ಕ್ರಾಂತಿಯೋಗಿ ಬಸವಾ ಮಹಾನುಭಾವ
ಅರಿವಿನಾ ಬೇರು ಗುರುವಿನಾ ಗುರು
ಅನುಪಮ ಅನುರೂಪ ಕೀರ್ತಿಸೂರು
ಜಾತ್ಯಾತೀತ ಮರದ ಮಹಾಬೇರು
ಅಪ್ರತಿಮ ಜನ್ಮದ ಆಧ್ಯಾತ್ಮತೇರು
ಅಂತರಂಗ ಬಹಿರಂಗ ಶುದ್ಧಿಯುಳ್ಳ
ನಿಜಗುಣ ಶಿವಯೋಗಿ ಲಿಂಗವಂತರುಳ್ಳ
ನಡೆನುಡಿ ಪ್ರವಚನ ಉದ್ದುದ್ದ ಭಾಷಣವುಳ್ಳ
ಬದುಕು ಬಾಳು ಎಲ್ಲರಿಗು ಬೇಕಾಗಿಲ್ಲ
ಈ ಒಂದೇಒಂದು ವಚನ ಸಾಕುಬೇಕಲ್ಲ
“ಕಳಬೇಡ, ಕೊಲಬೇಡ, ಹುಸಿಯನುಡಿಯಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನಬಣ್ಣಿಸಬೇಡ, ಇದಿರ ಅಳಿಯಲುಬೇಡ,
ಇದೇಅಂತರಂಗಶುದ್ಧಿ, ಇದೇಬಹಿರಂಗಶುದ್ಧಿ
ಇದೇ ನಮ್ಮಕೂಡಲಸಂಗಮನೊಲಿಸುವ ಪರಿ”
ಗುರು-ಲಿಂಗ-ಜಂಗಮ ಮಹತ್ವ ತ್ರಿಜನ್ಮಸತ್ಯ
ಅಪ್ರತಿಮ ತ್ರಿವಿಕ್ರಮ ತ್ರಿಕೋನ ತ್ರಿಗುಣನಿತ್ಯ
ಆತ್ಮ-ಪರಮಾತ್ಮ ನಡುವಣ ಸರಳಾಚಾರದ ಸತ್ವ
ಅವತಾರ ತೋರದೆ ಬೆಳಕು ತೋರಿದ ವಿಚಾರ ತತ್ವ
ಅಂಗೈಲಿ ಪಂಚಾಕ್ಷರ ಪವಡಿಸಿದ ಸುಪುತ್ರ
ತ್ರಿವಿಧಕಟಿಬದ್ಧ ತ್ರಿಕರಣಶುದ್ಧ ಪರಮಪವಿತ್ರ
ಅಳಿಸಲು ಚತುರ್ವರ್ಣ ತಾರತಮ್ಯತೆ
ತೊಲಗಿಸಲು ಸಾಮಾಜಿಕ ಅಸ್ಪೃಶ್ಯತೆ
ತರಲು ಸ್ತ್ರೀ-ಪುರುಷ ಸರಿಸಮಾನತೆ
ವೈದಿಕವೇದಿಕೆಯ ಟೀಕೆ-ಟಿಪ್ಪಣಿ ಕಂತೆ
ಧರ್ಮಾಧರ್ಮದ ಕರಾಳತೆಯ ಸಂತೆ
ಮೌಢ್ಯದ ವಿರುದ್ಧ ರೂವಾರಿಯ ಚಿಂತೆ
ನಿತ್ಯಶೋಷಣೆಯ ಒಣವೇದಾಂತ ವಿರುಧ್ಧ
ಸತ್ಯಪೋಷಣೆಯ ರಣಸಿದ್ಧಾಂತ ಯುದ್ಧ
ನುಡಿದಂತೆಯೇ ನಡೆದು ನಡೆದಂತೇ ನುಡಿದ
ಯುಕ್ತಯೋಗಿ ಮುಕ್ತಧರ್ಮದ ತತ್ವಸಾರಿದ
ನೀನೋರ್ವ ವಿಶ್ವಗುರು ನೀನೇ ವಿಶ್ವಮಾನವ
ನಿನಗೆ ನೀನೇ ಸಾಟಿ ಚೆನ್ನಕೀರುತಿ ವಚನ ಸಂಹಿತೆ
ಚಿನ್ನದ ಮೂರುತಿ ರನ್ನದ ಆರತಿ ನಿನ್ನಯ ಚರಿತೆ
ನಮೋ ನಮಃ ಜಗಜ್ಯೋತಿ ಬಸವೇಶ್ವರ
ಅನನ್ಯ ಅಲ್ಲಮ ಆಚಂದ್ರಾರ್ಕ ಅಜರಾಮರ!

(1987ರ “ಬಸವ ಜಯಂತಿ”ಯಂದು ಮೈಸೂರಿನ ಕರ್ನಾಟಕ ಕಲಾಮಂದಿರ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಿದ ಭಕ್ತಿಭಾವ)









ಅನಂತಾನಂತ ಧನ್ಯವಾದ ಲವಕುಮಾರ್ ಸರ್.
ಕುಮಾರಕವಿ ಬೋ.ನಾ.ನಟರಾಜ
ಅನಂತಾನಂತ ಧನ್ಯವಾದ ಲವಕುಮಾರ್ ಸರ್.
ಕುಮಾರಕವಿ ಬೋ.ನಾ.ನಟರಾಜ, ಬೆಂಗಳೂರು
Basava jayanthi angavagi kumarakavi B.N.Nataraj sir barediruva BASAVANNA ravara kavana super……..👍👏👏👏👏👏🙏Ramesh, Vidyanagara,opp.teresian college, Mysuru
BASAVANNA ravara kathana kavana vaachana maadida naanu mattu namma geleyara balaga bahala hotthu bhavukaraadevu. Lekhakarige tumbu hrudayada dhanya vadagalu. Nijavaagaloo sree Nataraja ravaru asaadhaarana kavigalu. nimma abhimanigalu SHANKARALINGAIAH & FRIENDS, Garden Villa Residential Area (GVRA) Akka mahadevi Park, Bengaluru
Kumarakavi nataraja ravaru barediruva kranti purusha BASAVESHWARA ravara Kavita padyagalu excellent exciting interesting. Thank you very much sir 🙏 👍. NIRANJANA, (rtd.CTO) Basaveshwara Nagara, Bengaluru.
Ee dina belagge namma parkinalli chapple gumpina basava jayanthi karyakrama mugida mele nimma JANAMANA KANNADA e-newsletter published Kumarakavi B.N.Nataraj ravara katha kavanavannu ellaru ottige hadidevu athava odidevu. Bahala artapurnavagide. Namaskara. Gayathri mattu friends. Nagarabhavi, Bengaluru
nimma patrikeyalli kumarakavi B.N.Nataraj ravaru sogasagi
barediruva Namo namaha Jagajyoti BASAVESWARA kavite odida nanage & namma familyge tumba santosha agide. Thanks sir 🙏. Pruthvi, shirke Bengaluru.
ಜಗಜ್ಯೋತಿ ಬಸವೇಶ್ವರ ಕಥನ ಕವನವು ಆಧ್ಯಾತ್ಮಿಕ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ತುಂಬಾತುಂಬ ಅರ್ಥಪೂರ್ಣ ಲೇಖನ. ಸತ್ಯನಾರಾಯಣ, ನಿವೃತ್ತ ಅಧೀಕ್ಷಕ, ಮೈವಿವಿ, ಕೃಷ್ಣಮೂರ್ತಿಪುರಂ, ಮೈಸೂರು
Basava jayanthi angavagi kumarakavi nataraja ravaru barediruva BASAVANNA RAVARA KAVANA SUPER DUPER ARTICLE, Mallikarjuna hirematt, Bengaluru
ಈದಿನ ಆಚರಿಸುವ ವಿಶ್ವಗುರು ಬಸವ ಜಯಂತಿ ಪ್ರಯುಕ್ತ ಬರೆದ ಕುಮಾರಕವಿ ಯವರ ಕವನ ಅಮೋಘವಾಗಿತ್ತು. ನಮಸ್ಕಾರ, ಶ್ರೀಕಾಂತ್ ಘಲಗಿ
ಈದಿನ ಆಚರಿಸುವ ವಿಶ್ವಗುರು ಬಸವ ಜಯಂತಿ ಪ್ರಯುಕ್ತ ಬರೆದ ಕುಮಾರಕವಿ ಯವರ ಕವನ ಅಮೋಘವಾಗಿತ್ತು. ನಮಸ್ಕಾರ, ಶ್ರೀಕಾಂತ್ ಘಲಗಿ, GVRA ನಾಗರಭಾವಿ, ಬೆಂಗಳೂರು
BASAVANNA ravara kavana superb writing ✍ 👌 👏 👍 🙏 Shantakumar, moodalapalya, Bengaluru
Jagajyoti Basaveswara kavite bahala chennagide, dhanyavadagalu sir ♥ 🙏, Siddalingaswamy.S.
ನಮಸ್ಕಾರ ಜನಮನ ಕನ್ನಡ ಪತ್ರಿಕೆ. ಈ ದಿನ ನಾನು ನಿಮ್ಮ ಪತ್ರಿಕೇಲಿ ಓದಿದ ಮಹಾನುಭಾವ ಬಸವಣ್ಣನವರ ಕಥನ ಕವನ ಆಪ್ಯಾಯಮಾನವಾಗಿದೆ. ಧನ್ಯವಾದ. ಸೌಭಾಗ್ಯಮ್ಮ, ವಿಜಯನಗರ, ಬೆಂಗಳೂರು
ಬಸವಣ್ಣನವರಿಗೆ ಕವನ ನಮನ ಓದಿದೆ, ತುಂಬ ಚೆನ್ನಾಗಿದೆ ಸರ್ ನಮಸ್ಕಾರ.
ಯಶೋಧಮ್ಮ, ಕಲ್ಯಾಣನಗರ, ಬೆಂಗಳೂರು
Jagajyoti basaveswara poetry is really good for the entire humanity👏👌Anjali Shivanna Chandra layout Bengaluru.
BASAVANNA ravara lekana tumba chennagide. Kumarakavi B.N.Nataraj sir namaste🙏Shivanna,rtd.PSI, Nagarabhavi Bengaluru
ಬಸವಕಲ್ಯಾಣದ ಬಸವೇಶ್ವರಅಣ್ಣನವರ ಲೇಖನ ಓದಿದೆ ಸೊಗಸಾಗಿದೆ. ಇಂದ್ರಮ್ಮ, ಕಲ್ಲಳ್ಳಿ ಬಡಾವಣೆ, ಮಂಡ್ಯ ಸಿಟಿ.
ನಮಸ್ಕಾರ ಜನಮನ ಕನ್ನಡ ಪತ್ರಿಕೆ. ಈ ದಿನ ನಾನು ನಿಮ್ಮ ಪತ್ರಿಕೇಲಿ ಓದಿದ ಮಹಾನುಭಾವ ಬಸವಣ್ಣನವರ ಕಥನ ಕವನ ಆಪ್ಯಾಯಮಾನವಾಗಿದೆ. ಧನ್ಯವಾದ. ಸೌಭಾಗ್ಯಮ್ಮ, ವಿಜಯನಗರ, ಬೆಂಗಳೂರು 560072
BASAVANNA ravara kavana superb writing ✍ 👌 👏 👍 🙏 Shantakumar, moodalapalya, Bengaluru 560072
BASAVANNA ravara kavana superb writing ✍ 👌 👏 👍 🙏 Shantakumar, moodalapalya, Bengaluru