CinemaLatest

ಮಹಾತಾಯಿಯರ ಭಕ್ತಿಭಾವ ತುಂಬಿದ ಭಕ್ತಿಗೀತೆಯ ಆಲ್ಬಮ್ ಸಾಂಗ್ ಶೀಘ್ರ ಬಿಡುಗಡೆ..

ಬೆಂಗಳೂರು: ಸಾಲು ಸಾಲು ಹಬ್ಬದ ಸಂಭ್ರಮದ ಪ್ರಯುಕ್ತ  ಕೀರ್ತನ ಮೂವಿ ಮೇಕರ್ಸ್ ವತಿಯಿಂದ ನಾಡಿನ ಸಮಸ್ತ ಜನತೆಗೆ  ಮೂರು ಮಹಾ ತಾಯಂದಿರ ಭಕ್ತಿಭಾವ ತುಂಬಿದ ವಿಶೇಷ ವಿಡಿಯೋ ಆಲ್ಬಮ್‌ಸಾಂಗ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಶ್ರೀದೇವಿ ಎಲ್ಲಮ್ಮ, ಶ್ರೀದೇವಿ ಲಕ್ಷ್ಮಿ ಹಾಗೂ ಶ್ರೀದೇವಿ ದುರ್ಗೆ — ಈ ಮೂರು ಮಹಾ ತಾಯಂದಿರ ಮಹಿಮೆ, ಶಕ್ತಿ ಹಾಗೂ  ಭಕ್ತಿಭಾವವನ್ನು ಸಾರುವ ವಿಶೇಷ ಹಾಡುಗಳನ್ನು ಬೆಂಗಳೂರಿನ ಸುತ್ತಮುತ್ತಲಿನ ವಿವಿಧ ಪ್ರದೇಶಗಳಲ್ಲಿ ಸತತ ಐದು ದಿನಗಳ  ಚಿತ್ರೀಕರಣ ನಡೆಸಲಾಗಿದ್ದು ಮೂರು ದೇವತೆಗಳ ಪಾತ್ರಗಳಲ್ಲಿ ಕಿರುತೆರೆ ಮತ್ತು ಚಲನಚಿತ್ರ ಕಲಾವಿದೆ ಸುನಂದಾ ಕಲ್ಬುರ್ಗಿ, ನಮೃತ.ಎನ್. ಕುಲಕರ್ಣಿ ಹಾಗೂ ಶ್ರೀಮತಿ ಗೀತಾ ವೆಂಕಟೇಶ್ ಅವರುಗಳು ಅಭಿನಯಿಸಿದ್ದಾರೆ.

ಛಾಯಾಗ್ರಹಣ ಬೆಟ್ಟೇಗೌಡ ಕಿಲಾರ, ಸಾಹಿತ್ಯ ಲೋಕೇಶ್ ವಿದ್ಯಾಧರ, ನಾರಾಯಣ್, ಸಂಗೀತ ಎಸ್.ಕೆ. ಸಾಯಿ ಶ್ಯಾಮ್ (ರಿದಂ ಕುಟ್ಟಿ), ಅನಿತಾ ನಾರಾಯಣ ಕುಲಕರ್ಣಿ ಹಿನ್ನೆಲೆ ಗಾಯನ, ನೃತ್ಯ  ಸಂಯೋಜನೆ ಶ್ರೀಮತಿ ಶಾಂತಿ ಹಾಗೂ ದೀಪಾ, ವರ್ಣಾಲಂಕಾರ, ಕೇಶಾಲಂಕಾರ :ಪಲ್ಲವಿ ಸಹಾಯ ಭಾಗ್ಯಮ್ಮ, ವಸ್ತ್ರಾಲಂಕಾರ ರೋಹಿತ್, ಸಂಕಲನ ಯುವರಾಜ್, ಡಿ.ಐ ಜೀವನ್, ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ್ ಹಂಡಿಗಿ, ನಿರ್ದೇಶನ ಹಾಗೂ ನಿರ್ಮಾಣದ ಹೊಣೆ ಚಲನಚಿತ್ರ ನಿರ್ದೇಶಕ,ನಿರ್ಮಾಪಕ ಲೋಕೇಶ್ ವಿದ್ಯಾಧರ ಹೊತ್ತಿದ್ದಾರೆ.

ನಾಡಿನ ಸಂಸ್ಕೃತಿ ಮತ್ತು ಭಕ್ತಿಯ ಸೊಗಡನ್ನು  ಜನಮನಗಳಿಗೆ ತಲುಪಿಸುವ ಉದ್ದೇಶದಿಂದ ಮೂಡಿಬರುತ್ತಿರುವ ಈ ವಿಶೇಷ ವಿಡಿಯೋ ಆಲ್ಬಮ್ ಸಾಂಗ್ ಸದ್ಯದಲ್ಲೇ ಬಿಡುಗಡೆಯಾಗಲಿದ್ದು ನಾಡಿನ ಸಮಸ್ತ ಜನರ ಆಶೀರ್ವಾದ, ಪ್ರೋತ್ಸಾಹ ಹಾಗೂ ಬೆಂಬಲವನ್ನು ಕೀರ್ತನ ಮೂವಿ ಮೇಕರ್ಸ್ ಕೋರಿದೆ.

admin
the authoradmin

ನಿಮ್ಮದೊಂದು ಉತ್ತರ