CinemaLatest

“ಅಂಚೆಗೆ ಹೋಗದ ಪತ್ರ” ಚಿತ್ರದ ‘ಕಣ್ಣಂಚಲೇ ಪ್ರೀತಿ’ಹಾಡು ಬಿಡುಗಡೆ.. ನೀವೊಮ್ಮೆ ನೋಡಿ…

ಮೇ ಕೊನೆಯ ವಾರದಲ್ಲಿ  ಚಿತ್ರ ತೆರೆಗೆ ಬರುವ ನಿರೀಕ್ಷೆ

ಬೆಳಗಾವಿ: ನವಗ್ರಹ ಮತ್ತು ವರ್ಚಸ್ ಸಹಯೋಗದಲ್ಲಿ ಬೆಳಗಾವಿ ಹುಡುಗರ ‘ಅಂಚೆಗೆ ಹೋಗದ ಪತ್ರ’ ಚಿತ್ರದ ಎರಡನೇ ಹಾಡು “ಕಣ್ಣಂಚಲೇ ಪ್ರೀತಿ ಶುರುವಾಯಿತು” ಬಿಡುಗಡೆಯಾಗಿ ಇದೀಗ ಯೂಟ್ಯೂಬ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.

ಈ ಹಾಡಿಗೆ ಖ್ಯಾತ ಗಾಯಕ ಪಂಚಮ ಜೀವ ಧ್ವನಿಯಾಗಿದ್ದು, ಎಸ್.ಕೆ.ಎಸ್ ಅವರ ಸಾಹಿತ್ಯ ಹಾಡಿನ ಭಾವವನ್ನು ಮತ್ತಷ್ಟು ಮನಮುಟ್ಟುವಂತೆ ಮಾಡಿದೆ. ಸಂಪೂರ್ಣ ಉತ್ತರ ಕರ್ನಾಟಕದ ಪ್ರತಿಭೆಗಳ ಒಕ್ಕೂಟದಲ್ಲಿ ನಿರ್ಮಾಣವಾಗಿರುವ , ಉತ್ತರ ಕರ್ನಾಟಕದಲ್ಲೇ ಸಂಪೂರ್ಣ ಚಿತ್ರೀಕರಣವಾದ ಈ ಚಿತ್ರದಲ್ಲಿ ಪ್ರವೀಣ ಸುತಾರ ನಾಯಕನಾಗಿ ಮತ್ತು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ನಾಯಕಿಯಾಗಿ ಸಹನಾ ಪ್ರಕಾಶ ಜೊತೆಗೆ “ರಕ್ಕಸಪುರದೊಳ” ಖ್ಯಾತಿಯ ಸೌಮ್ಯ ಅಮರಪೂರಕರ್ ಮತ್ತು “ಮಹಾನಟಿ ರನ್ನರ್ ಆಫ್” ವರ್ಷಾ ದಿಗ್ರೆಜೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ದಿವಾಕರ ಎಂ ಅವರ ಸಂಗೀತ, ಮಂಜು ಬಸವರಾಜ ಛಾಯಾಗ್ರಹಣ, ಸಂಕಲನ ಶಿವ ಗಂಗಾಧರ ರಂಜಿತ ಪಾಂಡೆ ವಿ.ಎಫ್.ಎಕ್ಸ್ , ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ನಿರ್ವಹಿಸಿದ್ದು, ಸಹ ನಿರ್ದೇಶಕರಾಗಿ ವೀಣಾ ಮತ್ತು ವಿಶಾಲ ಕೆಲಸ ಮಾಡಿದ್ದು, ಪ್ರವೀಣ ತಾನಾಜಿ ಸುತಾರ, ಮಂಜುನಾಥ ಹುಲಮನಿ, ವರ್ಚಸ್ ಮತ್ತು ಪರದಿಶೆ ನಿರ್ಮಾಪಕರಾಗಿದ್ದಾರೆ. ಚಿತ್ರದ ಎಲ್ಲ ಕಾರ್ಯಗಳೂ ಮುಗಿದು ಬಿಡುಗಡೆಗೆ ಸಿದ್ದವಾಗಿದ್ದು, ಮೇ ತಿಂಗಳ ಕೊನೆ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವದಾಗಿ ನಿರ್ದೇಶಕ ಪ್ರವೀಣ ಸುತಾರ ತಿಳಿಸಿದ್ದಾರೆ.

admin
the authoradmin

Leave a Reply

Translate to any language you want