ಚಂದನವನದಲ್ಲಿ ಮಿಂಚಿ ಮರೆಯಾದ ಹಿರಿಯ ನಟಿ ಕಮಲಾಬಾಯಿ
1945ರಲ್ಲಿ ಆಗಿನ ಕಾಲದ ಬ್ರಿಟಿಷ್ ಸಾಮ್ರಾಜ್ಯದಲ್ಲಿ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದ ಇಂದಿನ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಎಲೂರು ಗ್ರಾಮದ ಸುಸಂಸ್ಕೃತ ಮಧ್ಯಮ ವರ್ಗ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ರೈಲ್ವೆ ಸ್ಟೇಶನ್ ಮಾಸ್ಟರ್ ಹುದ್ದೆಯಲ್ಲಿದ್ದು ವರ್ಗಾವಣೆಆದ ನಂತರ ತಮ್ಮ ಕುಟುಂಬದ ಇಬ್ಬರು ಹೆಣ್ಣುಮಕ್ಕಳು ಮತ್ತು ಮಡದಿಯೊಡನೆ ಮದ್ರಾಸಿಗೆ ಬಂದು ನೆಲೆಸಿದಾಗ ಕೇವಲ 9ವರ್ಷ ವಯಸ್ಸಿನ ಬಾಲಕಿ ಆಗಿದ್ದ ಈ ತೆಲುಗು ಸುಂದರಿಯ ಮೂಲ ಹೆಸರು ಕುಸುಮಾ ಕುಮಾರಿ. ನಂತರ ಇವರನ್ನು ನಾಟಕ ಚಿತ್ರರಂಗ ನೃತ್ಯ ಮುಂತಾದ ಕಲೆ-ಅಭಿನಯ ಕ್ಷೇತ್ರಗಳಲ್ಲಿ ಗ್ರೇಸಿ, ರಾಜಶ್ರೀ ಎಂಬ ಹೆಸರಿನಿಂದ ಗುರುತಿಸಲಾಯಿತು!

1956ರಲ್ಲಿ ತೆರೆಕಂಡ ನಾಗದೇವತೈ ತಮಿಳು ಚಿತ್ರದಲ್ಲಿ ಬಾಲ ನಟಿಯಾಗಿ ರಾಜಶ್ರೀ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ತತ್ಪರಿಣಾಮ ಕಾಲೇಜು ಮೆಟ್ಟಿಲೇರುವ ಅವಕಾಶ-ಸಮಯ ದೊರಕಲಿಲ್ಲ. ಪದವೀಧರೆಯಾಗಿ ತನ್ನ ತಂದೆಯಂತೆ ತಾನೂ ಸಹ ಸರ್ಕಾರಿ ನೌಕರಿ ಪಡೆಯಬೇಕೆಂಬ ಇವರ(ಪೋಷಕರ) ಆಸೆ-ಆಕಾಂಕ್ಷೆ ಈಡೇರಲೇ ಇಲ್ಲ. ಆದರೆ ಈಕೆ ಉತ್ತಮ ಶಾಸ್ತ್ರೀಯ ಭರತನಾಟ್ಯ ಪ್ರವೀಣೆ ಆಗಿದ್ದರಿಂದ ಸಿನಿ ಲೋಕಕ್ಕೆ ಬರುವ ಮುನ್ನ ಮತ್ತು ನಂತರ ತಮ್ಮದೆ ನಾಟ್ಯಕಲಾ ಮಂಡಳಿ ಆಶ್ರಯದಲ್ಲಿ ಪ್ರಪಂಚದಾದ್ಯಂತ ಅದ್ಭುತ ನೃತ್ಯ ಕಾರ್ಯಕ್ರಮಗಳನ್ನ ದೇಶ-ವಿದೇಶಗಳಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿದರು. ತನ್ಮೂಲಕ ಹಣ ಕೀರ್ತಿ ಪ್ರಶಸ್ತಿ ಬಿರುದು ಬಹುಮಾನ ಸಂಪತ್ತು ಗಳಿಸಿದ್ದಲ್ಲದೆ ಹಲವಾರು ಶಿಷ್ಯವೃಂದ ವನ್ನೂ ಪಡೆದರು!
ಇದನ್ನೂ ಓದಿ:ಚಂದನವನದಲ್ಲಿ ನೆನಪಾಗಿ ಉಳಿದ ಹಿರಿಯ ನಟಿ ಎಂ.ವಿ.ರಾಜಮ್ಮ…
1960ರಲ್ಲಿ ಬಿಡುಗಡೆಯಾದ ‘ನಿತ್ಯಕಲ್ಯಾಣಂ ಪಚ್ಚತೋರಣಂ’ ತೆಲುಗು ಚಿತ್ರದಲ್ಲಿ ನವನಟ ರಾಮಕೃಷ್ಣ ಎದುರು ನಾಯಕಿಯಾಗಿ ಆಂಧ್ರದ ಆದ್ಯಂತ ಧೂಳೆಬ್ಬಿಸಿದರು. ತೆಲುಗು ಮೂಲದ ಈ ಹ್ಯಾಂಡ್ಸಂ ನಟ ರಾಮಕೃಷ್ಣ ತಮಿಳು ಮಲಯಾಳಂ ತೆಲುಗು ಮೂರೂ ಭಾಷೆಯ 200ಕ್ಕು ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ಈ ಖ್ಯಾತ ನಟನ ಅನೇಕ ಚಿತ್ರಗಳಲ್ಲಿ ರಾಜಶ್ರೀ ನಟಿಸುವ ಮೂಲಕ ಇವರಿಬ್ಬರ ಜೋಡಿ ಬೊಂಬಾಟ್ ಎನಿಸಿತ್ತು! ಹತ್ತಾರು ಜಾನಪದ ಪೌರಾಣಿಕ ಐತಿಹಾಸಿಕ ತೆಲುಗು ಚಿತ್ರಗಳಲ್ಲಿ ಈಕೆಯ ಅಭಿನಯ ದಕ್ಷಿಣ ಭಾರತದಲ್ಲೇ ಮನೆಮಾತಾಯಿತು. ವಿಶೇಷವಾಗಿ ಎನ್.ಟಿ.ಆರ್. ಕಾಂತರಾವ್ ನಟಿಸಿದ ಚಿತ್ರಗಳಲ್ಲಿ ರಾಜಶ್ರೀ ಅಭಿನಯ ಅಮೋಘ. ಪ್ರತಿಯೊಂದು ಪಾತ್ರವನ್ನ ಅರ್ಥ ಮಾಡಿಕೊಂಡು ಅವುಗಳಿಗೆ ಜೀವ ತುಂಬುತ್ತಿದ್ದ ಉತ್ತಮ ಅಭಿನೇತ್ರಿ ಎನಿಸಿದರು.

ಬ್ಲಾಕ್ ಬಸ್ಟರ್ ತಮಿಳು ಚಿತ್ರಗಳಾದ ನೀಯುಂನಾನುಂ ಭಾಮಾವಿಜಯಂ, ಕಾದಲಿಕ್ಕ ನೇರಮಿಲ್ಲೈ (ಪ್ರೇಮಿಂಚಿ ಚೂಡು- ತೆಲುಗು; ಪ್ಯಾರ್ ಕಿಯೇಜಾ-ಹಿಂದಿ) ಸಿನಿಮಾಗಳಲ್ಲಿ ಜನಪ್ರಿಯನಟ ರವಿಚಂದ್ರನ್, ಹಾಸ್ಯನಟ ತಾಯ್‍ನಾಗೇಶ್, ಬಾಲಿವುಡ್ ನಟರಾದ ಶಶಿಕಪೂರ್ ಮೆಹಮೂದ್ ಮುಂತಾದವರ ಚಿತ್ರಗಳಲ್ಲಿ ಸೂಪರ್ ಆಗಿ ಅಭಿನಯಿಸಿ ಎಲ್ಲರ ಮೆಚ್ಚುಗೆ ಪಡೆದರು. ಕನ್ನಡ ಚಿತ್ರರಂಗದಲ್ಲಿ ಮುದ್ದುನಟಿ ಎನ್. ಭಾರತಿ ಚಂದನವನಕ್ಕೆ ಆಗಮಿಸುವ ತನಕ ಚೂಪುಗಲ್ಲದ ಕೋಲುಮುಖದ ಚೆಲುವೆ ರಾಜಶ್ರೀ. ಕನ್ನಡ ತೆಲುಗು ತಮಿಳು ಹಿಂದಿ ಮಲಯಾಳಂ ಚಿತ್ರಗಳಲ್ಲಿ ನಟಿಸುವ ಮೂಲಕ ಪಂಚಭಾಷಾ ತಾರೆಯಾಗಿ ಜನಪ್ರಿಯತೆ ಗಳಿಸಿದರು.
ಇದನ್ನೂ ಓದಿ: ಇದು ಮೈಸೂರಿನ ನಟಿಯಾಗಿದ್ದ ಎಂ. ಜಯಶ್ರೀರವರ ಬಣ್ಣದ ಬದುಕಿನಾಚೆಗಿನ ಕಥೆ…
1960ರಲ್ಲಿ ಬಿಡುಗಡೆಯಾದ ವಿಕ್ರಂ ಪ್ರೊಡಕ್ಷನ್ ಸಂಸ್ಥೆಯ ಬಿ.ಎಸ್.ರಂಗ ನಿರ್ಮಾಪಕರಾಗಿ ಪಿ.ಜಿ.ಮೋಹನ್ ನಿರ್ದೇಶನದ ಜಿ.ವಿ.ಅಯ್ಯರ್ ಚಿತ್ರಕಥೆಯ ಹಾಗೂ ಜಿ.ಕೆ.ವೆಂಕಟೇಶ್ ಸಂಗೀತವುಳ್ಳ ಅದ್ಧೂರಿ ಪೌರಾಣಿಕ ಕನ್ನಡ ಫಿಲಂ ದಶಾವತಾರ ಚಿತ್ರದ ಮೂಲಕ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟರು. ರಾಜ್‍ಕುಮಾರ್ ಉದಯ್‍ಕುಮಾರ್ ಕಲ್ಯಾಣ್ ಕುಮಾರ್, ರಾಜಾಶಂಕರ್ ದಿಗ್ಗಜರ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶ್ರೀನಾಥ್ ಗಂಗಾಧರ್ ವಿಷ್ಣುವರ್ಧನ್ ಅಂಬರೀಶ್ ಜತೆಗೂ ನಟಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದರು.

1955ರಿಂದ 1980ರವರೆಗೆ 25ವರ್ಷ ಪರ್ಯಂತ ಸ್ಯಾಂಡಲ್ ವುಡ್ ಸಿನಿಮಾಗಳಲ್ಲಿ ನಟಿಸಿರುವುದು ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದ 5 ಭಾಷೆಯ ಚಿತ್ರಗಳಲ್ಲಿ ನಟಿಸಿ ಮೆರೆದರು. 3 ತಲೆಮಾರುಗಳ 6 ಪೀಳಿಗೆಯ ನಟ ನಟಿಯರಿಗೆ ಮಾದರಿ ಆಗುವಂತೆ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದರು. 1977ರಲ್ಲಿ ತೋಟಾ ಪಾಂಚಜನ್ಯಂ ರವರನ್ನು ವಿವಾಹವಾದ ಬಳಿಕ 1979ರಲ್ಲಿ ತಮ್ಮ ಏಕೈಕ ಗಂಡು ಮಗುವಿನ ತಾಯಿಯಾದರು. 1983ರಲ್ಲಿ ತಮ್ಮ ಪತಿಯನ್ನು ಕಳೆದುಕೊಂಡ ಮೇರುನಟಿ ಚೆಲುವಿ ರಾಜಶ್ರೀ ಸಧ್ಯಕ್ಕೆ ಹಿರಿಯ ಕಲಾವಿದೆಯರಲ್ಲಿ ಓರ್ವರಾಗಿ ಇವತ್ತಿಗೂ ಸಾರ್ಥಕ ಜೀವನ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕನ್ನಡದ ಪ್ರಪ್ರಥಮ ವಾಕ್ ಚಿತ್ರದ ಹೀರೋಯಿನ್ ತ್ರಿಪುರಾಂಭ…
ಇವರಿಗೆ ಲಭಿಸಿರುವ ಪ್ರಶಸ್ತಿಗಳು… *ಎಂ.ಜಿ.ಆರ್.ಪ್ರಶಸ್ತಿ-2004, *ತಮಿಳುನಾಡು ರಾಜ್ಯ ಸರ್ಕಾರದ ‘ಕಲೈಮಾಮಣಿ’ ಪ್ರಶಸ್ತಿ-2012, *ವಿವಿಧ ರಾಜ್ಯಗಳ ಉತ್ತಮ ನಟಿ ರಾಜ್ಯ ಪ್ರಶಸ್ತಿ ಹಾಗೂ *ಫಿಲಂಫೇರ್ ಪ್ರಶಸ್ತಿ

ರಾಜಶ್ರೀ ನಟಿಸಿದ ಫಿಲಂಸ್ ಗಳು.. ದಶಾವತಾರ(1960), ಆಶಾಸುಂದರಿ, ತೇಜಸ್ವಿನಿ, ಸ್ವರ್ಣಗೌರಿ, ರತ್ನಮಂಜರಿ, ಕರುಣೆಯೇ ಕುಟುಂಬದಕಣ್ಣು, ಕಣ್ತೆರೆದುನೋಡು, ಸಂತತುಕಾರಾಂ, ಚಂದ್ರಕುಮಾರ, ಶಿವರಾತ್ರಿ ಮಹಾತ್ಮೆ, ಚಂದವಳ್ಳಿಯ ತೋಟ, ಶಿವಗಂಗೆಮಹಾತ್ಮೆ, ಸತ್ಯಹರಿಶ್ಚಂದ್ರ, ನಾಗಪೂಜ, ಬಾಲನಾಗಮ್ಮ, ಮೋಹಿನಿ ಭಸ್ಮಾಸುರ, ಅರುಣೋದಯ, ಗೃಹಲಕ್ಷ್ಮಿ, ಭಲೇಬಸವ, ಸುಖಸಂಸಾರ, ಮಿಸ್ಟರ್ ರಾಜ್‍ಕುಮಾರ್, ಸಿ.ಐ.ಡಿ.ರಾಜಣ್ಣ, ಮೊದಲರಾತ್ರಿ, ಜ್ವಾಲಾಮೋಹಿನಿ, ಸಿ.ಐ.ಡಿ72, ಊರ್ವಶಿ, ಮಹದೇಶ್ವರ ಪೂಜಾಫಲ, ಮಣ್ಣಿನಮಗಳು, ಆಶೀರ್ವಾದ, ನಾಗಕನ್ಯೆ, ಶನಿಪ್ರಭಾವ, ದೇವದಾಸಿ/1978-ಅಂತಿಮ ಫಿಲಂ!
ಇದನ್ನೂ ಓದಿ: ಚಂದನವನದಿಂದ ಮರೆಯಾದ ಅಭಿನಯ ಸರಸ್ವತಿ ಡಾ.ಬಿ.ಸರೋಜಾದೇವಿ…









1960s BEAUTY QUEEN RAJSHRI article is superb. Excellent writings by KUMAR KAVI NATARAJ👍👏👏👏👏👏⚘🎉
D.K.Srinivas chettiyar ex-proprìetor,Aradhana textiles & Embroideries, Sreerampete, near Olympia talkies, Mysore.
1960s BEAUTY QUEEN RAJASHREE, the heroine of Rajkumar films like Mr.Rajkumar and CID RAJANNA ,etc., this article is superb. Excellent writings by KUMAR KAVI NATARAJ👍👏👏👏👏👏⚘🎉 D.K.Srinivas chettiyar ex-proprìetor,Aradhana textiles & Embroideries, Sreerampete, near Olympia talkies, Mysore.
Former kannada tamil Telugu actress RAJASHREE articles is really enjoyable and super-duper. Pruthvi shirke kengeri Bengaluru
Former kannada tamil Telugu hindi Malayalam actress RAJASHREE articles is really enjoyable and super-duper. Pruthvi shirke kengeri Bengaluru
Beautiful Actress RAJASHREE article fantastic & nteresting.
Thanks to Natraj sir 🙏
Srikanth rathod, Kolar
Beautiful Actress RAJASHREE article fantastic & nteresting. Thanks to Natraj sir 🙏 Srikanth rathod, Kolar
Nanna vidyarti jeevanàdalli naaanu, nanna classmates favorite actresses JAYALALITA and RAJASHREE. Ivara bagge kavi nataraj sir tumba chennagi bareda ee article namage istavaayitu. Thank you very much sir 🙏 👍 😀 👏 😊
Smt VANAJA VENUGOPAL, COTTONPET, BENGALURU.
Nanna vidyarti jeevanàdalli naaanu, nanna classmates favorite actresses JAYALALITA and RAJASHREE. Ivara bagge kavi nataraj sir tumba chennagi bareda ee article namage istavaayitu. Thank you very much sir🙏👍👏 Smt VANAJA VENUGOPAL, COTTONPET, BENGALURU.
1970ರ ಧಶಕದ ಸಂದರಿ ನಟಿ ಉತ್ತಮ ನಟಿ ರಾಜಶ್ರೀ ಲೇಖನ ಓದಿದೆ. ಕವಿ ನಟರಾಜರು ಎಲ್ಲರಿಗೂ ಅರ್ಥವಾಗುವ ಸರಳ ಪದಗಳಲ್ಲಿ ಚೆನ್ನಾಗಿ ಬರೆದಿದ್ದಾರೆ. ನಮಸ್ಕಾರ. Jyothi Chandrahasa, ujire, Dakshina Kannada district.
1970ರ ಧಶಕದ ಸಂದರಿ ಹಾಗೂ ಉತ್ತಮ ನಟಿ ರಾಜಶ್ರೀ. ಇವರ ಲೇಖನ ಓದಿ ಖುಷಿಯಾಗಿದೆ. ಕವಿ ನಟರಾಜರು ಎಲ್ಲರಿಗೂ ಅರ್ಥವಾಗುವ ಸರಳ ಪದಗಳಲ್ಲಿ ಚೆನ್ನಾಗಿ ಬರೆದಿದ್ದಾರೆ. ನಮಸ್ಕಾರ. Jyothi Chandrahasa, ujire, Dakshina Kannada district.
What a Wonderful article written by NATRAJ sir on JAYALALITA and RAJASHREE. Great contributions to Sandalwood film world. Rajesh and Ramesh, Davanagere.
What a Wonderful article written by NATRAJ sir on JAYALALITA and RAJASHREE. Great contributions to Sandalwood film world. Rajesh&Ramesh, Davanagere bennedose, Davanagere South
ಜಯಲಲಿತಾರ ಲೇಖನ ತುಂಬ ಚೆನ್ನಾಗಿ ಅರ್ಥ ಆಗುವಂತೆ ನಮಗೆ ಗೊತ್ತಿಲ್ಲದ ಅನೇಕ ಆಶ್ಚರ್ಯ ಮಾಹಿತಿಗಳಿಂದ ಬರೆದ ನಟರಾಜ ಕವಿಗೆ ಧನ್ಯವಾದ ಸರ್.
ಯಶೋಧಮ್ಮ
ಜಯಲಲಿತಾರ ಲೇಖನ ತುಂಬ ಚೆನ್ನಾಗಿ ಅರ್ಥ ಆಗುವಂತೆ ನಮಗೆ ಗೊತ್ತಿಲ್ಲದ ಅನೇಕ ಆಶ್ಚರ್ಯ ಮಾಹಿತಿಗಳಿಂದ ಬರೆದ ನಟರಾಜರವರಿಗೆ ಧನ್ಯವಾದ ಸರ್.
ಯಶೋಧಮ್ಮ, ಅನುಭವ ನಗರ, ಬೆಂಗಳೂರು
What a Wonderful article written by NATRAJ sir on JAYALALITA&RAJASHREE. Great contribution to Sandalwood film world. Rajesh&Ramesh, Davanagere South
FIRST CLASS ARTICLE IS WRITTEN BY NATRAJ SIR ON RAJASHREE, 👏 👍 🙏. Smt.SANJANA SHYAMALAN, SHIVAJINAGAR, BANGALORE
FIRST CLASS ARTICLE IS WRITTEN BY NATRAJ SIR ON olden days famous actress (of course my mom’s favorite one) RAJASHREE, 👏 👍 🙏. Smt.SANJANA SHYAMALAN, SHIVAJINAGAR, BANGALORE