ಹುಣಸೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಹುಟ್ಟು ಹಬ್ಬದ ಅಂಗವಾಗಿ ಹುಣಸೂರು ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಣ್ಣು – ಹಂಪಲು ಹಾಗೂ ನೀರಿನ ಫ್ಲಾಸ್ಕ್ ಹಂಚುವ ಕಾರ್ಯಕ್ಕೆ ಹುಡಾ ಅಧ್ಯಕ್ಷ ಹೆಚ್.ಪಿ.ಅಮರ್ ನಾಥ್ ಚಾಲನೆ ನೀಡಿದರು.

ನಗರದ ದೇವರಾಜ್ ಅರಸ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಮಾವಣೆಗೂಂಡ ಕಾಂಗ್ರೆಸ್ ಮುಖಂಡರು ಹಾಗೂ ಹೆಚ್.ಪಿ.ಮಂಜುನಾಥ್ ಸ್ನೇಹಜೀವಿ ಬಳಗದ ಸದಸ್ಯರು ನೂರಾರು ರೋಗಿಗಳಿಗೆ ಹಣ್ಣು – ಹಂಪಲು ಹಾಗೂ ವಾಟರ್ ಫ್ಲಾಸ್ಕ್ ಹಂಚಿದರು.
ಇದೇ ವೇಳೆ ಮಾತನಾಡಿದ ಯೋಜನಾ ಪ್ರಾಧಿಕಾರದ ಅಧ್ಯಕ್ಷ (ಹುಡಾ) ಹೆಚ್.ಪಿ.ಅಮರ್ ನಾಥ್ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ರಾಜಕಾರಣಿ, ಎಲ್ಲರಿಗೂ ಮಾದರಿಯಾಗುವ ದಕ್ಷ ಪ್ರಾಮಾಣಿಕ ರಾಜಕಾರಣಿ, ರಾಜ್ಯದ ಉಪಮುಖ್ಯಮಂತ್ರಿಗಳಿಗೆ ಆಯುಷ್ಯ ವೃದ್ಧಿಯಾಗಿ, ಅವರು ಅಂದುಕೊಂಡ ಅಂತಹ ಎಲ್ಲಾ ರಾಜಕೀಯ ಸ್ಥಾನಮಾನಗಳು ಸಿಗಲಿ ಎಂದು ಆಶಿಸಿದರು.

ಇನ್ನು ನಗರದ ಸಂವಿಧಾನ ವೃತ್ತದಲ್ಲಿ ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ಸ್ನೇಹಜೀವಿ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ಸದಸ್ಯರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಸಾರ್ವಜನಿಕರಿಗೆ ಸಿಹಿ ಹಂಚಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಗದ್ದಿಗೆ ದೇವರಾಜು, ಗ್ರಾಮಾಂತರ ಅಧ್ಯಕ್ಷ ಬಾಲ್ ಸುಂದರ್, ಬಿಳಿಕೆರೆ ಬ್ಲಾಕ್ ಅಧ್ಯಕ್ಷ ಪ್ರೇಮ್ ಕುಮಾರ್, ತಾ.ಹಿಂದುಳಿದ ವರ್ಗಗಳ ಅಧ್ಯಕ್ಷ ವಿ.ಮಹದೇವ್, ತಾಲ್ಲೂಕು ಗ್ಯಾರಂಟಿ ಅನುಷ್ಟಾನ ಅಧ್ಯಕ್ಷ ರಾಘು, ಅಕ್ರಮ- ಸಕ್ರಮ ಸದಸ್ಯ ಗುಣಶೇಖರ್, ಯುವ ಕಾಂಗ್ರೆಸ್ ಅಧ್ಯಕ್ಷ ದರ್ಶನ್, ಉದ್ಯಮಿ ನಾಡಪ್ಪನಹಳ್ಳಿ ರಾಜು, ತಾ.ಪಂ.ಮಾಜಿ ಸದಸ್ಯ ಅಜ್ಗರ್ ಪಾಷ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುನೀತಾ ಜಯರಾಮೇಗೌಡ, ರೇಣುಕಾ, ಕಾಲೇಜು ಅಭಿವೃದ್ಧಿ ಸದಸ್ಯ ಚೇತನ್, ಮಧು ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.








