ಹುಣಸೂರು ತಾಲೂಕಿನಲ್ಲಿ ಬೆಳೆವಿಮೆಗೆ ರೈತರು ಸಲ್ಲಿಸಿದ್ದ 176 ಅರ್ಜಿಗಳು ತಿರಸ್ಕೃತ… ರೈತರು ಏನು ಮಾಡಬೇಕು?

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಹುಣಸೂರು ತಾಲೂಕಿನಲ್ಲಿ 2024 – 25ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಬೆಳೆ ವಿಮೆಗಾಗಿ ಸಲ್ಲಿಸಿದ್ದ 176 ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಸಹಾಯಕ ಕೃತಿ ನಿರ್ದೇಶಕ ಅನಿಲ್ ಕುಮಾರ್ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ 2024 -25 ನೇ ಸಾಲಿನ ಮುಂಗಾರು ಹಾಗೂ ಮುಂಗಾರು ಹಂಗಾಮಿನಲ್ಲಿ ಬೆಳೆ ಸಮೀಕ್ಷೆ ದತ್ತಾಂಶಗಳನ್ನು ಬೆಳೆ ವಿಮೆ ನೋಂದಣಿ ಪ್ರಸ್ತಾವನೆಗಳೊಂದಿಗೆ ಹೋಲಿಸಿದಾಗ ಮುಂಗಾರು ಹಂಗಾಮಿನಲ್ಲಿ 165 ಹಾಗೂ ಹಿಂಗಾರು ಹಂಗಾಮಿನಲ್ಲಿ 11 ಒಟ್ಟು 176 ಅರ್ಜಿಗಳು ಬೆಳೆ ಸಮೀಕ್ಷೆಯೊಂದಿಗೆ ತಾಳೆ ಯಾಗದೆ ತಿರಸ್ಕೃತಗೊಂಡಿವೆ ಅಂತಹ ಪ್ರಸ್ತಾವನೆಗಳನ್ನು ತಾಲೂಕಿನ ಕೃಷಿ ನಿರ್ದೇಶಕರ ಕಛೇರಿ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರದರ್ಶಿಸಲಾಗಿದೆ ಎಂದು ತಿಳಿಸಿದ್ದಾರೆ.

ತಿರಸ್ಕೃತಗೊಂಡ ಪ್ರಸ್ತಾವನೆಗಳಿಗೆ ರೈತರ ಆಕ್ಷೇಪಣೆಗಳು ಇದ್ದಲ್ಲಿ ಏಪ್ರಿಲ್ 23ರ ಒಳಗೆ ರೈತರು ನೀಡಿರುವ 2024- 25 ನೇ ಸಾಲಿನ ಪಹಣಿಯಲ್ಲಿ ವಿಮೆ ನೊಂದಾಯಿಸಿದ ಬೆಳೆ ಇರಬೇಕು ಜೊತೆಗೆ ಬೆಂಬಲ ಬೆಲೆ ರಶೀದಿ, ಎಪಿಎಂಸಿಯಲ್ಲಿ ಮಾರಾಟ ಮಾಡಿದ್ದಲ್ಲಿ ದಾಖಲೆ, ಇವುಗಳ ದಾಖಲೆಗಳನ್ನು ಇಲಾಖೆಗೆ ಸಲ್ಲಿಸದಿದ್ದರೆ ಪ್ರಸ್ತಾವನೆಗಳು ತಿರಸ್ಕೃತಗೊಳ್ಳಲಿವೆ ಎಂದು ಕೃಷಿ ನಿರ್ದೇಶಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.







