CinemaLatest

“ದೇಶ ಪ್ರೇಮ” ಟೆಲಿಫಿಲ್ಮ್ ಚಿತ್ರೀಕರಣ ಮುಕ್ತಾಯ… ಶೀಘ್ರ  ಬಿಡುಗಡೆಗೆ ಚಿತ್ರತಂಡ ಸಿದ್ಧತೆ..!

ಸಿದ್ದುಕೃಷ್ಣ ಕ್ರಿಯೇಷನ್ಸ್ ಸಂಶಿ ಅರ್ಪಿಸುವ “ದೇಶ ಪ್ರೇಮ” ಟೆಲಿಫಿಲ್ಮ್ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎಂದು ನಿರ್ಮಾಪಕರಾದ ಶ್ರೀಮತಿ ರೇಖಾ ಸಿದ್ದುಕೃಷ್ಣ, ಶ್ರೀಮತಿ ರಾಧಿಕಾ ಮಹೇಶಗೌಡ ತಿಳಿಸಿದರು.

ಲ್ಯಾನ್ಸ್ ನಾಯಕ ವೀರಯೋಧ ಹನುಮಂತಪ್ಪ ಕೊಪ್ಪದ ಇವರ ಜನ್ಮಸ್ಥಳ ಬೆಟದೂರ ಗ್ರಾಮದಲ್ಲಿ ಹೆಚ್ಚಿನ ಚಿತ್ರೀಕರಣ ಮಾಡಲಾಗಿದ್ದು, ಸಂಶಿ, ಕುಂದಗೋಳ, ಹುಬ್ಬಳ್ಳಿ, ಧಾರವಾಡ, ಲಕ್ಷ್ಮೇಶ್ವರ, ಮತ್ತಿಗಟ್ಟಿ, ಹಂಚಿನಾಳ ಗ್ರಾಮಗಳಲ್ಲೂ ಚಿತ್ರೀಕರಣ ನಡೆಸಲಾಗಿದೆ, ದೇಶಪ್ರೇಮ ಕುರಿತ ಕತೆ ಇದಾಗಿದ್ದು ನಾಯಕನ ಪಾತ್ರದಲ್ಲಿ ಸಾತ್ವಿಕ್ ಢೇಕಣೆ, ನಾಯಕಿಯಾಗಿ ಫಾಲ್ಗುಣಿ ಅಭಿನಯಿಸಿದ್ದಾರೆ.

ವಿಶೇಷ ಪಾತ್ರದಲ್ಲಿ ಮಹೇಶ್ ಗೌಡ ಪಾಟೀಲ್, ಖ್ಯಾತ ನಟ, ನಿರ್ದೇಶಕ ಸುಶೀಲ್ ಮೊಕಾಶಿ ಅಭಿನಯಿಸಿದ್ದು, ಇನ್ನುಳಿದ ತಾರಾಗಣದಲ್ಲಿ ಸಿದ್ದುಕೃಷ್ಣ, ದೀಪಾ ವಸ್ತ್ರದ, ಗೋವಿಂದ್ ಮಾಂಡ್ರೆ, ಲಲಿತಾ ಮತ್ತಿಕೊಪ್ಪ, ಎಚ್.ಬಸವಂತ, ವಿಜಯ್ ಕುಂದಗೋಳ, ಶಿವಪ್ಪ ನರಗುಂದ ನೂಲ್ವಿ, ಯಲ್ಲಪ್ಪ  ಡೊಳ್ಳಿನ, ಚನ್ನಯ್ಯ ಹಿರೇಮಠ ಇಟಿಗಟ್ಟಿ, ವೀರನಗೌಡ ಹೊಸಮನಿ, ಗಂಗಾ ಬ್ಯಾಹಟ್ಟಿ, ಗೀತಾ ಪೋಲಿಸ್ ಪಾಟೀಲ್, ನಿಶ್ಚರಾ ಪಾಟೀಲ್, ಪ್ರತೀಕ್ಷಾ ನಡೂರಮಠ, ಭೂಮಿಕಾ ಮಜ್ಜಿಗುಡ್ಡ, ನಯನಾ ವೀರೇಶ್, ನಿವೇದಿತಾ ತದಾನಿ, ಅಜಯ್ ಪ್ರಭು, ಎನ್.ಮಹಾಂತೇಶ್, ಚನ್ನಯ್ಯ ಹಿರೇಮಠ, ಬಿ.ಮಂಜುನಾಥ, ವೀರನಗೌಡ ಕೊಳೂರ, ಸಿದ್ದರಾಮಯ್ಯ, ಶಕ್ತಿ ಪ್ರಸಾದ್, ಅಭಿಷೇಕ್, ಬೇಬಿ ಪ್ರಗತಿ, ಬೇಬಿ ಶಾಂತಾ, ಮಾ.ಆರವ್ ಮೊದಲಾದವರಿದ್ದಾರೆ.

ತಾಂತ್ರಿಕ ವರ್ಗದಲ್ಲಿ- ವೀರೇಶ್ ಶಲವಡಿ ಛಾಯಾಗ್ರಹಣ, ರಮೇಶ್ ಬಕ್ಕಸದ ಕಥೆ, ಗುರು ಪಾಟೀಲ್ ಸಂಕಲನ, ಅಶೋಕ ಕಾಳಭೈರವ ವಸ್ತ್ರಾಲಂಕಾರ, ಅರ್ಚನಾ ಡಿಚೋಲೇಕರ ಪ್ರಸಾಧನ, ಸಿದ್ಧರಾಮೇಶ ಪಾಳೇದ ಕೇಶಾಲಂಕಾರ, ಡಾ.ಪ್ರಭು ಗಂಜಿಹಾಳ ಡಾ.ವೀರೇಶ ಹಂಡಿಗಿ ಪತ್ರಿಕಾ ಸಂಪರ್ಕ, ಅಶೋಕ ಘೋರ್ಪಡೆ ಪ್ರಚಾರ ಕಲೆ, ಮಹೇಶ್‌ಗೌಡ ಪಾಟೀಲ್ ಸಂಭಾಷಣೆ,  ಸಹನಿರ್ದೇಶನವಿದ್ದು, ಸಿದ್ದುಕೃಷ್ಣ ಢೇಕಣೆ ನಿರ್ದೇಶಕರಾಗಿದ್ದಾರೆ. ಈ ಟೆಲಿಫಿಲ್ಮ್ ನ್ನು ಎಲ್ಲಾ ಕನ್ನಡಿಗರು ನೋಡಿ ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕೆಂದು ನಿರ್ದೇಶಕ ಸಿದ್ದುಕೃಷ್ಣ ತಿಳಿಸಿದ್ದಾರೆ.

admin
the authoradmin

ನಿಮ್ಮದೊಂದು ಉತ್ತರ