ArticlesLatestLife style

ಪೋಷಕರೇ ಮಕ್ಕಳಿಗೆ ಮೊಬೈಲ್ ನೀಡುವ ಮುನ್ನ ಯೋಚಿಸಿ… ಮಕ್ಕಳಿಗೆ ಎದುರಾಗಿದೆ ಆಟಿಸಂನ ಅಪಾಯ..!

ನಿಮಗೆ ಗೊತ್ತಾ? ಭಾರತದಲ್ಲಿ 68 ಮಕ್ಕಳಲ್ಲಿ ಒಂದು ಮಗು ಆಟಿಸಂ ಕಾಯಿಲೆಯಿಂದ ಬಳಲುತ್ತಿದೆ...

ಇವತ್ತಿನ ಪರಿಸ್ಥಿತಿಯಲ್ಲಿ ಮೊಬೈಲ್ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ.. ಅದನ್ನು ಹೊರತುಪಡಿಸಿ ಬದುಕುವುದು ಕಷ್ಟವಾಗುತ್ತಿದೆ… ಆದರೂ ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ಸ್ ಸಾಧನಗಳಿರಲಿ ಅವುಗಳನ್ನು ಸಾಧನಗಳನ್ನಾಗಿಯಷ್ಟೆ ಬಳಸಿದರೆ ಯಾವುದೇ ಅಪಾಯ ಬರಲಾರದು.. ಆದರೆ ಇವತ್ತು ಹಾಗಿಲ್ಲ.. ಅದು ನಮ್ಮನ್ನು ವ್ಯಸನದಂತೆ ಕಾಡುತ್ತಿದೆ.. ಅದರಲ್ಲೂ ಮಕ್ಕಳು ಮೊಬೈಲ್ ನ್ನು ಬಿಟ್ಟಿರದ ಪರಿಸ್ಥಿತಿಗೆ ಬಂದಿರುವುದು.. ದೇಶ ಮಾತ್ರವಲ್ಲದೆ, ಜಗತ್ತಿನ ಸಮಸ್ಯೆಯಾಗಿ ಪರಿಣಮಿಸುತ್ತಿದೆ.. ಆಟಿಸಂನ ಅಪಾಯದ ಕುರಿತಂತೆ ಲೇಖಕಿ ಡಾ. ಸರ್ತಾಜ್  ಪಿ.ಹೆಚ್ ಅವರು ಇಲ್ಲಿ ತೆರೆದಿಟ್ಟಿದ್ದಾರೆ… ಓದಿ ಅಭಿಪ್ರಾಯ ತಿಳಿಸಿ

ದೇಶ ವಿದೇಶಗಳ ಹಲವಾರು ಸಂಶೋಧನಾ ವರದಿಗಳ ಪ್ರಕಾರ ಮಕ್ಕಳಿಗೆ ಬಾಲ್ಯದಿಂದಲೇ ಮೊಬೈಲ್ ಫೋನ್ ನೀಡುವುದರಿಂದ ಅವರ ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸಾಬೀತುಪಡಿಸಿದೆ. ಒಂದು ವರದಿಯ ಪ್ರಕಾರ ಮಕ್ಕಳು ಮೊಬೈಲ್ ಫೋನ್ ಮತ್ತು ಎಲೆಕ್ಟ್ರಾನಿಕ್ ಸಾಧನೆಗಳಿಗೆ ವೇಸನಿಗಳಾಗುವುದರಿಂದ ವರ್ಚುವಲ್ ಆಟಿಸಂ ಅಪಾಯವು ಹೆಚ್ಚಾಗುತ್ತಿದೆ.

ವರ್ಚುಯಲ್ ಆಟಿಸಂನ ಲಕ್ಷಣಗಳು ಸಾಮಾನ್ಯವಾಗಿ ನಾಲ್ಕರಿಂದ ಐದು ವರ್ಷದೊಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಬಹಳಷ್ಟು ಜನ ಸಾಮಾನ್ಯರಿಗೆ ಆಟಿಸಂ ಬಗೆ ಅರಿವಿಲ್ಲ. ಆಟಿಸಂ  ಒಂದು ಸಾಮಾಜಿಕ ಮತ್ತು ಮಾನಸಿಕ ಅಸ್ವಸ್ಥತೆಯಾಗಿದ್ದು ಇದು ಮಾತು, ಸಂವಹನ ಮತ್ತು ನಡವಳಿಕೆಗಳಲ್ಲಿ ವ್ಯಕ್ತವಾಗುತ್ತದೆ ಇದರಿಂದ ಬಳಲುತ್ತಿರುವ ಜನರು ಕಳಪೆ ಸಂವಹನ ಕೌಶಲ್ಯವನ್ನು ಹೊಂದಿರುತ್ತಾರೆ. ಇವರಲ್ಲಿ ಆತ್ಮವಿಶ್ವಾಸದ ಕೊರತೆ ಮತ್ತು ಕೆಲವೊಮ್ಮೆ ಮಾದಕ ವಸ್ತುಗಳ ಬಳಕೆಯಿಂದ ಕಿರಿಕಿರಿ ಮತ್ತು ಕೋಪ ಉಳ್ಳವರಾಗಿರುತ್ತಾರೆ.

ಅತಿಯಾದ ಮೊಬೈಲ್ ಫೋನ್ ಬಳಕೆಯಿಂದ ಮಕ್ಕಳಲ್ಲಿ ಮಾತಿನ ಬೆಳವಣಿಗೆಗೆ ಅಡ್ಡಿಯಾಗಿದೆ, ಕಾರಣ ತಮ್ಮ ಹೆಚ್ಚಿನ ಸಮಯವನ್ನು ಎಲೆಕ್ಟ್ರಾನಿಕ್ ಸಾಧನಗಳೊಂದಿಗೆ ಕಳೆಯುವುದು ಇದರಿಂದ ಕೋಪ ಉದ್ರೇಕ ಹೆಚ್ಚಾಗಿ ಆಕ್ರಮಣಕಾರಿಯಾಗಬಹುದು. ಸ್ಮಾರ್ಟ್ ಫೋನ್ ಗಳು ಮಕ್ಕಳ ನಿದ್ರಾವದಿಯನ್ನು  ಏರುಪೇರಾಗಿಸುತ್ತವೆ, ಪ್ರಗತಿ, ಅಭಿವೃದ್ಧಿ ಎಂಬ ಹೆಸರಲ್ಲಿ ನಮ್ಮ ಮಕ್ಕಳನ್ನ ಅವರ ದೈಹಿಕ ಮತ್ತು ವಿಶೇಷವಾಗಿ ಮಾನಸಿಕ ಬೆಳವಣಿಗೆ ಮೇಲೆ ತೀವ್ರ ಪರಿಣಾಮಕಾರಿ ಕಾಯಿಲೆಗಳ ಕಡೆಗೆ ತಳ್ಳುತ್ತಿದ್ದೇವೆ.

ಈ ಮಾರಕ ಕಾಯಿಲೆಗಳನ್ನು ವೈದ್ಯರು  ಆಟಿಸಂ ಎನ್ನುತಾರೆ.  ಭಾರತದಲ್ಲಿ 68 ಮಕ್ಕಳಲ್ಲಿ ಒಂದು ಮಗು ಈ ಕಾಯಿಲೆಯಿಂದ ಬಳಲುತ್ತಿದೆ. ಇದಕ್ಕೆ ಮುಖ್ಯ ಕಾರಣ ಎಲೆಕ್ಟ್ರಾನಿಕ್ ಸಾಧನೆಗಳ ಬಳಕೆ ಎಂದು ನಂಬಲಾಗಿದೆ. ಮೊಬೈಲ್ ಫೋನ್ ಟಿವಿ ಟ್ಯಾಬ್ಲೆಟ್ ಮತ್ತು ಕಂಪ್ಯೂಟರ್ ಗಳಂತಹ ಎಲೆಕ್ಟ್ರಾನಿಕ್ ಸಾಧನಗಳು  ಮಕ್ಕಳನ್ನ  ವರ್ಚುಯಲ್ ಆಟಿಸಂಗೆ ಬಲಿಪಶುಗಳನ್ನಾಗಿ  ಮಾಡುತ್ತಿವೆ. ವಿಶ್ವಾದ್ಯಂತ ನಡೆಸಲಾದ ಸಂಶೋಧನೆ ಮತ್ತು ವರದಿಗಳ ಪ್ರಕಾರ ಮಕ್ಕಳಿಗೆ ಬಾಲ್ಯದಿಂದಲೇ ಮೊಬೈಲ್ ಫೋನ್  ಮಾನಸಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತವೆ.

ಸ್ಮಾರ್ಟ್ ಫೋನ್ ಮತ್ತು ಇಂಟರ್ನೆಟ್ ಆಧುನಿಕ ಜೀವನದ ಅಡಿಪಾಯವಾಗಿವೆ. ಪ್ರತಿಯೊಬ್ಬರು ಇದರ ವ್ಯಸನಿಗಳಾಗಿದ್ದಾರೆ, ಇಂದು ದೇಶಾದ್ಯಂತ ಪ್ರತಿ ಮನೆಯಲ್ಲು ಇವು ದೃಢವಾಗಿ ನೆಲೆಯೂರಿವೆ. ಆದರೆ ಇವು ಅವರ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ಸಂಪೂರ್ಣವಾಗಿ ಮರೆತು ಪೋಷಕರು ತಮ್ಮ ಮಕ್ಕಳ ಬೇಡಿಕೆಗಳನ್ನ ಪೂರ್ಣಗೊಳಿಸುವಲ್ಲಿ ಅಸಹಾಯಕರಾಗಿರುವುದು ಸ್ಪಷ್ಟವಾಗಿದೆ.

ಇದು ಒಬ್ಬ ವ್ಯಕ್ತಿ ಅಥವಾ ಒಂದು ಮನೆಗೆ ಸೀಮಿತವಲ್ಲ ಎಲ್ಲಡೆಯಲ್ಲಿ ರೂಢಿಯಾಗಿದೆ. ಮನೆಗೆ ಹಾಲು, ತರಕಾರಿಗೆ ಹಣವಿಲ್ಲದಿದ್ದರೂ ಮೊಬೈಲ್ ಗೆ ಡಾಟಾ, ಇಂಟರ್ನೆಟ್ ಇರುವುದು ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಪ್ರವೃತ್ತಿಯಾಗಿದೆ. ಕಳೆದೆರಡು ದಶಕಗಳಿಂದ ವಿಶ್ವದಾದ್ಯಂತ ಮಕ್ಕಳಲ್ಲಿ ವರ್ಚುಯಲ್ ಆಟಿಸಂ ಪ್ರಕರಣಗಳ ಸಂಖ್ಯೆ ಮೂರು ನಾಲ್ಕು ಪಟ್ಟು ಹೆಚ್ಚಾಗಿದೆ. ಎಂದು ಮಾಧ್ಯಮಗಳ ವರದಿಯಿಂದ ತಿಳಿದು ಬಂದಿದ್ದು ಇದು ಆಘಾತಕಾರಿ ಬೆಳವಣಿಗೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗಿದೆ.

ಪೋಷಕರಲ್ಲಿ ಹೆಚ್ಚುತ್ತಿರುವ ಪ್ರವೃತ್ತಿ ಎಂದರೆ ತಮ್ಮ ಕೆಲಸದ ಒತ್ತಡ, ಕುಟುಂಬಕ್ಕೆ ಕೊಡಲಾಗದ ಸಮಯ, ಮಕ್ಕಳೊಂದಿಗೆ ಆಟ, ಪಾಠ, ಕಥೆ ಲಾಲಿಗಳೊಂದಿಗೆ ತೊಡಗಿಸಿಕೊಳ್ಳುವ ಬದಲು ಮನರಂಜನೆಗಾಗಿ ಮೊಬೈಲ್ ಫೋನ್ ಮತ್ತು ಇದರ ಸಾಧನಗಳನ್ನ ನೀಡುವುದು. ಈ ಸಾಮಾಜಿಕ ಮತ್ತು ಮಾನಸಿಕ ಬಿಕ್ಕಟ್ಟನ್ನು ನಿವಾರಿಸಲು ಸ್ವಸ್ಥ ಕುಟುಂಬ ನಿರ್ಮಾಣಕ್ಕೆ ಪೋಷಕರು ತಮ್ಮ ಮಕ್ಕಳ ಅಭ್ಯಾಸ ಸರಿಪಡಿಸುವ ಮೊದಲು ತಮ್ಮ ಸ್ವಂತ ಅಭ್ಯಾಸಗಳನ್ನು ಸರಿಪಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಇನ್ನಾದರೂ ಗಲಾಟೆ ಮಾಡುವ ಮಕ್ಕಳನ್ನು ಮೊಬೈಲ್ ನೀಡಿ ಮೌನವಾಗಿಸುವ ಪ್ರವೃತ್ತಿಯನ್ನು ಪೋಷಕರು ಬಿಡಬೇಕಾಗಿದೆ. ಇದು ನಿಮ್ಮ ಮಕ್ಕಳ ಮಾನಸಿಕ ಆರೋಗ್ಯಕ್ಕೆ ನೀವು ನೀಡುವ ಕೊಡುಗೆಯೂ ಹೌದು…

admin
the authoradmin

Leave a Reply

Translate to any language you want