CrimeLatest

ಪತ್ನಿ ಮನೆಗೆ ಹೋದವನು ಶವವಾಗಿ ಪತ್ತೆ.. ಕೊಲೆ ಮಾಡಿ ರಸ್ತೆ ಬದಿಗೆ ಎಸೆದು ಹೋಗಿರುವ ಶಂಕೆ

ಸರಗೂರು(ದಾಸೇಗೌಡ): ಪತ್ನಿ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದ ವ್ಯಕ್ತಿಯೊರ್ವ ಶವವಾಗಿ ಪತ್ತೆಯಾಗಿರುವ ಘಟನೆ ತಾಲೂಕಿನ ಕುರ್ಣೇಗಾಲ ಗ್ರಾಮದಲ್ಲಿ ನಡೆದಿದ್ದು, ಈತನನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕುರ್ಣೇಗಾಲ ಗ್ರಾಮದ ನಿವಾಸಿ ಜವರಪ್ಪ(38) ಶವವಾಗಿ ಪತ್ತೆಯಾದ ದುರ್ದೈವಿ. ಈತ ಪತ್ನಿ ಮನೆಯಾದ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಸಮೀಪದ ಹಾಡ್ಯ ಗ್ರಾಮಕ್ಕೆ ಹೋಗಿದ್ದಾನೆ. ಶುಕ್ರವಾರ ಬೆಳಗ್ಗೆ ಕೆಲಸಕ್ಕೆ ಹೋಗಲೆಂದು ಮನೆಗೆ ಮರಳಿದ್ದಾನೆ ಎನ್ನಲಾಗಿದ್ದು, ಈ ವೇಳೆ ಯಾರೊ ದುಷ್ಕರ್ಮಿಗಳು ಕೊಲೆ ಮಾಡಿ ತಂದು ಕುರ್ಣೇಗಾಲ ಸಮೀಪದ ರಸ್ತೆ ಬದಿಯಲ್ಲಿ ಬಿಸಾಡಿ ಹೋಗಿದ್ದಾರೆ ಎಂದು ತಮ್ಮ ರವಿ ಸರಗೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಡಿವೈಎಸ್ಪಿ ರಾಜು, ಸಿಪಿಐ ಪ್ರಸನ್ನಕುಮಾರ್, ಪಿಎಸ್‌ಐ ಆರ್.ಕಿರಣ್, ಚಂದ್ರಹಾಸ್, ಗೋಪಾಲ್, ಎಎಸ್‌ಐ ಕೃಷ್ಣಕುಮಾರ್, ಶ್ರೀಕಂಠ, ಇಮ್ರಾನ್ ಅಹಮದ್, ಆನಂದ್,  ಕೃಷ್ಣಯ್ಯ, ಸುನೀಲ್, ರಮೇಶ್, ರಾಜು, ವಿನಯ್, ಶಿವರಾಜು, ಶಿವಪ್ಪ, ಸುನೀಲ್  ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡ ರಚಿಸಿದ್ದಾರೆ. ಈ ಕುರಿತು ಸರಗೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಮುಂದಿನ ಕ್ರಮ ಕೈಗೊಂಡಿದ್ದಾರೆ.

admin
the authoradmin

Leave a Reply