ಹುಣಸೂರು (ನಂಜಾಪುರ ಮನುಕುಮಾರ್): ವಿಶ್ವವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಾಗೂ ಜಂಬೂಸವಾರಿಗೆ ಆಯ್ಕೆ ಮಾಡಿರುವ ಆನೆಗಳ ಪಟ್ಟಿಯಿಂದ ಕ್ಯಾಪ್ಟನ್ ಅಭಿಮನ್ಯುವನ್ನು ಹೊರಗಿಟ್ಟಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅಭಿಮನ್ಯುವನ್ನು ದಸರಾಗೆ ಕರೆತರಬೇಕು ಎಂಬ ಒತ್ತಾಯ ಹೆಚ್ಚಾಗತೊಡಗಿದೆ.
ಬೆಂಗಳೂರಿನಲ್ಲಿ ಮಂಗಳವಾರ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ದಸರಾ ಆನೆಗಳ ಪಟ್ಟಿಯ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದಂತೆ, ಅಭಿಮನ್ಯುವನ್ನು ಕೈಬಿಟ್ಟಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗತೊಡಗಿದೆ. ವಯಸ್ಸು 60 ವರ್ಷ ತುಂಬಿದೆ ಎಂಬ ಕಾರಣಕ್ಕೆ ಅಭಿಮನ್ಯುವನ್ನು ದಸರಾದಿಂದಲೇ ದೂರು ಇದುವುದು ಸರಿಯಲ್ಲ. ಈ ಬಾರಿ ದಸರಾಗೆ ಕರೆತರಬೇಕು. ಅಂಬಾರಿ ಹೊರಿಸದಿದ್ದರೂ ನಿಶಾನೆ ಆನೆಯನ್ನಾಗಿ ಮಾಡಿ ನಂತರ ಗೌರವಯುತ ಬೀಳ್ಕೊಡುಗೆ ನೀಡಿ ಕಳಿಸಬೇಕು ಎಂಬು ಒತ್ತಾಯಗಳು ಕೇಳಿಬರುತ್ತಿದೆ.

ಅಭಿಮನ್ಯು ಸಾಧಾರಣ ಆನೆಯಲ್ಲ, ಇಲಾಖೆಗೆ ಮತ್ತು ನಾಡಿಗೆ ದೊಡ್ಡ ಮಟ್ಟದ ಕೊಡುಗೆ ನೀಡಿದೆ. ಅಲ್ಲದೆ, ಯಾವುದೇ ರೀತಿಯ ತೊಂದರೆ ಮತ್ತು ಹಾನಿ ಮಾಡಿಲ್ಲ. ಇಂತಹ ಆನೆಯನ್ನು ಏಕಾಏಕಿ ಇಡೀ ದೆಸರಾದಿಂದಲೇ ದೂರ ಇಟ್ಟಿರುವುದು ಸರಿಯಲ್ಲ ಎಂದು ಅಭಿಮನ್ಯುವಿನ ಪರ ಪೋಸ್ಟ್ ಪಾಕಿ ಸಾಮಾಜಿಕ ಜಾಲಕಾಣದಲ್ಲಿ ವ್ಯಾಪಕ ಬೇಸರ ವ್ಯಕ್ತಪಡಿಸಲಾಗುತ್ತಿದೆ.
ಇದನ್ನೂ ಓದಿ…. ದಸರಾ ಜಂಬೂಸವಾರಿಯಲ್ಲಿ 6ಬಾರಿ ಅಂಬಾರಿ ಹೊತ್ತಿದ್ದ ಅಭಿಮನ್ಯುಗೆ ವಯೋ ನಿವೃತ್ತಿ
ಅರ್ಜುನ, ಬಲರಾಮರಂತೆ ಗೌರವ ಸಿಗಲಿ: ಅರ್ಜುನ ಆನೆ 22 ಬಾರಿ ಜಂಬೂಸವಾರಿಯಲ್ಲಿ ಭಾಗಿಯಾಗಿ, ಸಲಚಿನದ ಅಂಬಾರಿ ಹೊತ್ತಿತ್ತು. 60 ವರ್ಷ ತುಂಬಿದ ಬಳಿಕವೂ ದಸರಾ ಮಹೋತ್ಸವದಲ್ಲಿ ಭಾಗಿಯಾಗಿತ್ತು. ಅದೆ ರೀತಿ ಬಲರಾಮ ಆನೆ ಕೂಡ ಪಾಲ್ಗೊಂಡಿತ್ತು. ಅಂತಹ ಅವಕಾಶ ಮತ್ತು ಗೌರವ ಅಭಿಮನ್ಯುವಿಗೂ ದೊರಕಬೇಕು ಎಂಬ ಒತ್ತಾಯ ವ್ಯಾಪಕವಾಗಿದೆ. ಕಾರ್ಯಾಚರಣೆಗೆ ನಿಯಮ ಅನ್ವಯಿಸುವುದಿಲ್ಲವೇ?

ಮೈಸೂರು ದಸರಾ ಮಹೋತ್ಸವದಲ್ಲಿ ಆರು ಬಾರಿ ಚಿನ್ನದ ಅಂಬಾರಿ ಹೊತ್ತಿರುವ ಕ್ಯಾಪ್ಟನ್ ಅಭಿಮನ್ಯುವಿಗೆ ಈ ಬಾರಿಯೂ ಜಯೂಸವಾರಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ, ರಾಜೋಚಿತ ಬೀಳ್ಕೊಡುಗೆ ನೀಡಬೇಕು ಜೊತೆಗೆ ಇರುವಷ್ಟು ವರ್ಷ ಅಭಿಮಾನ್ಯ ದಸರಾ ಆನೆಗಳ ತಂಡದ ನಾಯಕನಾಗಿ ಮಾಡಬೇಕು ಇತರೆ ಆಸೆಗಳಿಗೆ ಮಾರ್ಗದರ್ಶನ ನೀಡಲು ಸಹಕಾರಿ ಆಗುತ್ತದೆ ಎಂದು ಮನವಿ ಮಾಡಿದ್ದಾರೆ.
ದಸರಾ ಮಹೋತ್ಸವದಲ್ಲಿ ನಾಡದೇವಿ ಚಾಮುಂಡೇಶ್ವರಿ ವಿರಾಜಮಾನಳಾಗುವ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಗಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದ ಅಭಿಮನ್ಯುವಿಗೆ ನಾಡಿನಾದ್ಯಂತ ದೊಡ್ಡ ಅಭಿಮಾನಿ ಬಳಗವೇ ಇದೆ. ಇಂತಹ ಆನೆಯನ್ನು ಏಕಾಏಕಿ ದಸರಾದಿಂದ ಹೊರಗಿಡುವ ಬದಲು ನಿಶಾನೆ ಆನೆಯಾಗಿ ಬಳಸಿ, ಗೌರವಪೂರ್ವಕ ಹಾಗೂ ರಾಜೋಚಿತ ಬೀಳ್ಕೊಡುಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಅಭಿಮನ್ಯುಗೆ 60 ವರ್ಷ ತುಂಬಿದೆ. ಆದಾಗ್ಯೂ, ನಂತರದಲ್ಲಿ ಸರಗೂರು ಮೂಳೂರಿನಲ್ಲಿ ನಡೆದ ಹುಲಿ ಸರೆ, ಕೊಡಗು ಭಾಗದಲ್ಲಿ ಚಿರತೆ ಸೆರೆ, ಬೇಲೂರು ಭಾಗದಲ್ಲಿ ಕಾಡಾನೆ ಸರೆ ಕಾರ್ಯಾಚರಣೆಗಳಿಗೆ ಬಳಸಿಕೊಳ್ಳಲಾಗಿದೆ. ವಿರೋಧಾಭಾಸ ಅಲ್ಲವೇ? ಮುಂದೆ ಇಂತದ್ದೇ ಸಂದರ್ಭಗಳು ಎದುರಾದರೆ, ಕಾರ್ಯಾಚರಣೆಗಳಿಗೆ ಅಭಿಮನ್ಯುವನ್ನು ಕರೆದುಕೊಂಡು ಹೋಗುವುದಿಲ್ಲವೆ? ಎಂದು ಪ್ರಶ್ನಿಸಲಾಗುತ್ತಿದೆ.
ಇದನ್ನೂ ಓದಿ….ಮೈಸೂರು ದಸರಾ ಜಂಬೂ ಸವಾರಿಗೆ ಸಿದ್ಧವಾದ 12 ಆನೆಗಳ ಗಜಪಡೆ… ಆ.26ಕ್ಕೆ ಗಜಪಯಣ
ದಸರಾದಲ್ಲಿ ಪಾಲ್ಗೊಳ್ಳುವ ಜನಗಳ ಜತೆ ರಾಜ್ಯದ ಜನತೆಗೆ ಅವಿನಾಧಾನ ಸಂಬಂಧವಿದೆ. ಚಿನ್ನದ ಅಂಬಾರಿ ಹೊರುವ ಆನೆಗಳ ಬಗ್ಗೆಯಂತೂ ವಿಶೇಷ ಪ್ರೀತಿ ಇರುತ್ತದೆ. ಅಂತೆಯೆ, ಈ ಬಾರಿ ದಸರಾ ಮಹೋತ್ಸವದಿಂದ ಕ್ಯಾಪ್ಟನ್ ಅಭಿಮನ್ಯುವನ್ನು ಕೈಬಿಟ್ಟಿರುವುದು ಲಕ್ಷಾಂತರ ಅಭಿಮಾನಿಗಳಿಗೆ ಆಘಾತ ತಂದಿದ್ದು, ನಾಡಿಗೆ ಅಪಾರ ಸೇವೆಗೈದಿರುವ ಅಭಿಮನ್ಯುವಿಗೆ ಸೂಕ್ತ ಗೌರವ ಮತ್ತು ಬೀಳ್ಕೊಡುಗೆ ನೀಡಬೇಕು… ಈಗ ಬಿಡುಗಡೆಯಾಗಿರುವ ಪ್ರಟ್ಟಿಯಲ್ಲಿ ಅಭಿಮನ್ನು ಆನೆಯ ಹೆಸರಿಲ್ಲ. ಈ ನಿರ್ಧಾರ ಉದ್ದೇಶಪೂರ್ವಕ ಅಲ್ಲ, ಈ ಕುರಿತು ಮತ್ತೊಮ್ಮೆ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಮೈಸೂರು ಸಿಎಫ್ ರವಿಶಂಕರ್ ಹೇಳಿದ್ದಾರೆ.

ಇನ್ನು ಅಭಿಮನ್ಯುವನ್ನು ನೋಡಿಕೊಳ್ಳುವ ಮಾವುತ ವಸಂತ ಮಾತನಾಡಿ ತಂದೆ ಕಾಲದಿಂದಲೂ ದಸರಾದಲ್ಲಿ ಪಾಲ್ಗೊಂಡು 22 ಸಲ ಅಂಬಾರಿ ಹೊತ್ತು ಇಡೀ ವಿಶ್ವ ಮೆಚ್ಚುಗೆಗೆ ಪಾತ್ರನಾಗಿದ್ದ ನನ್ನ ಆನೆ ಈ ಸಲ ಪಾಲ್ಗೊಳ್ಳದೆ ಇರುವುದು ತುಂಬಾ ಬೇಸರ ತರಿಸಿದೆ. ನನ್ನ ಹಿರಿಯ ಅಧಿಕಾರಿಗಳು ಮತ್ತೊಮ್ಮೆ ಪರಿಶೀಲನೆ ಮಾಡಿ ಪಾಲ್ಗೊಳ್ಳುವಂತೆ ಮಾಡಲಿ ಎಂಬುದೇ ನನ್ನ ಆಸೆ ಎಂದು ಹೇಳಿದ್ದಾರೆ.






