LatestMysore

ಮೈಸೂರು ಕೊಡವ ಸಮಾಜದಲ್ಲಿ ಜ.ತಿಮ್ಮಯ್ಯರವರ ಜನ್ಮದಿನಾಚರಣೆ…ವೀರ ಸೇನಾನಿಗೆ ಗೌರವ ನಮನ

ಮೈಸೂರು: ಭಾರತೀಯ ಸೇನೆ ಕಂಡ ಅಪ್ರತಿಮ ಸೇನಾನಿ ಜನರಲ್ ಕೆ.ಎಸ್. ತಿಮ್ಮಯ್ಯನವರು ಉನ್ನತ ಸೇನಾಧಿಕಾರಿಯಾಗಿ ಸ್ವಾತಂತ್ರ್ಯ ನಂತರದ ದೇಶದ ಆಂತರಿಕ ಪರಿಸ್ಥಿತಿ ಯನ್ನು  ಸೇನೆಯ ಮೂಲಕ ಮೂಲಕ ಹತೋಟಿಗೆ ತಂದು, ನೆರೆ ರಾಷ್ಟ್ರಗಳೊಡನೆ ನಡೆದ  ಯುದ್ಧಗಳಲ್ಲಿ ನೇರವಾಗಿ ಸಮರ ಭೂಮಿಯಲ್ಲಿ ಖುದ್ದು ಹಾಜರಿದ್ದು ಸೈನಿಕರಿಗೆ  ರಣೋತ್ಸಾಹ ತುಂಬುತ್ತಿದ್ದರು ಎಂದು ಮೈಸೂರು ಜಿಲ್ಲಾ ಸಶಸ್ತ್ರ ಪಡೆಗಳ ಸೈನಿಕರ ಸಂಘದ ಅಧ್ಯಕ್ಷ ಪೊನ್ನಿಮಾಡ ಬಿದ್ದಪ್ಪ ಅವರು ಹೇಳಿದರು .

ಮೈಸೂರಿನ ವಿಜಯನಗರದ ಜನರು ತಿಮ್ಮಯ್ಯ ರಸ್ತೆಯಲ್ಲಿರುವ ಮೈಸೂರು ಕೊಡವ ಸಮಾಜ, ಕಾವೇರಿ ಮಹಿಳಾ ಸಮಾಜ ಹಾಗೂ ವಿವಿಧ ಸಂಘಟನೆಗಳೊಂದಿಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಸಮಾಜದ  ಪ್ರಮುಖರು ಜನರಲ್ ತಿಮ್ಮಯ್ಯ ಅವರ 120 ನೇ ಜನ್ಮದಿನಾಚರಣೆಯಲ್ಲಿ ಅವರ ಭಾವಚಿತ್ರಕ್ಕೆ  ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ಕೊಡೋ ಸಮಾಜದ ಅಧ್ಯಕ್ಷ ಪೂನ್ಜಂಡ ಗಣಪತಿ,  ಉಪಾಧ್ಯಕ್ಷ ಮಾಚಿಮಾಡ ನಾಣಯ್ಯ, ಗೌರವ ಕಾರ್ಯದರ್ಶಿ ಕೆಟೋಳಿರ ಬೆಳ್ಳಿಯಪ್ಪ, ಜಂಟಿ ಕಾರ್ಯದರ್ಶಿ ಸುಮಿತ ಗೋಪಾಲ್,  ಖಜಾಂಚಿ ಕೊಟ್ಟಂಗಡ ಪೆಮ್ಮಯ್ಯ ಮಾಜಿ ಅಧ್ಯಕ್ಷರಾದ ಕೇಕಡ ಬೆಳ್ಳಿಯಪ್ಪ,  ಮೇಚಂಡ ಶಶಿ ಪೊನ್ನಪ್ಪ

ಸಂಘದ ನಿರ್ದೇಶಕರಾದ ಅಲ್ಲಾರಂಡ ಪ್ರತಿಮಾ ಬೋಪಣ್ಣ, ಅಚ್ಛಾಂಡಿರ ಸೋಮಯ್ಯ, ಐಲಪಂಡ ಸೋಮಯ್ಯ, ಚೊಟ್ಟಂಡ ಚಂಗಪ್ಪ, ಕೋಡಿರ ನಂದಕುಮಾರ್, ಕಂಜಿತಂಡ ಮನು ಅಯ್ಯಪ್ಪ, ಕಟ್ಟೇರ ಗಣಪತಿ,  ಕೆಂಜಂಗಡ ಸನ್ನಿ ಕಾರಿಯಪ್ಪ,  ಉಳ್ಳಿಯಡ ಚಿದಾನಂದ,  ಮುಕ್ಕಾಟಿರ ಅಶೋಕ್,  ಕಾವೇರಿ ಮಹಿಳಾ ಸಂಘದ ಅಧ್ಯಕ್ಷೆ ಕೊಲ್ಲಿರ ಬೊಳ್ಳಮ್ಮ ಕುಟ್ಟಪ್ಪ,  ಮಾಜಿ ಅಧ್ಯಕ್ಷೆ  ಪೂನ್ಜಾಂಡ ಲವ್ಲಿ ಅಪ್ಪಯ್ಯ ಹಾಗೂ ಪ್ರಮುಖರಾದ ಚಟ್ಟಂಗಡ ಚಂಗಪ್ಪ, ಕೊಂಗಾಂಡ ದಿಲೀಪ್ ಬಿದ್ದಪ್ಪ, ಪಟ್ಟಡ ಜಯಕುಮಾರ್, ವಾಟೇರಿರ ಪ್ರಕಾಶ್,  ಅಂಜಂಡ ಕಾವೇರಿಯಪ್ಪ,  ಐಚಂಡ ಜಯ ಚಂಗಪ್ಪ, ಜಮ್ಮುಡ ಅಯ್ಯಣ್ಣ, ಪಂದಿಯಂಡ ಗಿರೀಶ್, ಕೇಕಡ ಬೆಳ್ಳಿಯಪ್ಪ,  ಪಂದ್ಯಂಡ ವಿಮಲಾ, ಕೇಕಡ ಸರಸ್ವತಿ, ಕೀತಿಯಂಡ ಕಾವ್ಯ, ಕೊದಂಡೇರ  ಪುಷ್ಪ, ಅಪ್ಪಂಡೇರಂಡ ತಾರ, ಕೊಡವ ಯೂತ್ ವಿಂಗ್ ಹಾಗೂ ಕಲ್ಚರಲ್ ಅಸೋಸಿಯೇಷನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

admin
the authoradmin

Leave a Reply

Translate to any language you want