LatestMysore

ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘದಿಂದ ಅಕ್ಕಮಹಾದೇವಿ, ಸಿದ್ದಗಂಗಾಶ್ರೀಗಳ ಜಯಂತಿ ಆಚರಣೆ

ಮೈಸೂರು: ಮೈಸೂರು ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನ ದ ಹತ್ತಿರದ  ಸಂಘದ ಕಚೇರಿಯಲ್ಲಿ ಜಗನ್ಮಾತೆ ಅಕ್ಕಮಹಾದೇವಿ ಮತ್ತು ಸಿದ್ದಗಂಗಾಮಠದ ಡಾ.ಶಿವಕುಮಾರ ಮಹಾ ಸ್ವಾಮಿಗಳ ಜಯಂತಿ ಮಹೋತ್ಸವವನ್ನು ಆಚರಿಸಲಾಯಿತು.

ಪೂಜ್ಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದ  ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಮಹಾ ಸಂಗಮ ಗೆಳೆಯರ ಬಳಗಗಳ ಒಕ್ಕೂಟದ ಅಧ್ಯಕ್ಷರಾದ ಕಲ್ಮಳ್ಳಿ ನಟರಾಜು ಅವರು, ಜಗತ್ತಿನಲ್ಲಿ ಕೌಟುಂಬಿಕ ಮತ್ತು ಭೋಗದ ಸಂಸ್ಕೃತಿಗೆ ಸೀಮಿತಗೊಳಿಸಿ ಪುರುಷ ಪ್ರಧಾನವಾಗಿದ್ದ ಹೆಣ್ಣಿಗೆ ಪ್ರಪ್ರಥಮವಾಗಿ ಪುರುಷನಿಗೆ ಸರಿ ಸಮನಾಗಿ ನಿಂತು ಮಾತನಾಡುವ ಅಭಿವ್ಯಕ್ತಿ ಸ್ವಾತಂತ್ರ ವನ್ನು ನೀಡಿದ್ದು, 12ನೆಯ ಶತಮಾನದ  ಕಾರಣಿಕ ಪುರುಷ ಬಸವಣ್ಣ ಎಂದರೆ ತಪ್ಪಾಗಲಾರದು. ಹಾಗಾಗಿಯೇ ಜಗತ್ತು ಇಂದು ಬಸವಣ್ಣನವರನ್ನು ಮಹಾ ಮಾನವತಾವಾದಿ ವಿಶ್ವ ಗುರು ಎಂದು ಒಪ್ಪಿಕೊಂಡಿದೆ ಎಂದರು.

ಬಸವಣ್ಣ ಬಾಲ್ಯದಲ್ಲಿ ವೈದಿಕ ಸಂಸ್ಕೃತಿ ಸಂಪ್ರದಾಯ ಅನುಸಾರ ತನಗೆ ಉಪನಯನ ಧೀಕ್ಷೆ ನೀಡುವ ಸಂದರ್ಭದಲ್ಲಿ ತನ್ನ ಅಕ್ಕನಾದ ನಾಗಮ್ಮನಿಗೂ ಧೀಕ್ಷೆ ಕೊಡಬೇಕು ಎಂದು ಹೇಳಿದಾಗ ಅದು ಸಾಧ್ಯವಿಲ್ಲ. ಪುರುಷ ಮಾತ್ರ ಸೀಮಿತ ಎಂದಾಗ ಅಕ್ಕನಿಗಿಲ್ಲದ ಸಂಸ್ಕಾರ ನನಗೂ ಬೇಡ ಎಂದು ಉಪನಯನ ತಿರಸ್ಕರಿಸಿ ಮನೆಯಿಂದ ಹೊರ ಬಂದದ್ದನ್ನು ಬಸವಣ್ಣನ ಜೀವನ ಚರಿತ್ರೆಯ ಇತಿಹಾಸ ತಿಳಿಸುತ್ತದೆ.

ಅಂತಹ ಬಸವಣ್ಣ ತಾನು ಬಿಜ್ಜಳನ ಕಲ್ಯಾಣದಲ್ಲಿ ಮಹಾ ಮಂತ್ರಿಯಾದರೂ ಲೆಕ್ಕಿಸದೆ ಪ್ರಭುತ್ವ ಅಲಕ್ಷಿತ ನಿಮ್ನ ವರ್ಗದ ಜನರ ನೋವಿನ ಅಂತಃ ಕರಣಕ್ಕೆ ಧ್ವನಿಯಾಗಿ ಅದಕ್ಕಾಗಿ ಅವರೊಡಲ ದುಗುಡ ದುಃಖ, ದುಮ್ಮಾನ ಭಾವನೆಗಳ ಸ್ಪಂದನೆಗಾಗಿ ನಿರ್ಮಿಸಿದ ಸಂಕಲ್ಪ ವೇದಿಕೆಯೇ ಅನುಭವ ಮಂಟಪ ಎನ್ನುವ ಸ್ತ್ರೀ ಪುರುಷ ಸಮಾನತೆ ಅಭಿವ್ಯಕ್ತಿ ಸ್ವಾತಂತ್ರದ ಮೂಲಕ ವಿಶ್ವದ ಪ್ರಜಾ ಪ್ರಭುತ್ವವ್ಯವಸ್ಥೆ ಗೆ ನಾಂದಿ ಹಾಡಿದ ಹೃದಯದಿಂದ ಹೊರ ಬಿದ್ದ ಮಾತುಗಳಿಗೆ ವಚನಗಳು ಎಂದು ನಾಮಾoಕಿತ ಗೊಂಡವು  ಎಂದರು.

ಬಹುಶಃ ಬಸವಣ್ಣ ಅಂದು ಮಂತ್ರಿ ಪದವಿಗೆ ಸೀಮಿತವಾಗಿ ಪ್ರಭುತ್ವ ಓಲೈಸಿದ್ದರೆ ಎಲ್ಲರಂತೆ ಆ ಕಾಲಘಟ್ಟಕ್ಕೆ ಮಾತ್ರ ಸೀಮಿತವಾಗಿ ಕಣ್ಮರೆಯಾಗುತ್ತಿದ್ದ, ಕ್ಷಣಿಕದ ಭೋಗ ಲಾಲಸೆ ಅಧಿಕಾರಕ್ಕಿಂತ ಶೋಷಿತರಿಗೆ ಬೇಕಿದ್ದ ಪ್ರೀತಿ ಕರುಣೆ ಶಾಶ್ವತ ಬೆಳಕಾದ ಆ ಬೆಳಕೇ ದೇಶದ ಮೂಲೆಗಳಿಂದಲೂ ಪ್ರಭಾವಿತರಾದ ನೂರಾರು ಸ್ತ್ರೀ ಪುರುಷರು ಬಸವಣ್ಣ ಸಾಂಗತ್ಯಕ್ಕೆ ಬಂದರು. ಅಂತಹ ನೂರಾರು ಸ್ತ್ರೀ ಯರಲ್ಲಿ ಆಂಧ್ರ ಪ್ರದೇಶ ಶ್ರೀ ಶೈಲದಿಂದ ಕಲ್ಯಾಣ ಕ್ಕೆ ಬಂದ ಅಕ್ಕಮಹಾದೇವಿಯಂತಹ ಧಿರೋದ್ಧಾತ ಮಹಿಳೆ ಅಕ್ಕಮಹಾದೇವಿ.

ಲೌಕಿಕ ಲೋಕದ ಸೌಂದರ್ಯದ ಗಣಿಯಾಗಿ ಅಂದು ಎದುರಾದ ನಾನಾ ಪರೀಕ್ಷೆಗಳಿಗೆ  ವಿಚಳಿತಲಾಗದೆ ದಿಟ್ಟ ವಾಗಿ ಉತ್ತರಿಸಿ ಎಲ್ಲರ ಮನಸ್ಸನ್ನು ವೈರಾಗ್ಯ ಭಾವದಿಂದ ಗೆದ್ದು  ಬಸವಣ್ಣ ನಿಂದ ಅಕ್ಕನೆಂದರೆ ಮಹಾದೇವಿ ಅಕ್ಕಾ ಎಂದೆನಿಸಿ ಕೊಂಡ ವೀರ ವೀರಾಗಿಣಿ. ನೂರಾರು ವಚನಗಳಲ್ಲಿ ಆಕೆಯ ನೇರ ನಡೆ ನುಡಿಯ ವ್ಯಕ್ತಿತ್ವ ವನ್ನು ಕಾಣಬಹುದು. ಹೀಗಾಗಿ ವಿಶ್ವದ ಮೊಟ್ಟ ಮೊದಲ ಸ್ತೀ ಸ್ವಾತಂತ್ರ್ಯ ಹೋರಾಟ ಗಾರ್ತಿ ಎನ್ನ ಬಹುದು ಪ್ರಾಯಶಃ ಈ ಎಲ್ಲ ಶರಣರ ವಚನಗಳ ಪ್ರಭಾವವೇ ಪೂಜ್ಯ ಶಿವಕುಮಾರ ಸ್ವಾಮಿಗಳು ಸೇವಾ ಸಾಧನೆಗೆ ಸ್ಫೂರ್ತಿ ಮತ್ತು ಪ್ರೇರಣೆ ಎಂದೆದಿಗೂ ನಮಗೆ ದಾರಿ ದೀಪ ಎಂದರು.

ಬಸವ ಬಳಗದ ಒಕ್ಕೂಟದ ಅಧ್ಯಕ್ಷ ಕ ಸಾ ಪ ಚಂದ್ರಶೇಖರ ಮಾತನಾಡಿ ಈ ವರ್ಷ ಶರಣರ ಪರಿಕಲ್ಪನೆಯಲ್ಲೇ ಮೈಸೂರಿನಲ್ಲಿ ಬಳಗ ಬಸವ ಜಯಂತಿ ಆಚರಣೆಯಾಗುತ್ತಿದ್ದು, ಸಕಲ ಸಿದ್ಧತೆಗಳು ನಡೆಯುತ್ತಿದ್ದು, ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಬಿ ಆರ್ ಶಿವಕುಮಾರ್, ನಿಕಟ ಪೂರ್ವ ಮೈಸೂರು ಜಿಲ್ಲಾ ವೀರ ಶೈವ ಮಹಾಸಭಾ ಅಧ್ಯಕ್ಷ  ಕಾನ್ಯ ಶಿವಮೂರ್ತಿ, ನಗರ ಪಾಲಿಕೆ ಮಾಜಿ ಸದಸ್ಯರಾದ   ಕೆ ವಿ ಮಲ್ಲೇಶ್,  ಬಸವ ಮೈಸೂರು ಜಿಲ್ಲಾ ವೀರ ಶೈವ ಘಟಕದ ನಿರ್ದೇಶಕ   ಪರಮೇಶ ಮಾಸ್ಟರ್, ಬಳಗದ ಒಕ್ಕೂಟದ ಕಾರ್ಯದರ್ಶಿ ಎ ಪಿ ವಿರೂಪಾಕ್ಷ, ಉದ್ಯಮಿ ಸುರೇಶ್ ಶಂಬು ದೇವನ ಪುರ,  ಜೆ ಎಸ್ ಎಸ್ ಶಿಕ್ಷಣ ಸಂಸ್ಥೆಯ ಶಿಕ್ಷಕ  ಮಹದೇವಪ್ಪ, ಅನಿಲ್, ಸಂಘದ ನಿರ್ದೇಶಕ ಗಜೇಂದ್ರ, ಬಾನಹಳ್ಳಿ ಸಂತೋಷ, ಮಂಜು ತಾಳವಾಡಿ ಸಚಿನ್ ದೇವಲಾಪುರ ಗವೀಸ್ ಬೆಳವಾಡಿ ನಿತಿನ್ ಭೋಗಪುರ ಕುಮಾರಿ ವಚನ ಚೂಡಾಮಣಿ ಸಮಿನಾ ಶ್ರೀಮತಿ ಶಿಲ್ಪಾ ನಂದೀಶ್, ಶ್ರೀಮತಿ ಕವಿತಾ, ಮಾದಲಾoಬಿಕೆ ಶರ್ಮಿಳಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

admin
the authoradmin

Leave a Reply

Translate to any language you want