LatestMysore

ಡಾ ವಿ ಲಕ್ಷ್ಮಿ ನಾರಾಯಣರವರ, ಮಧುಮೇಹ -ಮನುಕುಲದ ಅಗೋಚರ ಶತ್ರು ಕೃತಿ ಬಿಡುಗಡೆ

ಮೈಸೂರು: ನಾಡಿನ ಪ್ರಖ್ಯಾತ ವೈದ್ಯ ಸಾಹಿತಿಗಳಾದ, ಡಾ ವಿ ಲಕ್ಷ್ಮಿ ನಾರಾಯಣ ರವರ, ಮಧುಮೇಹ -ಮನುಕುಲದ ಅಗೋಚರ ಶತ್ರು, ಕೃತಿಯನ್ನು ಮೈಸೂರು ಕೊಡಗು ಸಂಸದರಾದ  ಯದುವೀರ್ ಕೃಷ್ಣ ದತ್ತ ಒಡೆಯರ್ ಲೋಕಾರ್ಪಣೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷ್ಣ ರಾಜ ಕ್ಷೇತ್ರದ ಶಾಸಕರಾದ  ಶ್ರೀವತ್ಸ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ, ನೂತನವಾಗಿ ವಿಧಾನ ಪರಿಷತ್ ಸದಸ್ಯರಾಗಿ ಚುನಾಯಿತರಾದ   ರಘು ಕೌಟಿಲ್ಯ ಭಾಗವಹಿಸಿದ್ದರು.

ಡಾ.ಪ್ರಧಾನ ಗುರುದತ್ತ,ಡಾ.. ಚಿದಾನಂದ ಗೌಡ, ಡಾ..ಬಹವನಗೌಡ, ಪ್ರಜಾವಾಣಿ ಪತ್ರಿಕೆಯ  ರವೀಂದ್ರ ಭಟ್, ಲೇಖಕರಾದ ಮೈ ನಾ ಲೋಕೇಶ್ ,   ಮತ್ತಿತರ ಗಣ್ಯರು ಉಪಸ್ಥಿತರಿದ್ದರು .

ಶ್ರೀಮತಿ ಎನ್ ಆರ್ ರೂಪಶ್ರೀ ನಿರೂಪಣೆ, ಡಾ.ಎಂ.ಜಿ.ಆರ್.ಅರಸ್ ವಂದನಾರ್ಪಣೆ ಮಾಡಿದರು.

admin
the authoradmin

Leave a Reply