ವಯನಾಡು: ಕೇರಳದ ವಯನಾಡಿನ ಮೇಪ್ಪಾಡಿ ಬಳಿಯ ಕಲ್ಲಡಿ ಸುರಂಗ ನಿರ್ಮಾಣ ಸ್ಥಳದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ನಾಲ್ಕಕ್ಕೆ ಏರಿದೆ. ಒಂಬತ್ತು ಜನರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವಶೇಷಗಳ ಅಡಿಯಲ್ಲಿ ಇನ್ನೂ ಹಲವರು ಸಿಕ್ಕಿಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ.

ಘಟನೆಯ ಬಳಿಕ ಇದೀಗ ಅಪಘಾತದ ಆಘಾತಕಾರಿ ದೃಶ್ಯಗಳು ಒಂದರ ಮೇಲೊಂದರಂತೆ ಹೊರಬರುತ್ತಿದ್ದು, ಎದೆ ಝಲ್ಲೆನ್ನುವಂತೆ ಮಾಡುತ್ತಿದೆ. ಭೂಕುಸಿತದಿಂದಾಗಿ ವೇಗವಾಗಿ ಹಿಂದಿರುಗಿದ ಟ್ಯಾಂಕರ್ ಲಾರಿಯ ಮಧ್ಯೆ ಜನರು ಸಿಕ್ಕಿಹಾಕಿಕೊಂಡು ಪವಾಡಸದೃಶವಾಗಿ ತಪ್ಪಿಸಿಕೊಳ್ಳುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಮಂಗಳವಾರ ಬೆಳಗ್ಗೆ 11 ಗಂಟೆಗೆ ಈ ಘಟನೆ ನಡೆದಿದ್ದು, ರಸ್ತೆ ಕೆಸರು ಮತ್ತು ನೀರಿನಿಂದ ಆವೃತವಾಗಿವೆ.

ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಎನ್ಡಿಆರ್ ಎಫ್ ತಂಡಗಳು ಸ್ಥಳಕ್ಕೆ ತಲುಪಿದ್ದು ಭೂಕುಸಿತದ ವೇಳೆ ಯಾರಾದರೂ ಸಿಲುಕಿ ಕೊಂಡಿದ್ದಾರಾ ಎಂದು ಹುಡುಕಾಟ ನಡೆಸುತ್ತಿದ್ದಾರೆ. ಇನ್ನೊಂದೆಡೆ ಮುಖ್ಯಮಂತ್ರಿ ವಿ. ಡಿ. ಸತೀಶನ್ ಅಧ್ಯಕ್ಷತೆಯಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ನಡೆದ ಸಭೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
ಮುಖ್ಯಮಂತ್ರಿಗಳ ಸೂಚನೆಯಂತೆ ಸಚಿವರಾದ ಟಿ. ಸಿದ್ದಿಕಿ ಮತ್ತು ಎ. ಪಿ. ಅನಿಲ್ ಕುಮಾರ್ ಅವರು ವಯನಾಡಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ವಯನಾಡ್ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರೆದಿದ್ದು. ನಿರ್ಮಾಣದಲ್ಲಿ ಕಾರ್ಯದಲ್ಲಿ ನಿರತರಾಗಿದ್ದ ಹೊರ ರಾಜ್ಯದ ಕಾರ್ಮಿಕರು ಭೂಕುಸಿತದಲ್ಲಿ ಸಿಲುಕಿರುವ ಸಾಧ್ಯತೆಯಿದ್ದು ಹುಡುಕಾಟ ನಡೆಯುತ್ತಿದೆ ಎಂದು ಸಚಿವ ಕೆ. ಮುರಳೀಧರನ್ ಹೇಳಿದ್ದಾರೆ.

ಘಟನೆ ಬಳಿಕ ವಯನಾಡ್ ನ ಕಲ್ಲಾಡಿ ಸುರಂಗ ರಸ್ತೆಯ ಬಳಿ ವಾಹನಗಳು ಸಾಲುಗಟ್ಟಿ ನಿಂತಿವೆ. ಸೇತುವೆಯ ಕಾಂಕ್ರೀಟ್ ಗೋಡೆ ಕುಸಿದಿದೆ. ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಳೆಯ ನಡುವೆ ಕಾರ್ಯಾಚರಣೆಯನ್ನು ಮುಂದುವರೆಸಲಾಗುತ್ತಿದೆ.

ಭೂಕುಸಿತಕ್ಕೆ ಕಾರಣ ಯಾರು? ಕೇರಳ ಸಿಎಂ ಹೇಳಿದ್ದೇನು?
ಇದೀಗ ವಯನಾಡ್ ನಲ್ಲಿ ಸಂಭವಿಸಿದ ಭೂಕುಸಿತಕ್ಕೆ ಕೊಂಕಣ ರೈಲ್ವೆ ನಿಗಮವೇ ಕಾರಣ ಎಂದು ಕೇರಳ ಸರ್ಕಾರ ಆರೋಪಿಸಿದೆ. ಸುರಂಗ ನಿರ್ಮಾಣ ಪ್ರದೇಶದಲ್ಲಿ ಮಣ್ಣನ್ನು ತೆಗೆದುಹಾಕಲು ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆ ಆದೇಶ ನೀಡಿದ್ದರೂ ಗುತ್ತಿಗೆದಾರರು ಅದನ್ನು ಪಾಲಿಸಿಲ್ಲ ಎಂದು ಮುಖ್ಯಮಂತ್ರಿ ವಿ. ಡಿ. ಸತೀಶನ್ ಆರೋಪಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯು ಸಭೆಯ ವಿವರಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಮಣ್ಣನ್ನು ತೆಗೆದುಹಾಕುವಂತೆ ಸೂಚಿಸಲಾಗಿದೆ. ಲೋಕೋಪಯೋಗಿ ಸಚಿವ ಪಿ. ಕೆ. ಬಶೀರ್ ಈ ಅಪಘಾತಕ್ಕೆ ಕೊಂಕಣ ರೈಲ್ವೆಯೇ ಕಾರಣ ಎಂದು ಹೇಳಿದ್ದಾರೆ. ಇದು ನೈಸರ್ಗಿಕ ವಿಕೋಪವಲ್ಲ, ಆದರೆ ಅವೈಜ್ಞಾನಿಕ ಮಣ್ಣಿನ ಸವೆತದಿಂದ ಉಂಟಾದ ಮಾನವ ನಿರ್ಮಿತ ವಿಕೋಪ ಎಂದು ದೂರಿದ್ದಾರೆ.









Excellent read, I just passed this onto a friend who was doing a little research on that. And he actually bought me lunch because I found it for him smile Therefore let me rephrase that: Thank you for lunch! “A human being has a natural desire to have more of a good thing than he needs.” by Mark Twain.