ಹೊಸೂರು(ಸಂಘಟನೆ ಮಂಜುನಾಥ್): ಸಾಲಿಗ್ರಾಮ ತಾಲೂಕಿನ ಚಿಕ್ಕಹನಸೋಗೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜ್ಯೋತಿ ಮಂಜುನಾಥ್ ಉಪಾಧ್ಯಕ್ಷರಾಗಿ ಜ್ಯೋತಿ ರವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಯಾಗಿದ್ದ ಗಿರೀಶ್ ರವರು ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು. ಸಭೆಯಲ್ಲಿ ನಿರ್ದೇಶಕರಾದ ಶೈಲಾ ರಮೇಶ್, ಶೈಲಜಾ ಕುಚೇಲ್, ಸಿ ಸರಸ್ವತಿ ನರಸಿಂಹೇಗೌಡ, ರೇಣುಕಮ್ಮ ಚಂದ್ರೇಗೌಡ,ಗೀತಾ ಮಧುಸೂದನ್, ಹೊನ್ನಮ್ಮ ಚೆಲುವಯ್ಯ ಸಂಘದ ಕಾರ್ಯದರ್ಶಿ ನಾಗರತ್ನ ಹಾಲು ಪರೀಕ್ಷಕಿ ಲತಾ ಮಣಿ ಹಾಜರಿದ್ದರು.

ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಗ್ಯಾರಂಟಿ ಸಮಿತಿಯ ಸದಸ್ಯ ಚಿಕ್ಕಹನಸೋಗೆ ಮೂರ್ತಿ, ನರಸಿಂಹ ಗೌಡ ಸ್ವಾಮಿಗೌಡ, ನಟರಾಜ್, ಸೋಮಶೇಖರ್ ಯೋಗೇಂದ್ರ ಮುಂತಾದವರು ಪಟಾಕಿ ಸಿಡಿಸಿ ಅಭಿನಂದಿಸಿದರು.

ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಉದಯ್ ಶಂಕರ್ ಶುಭ ಕೋರಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರುಗಳು ಹಾಜರಿದ್ದರು.
ಹೇಮಾವತಿ ವಿ. ಹೆಗಡೆರವರ ಹುಟ್ಟು ಹಬ್ಬದ ಅಂಗವಾಗಿ ಫಲಾನುಭವಿಗಳಿಗೆ ಹಣ್ಣು ವಿತರಣೆ








