ArticlesLatest

ಅಪ್ಪಾ….. ನೀನು ಪಿತಾಮಹ ಶ್ರೇಷ್ಠ ಪ್ರತೀಕ.. ನೀನೆಅಲ್ಲವೆ ಮಡದಿಮಕ್ಕಳ ಮಹಾಪೂರಕ

ಸತ್ಯದ ಪ್ರತಿರೂಪವಾದ ತಾಯಿದೇವರಿಂದ
ನಿತ್ಯವು ಪೂಜಿಸಲ್ಪಡುವಂಥ ನಂಬಿಕೆವಂದ್ಯ
ಅಪ್ಪಾ….. ನೀನು ಪಿತಾಮಹ ಶ್ರೇಷ್ಠ ಪ್ರತೀಕ
ನೀನೆಅಲ್ಲವೆ ಮಡದಿಮಕ್ಕಳ ಮಹಾಪೂರಕ

ಶ್ರಮಪಟ್ಟು ದುಡಿದು ದುಡಿದು ಕಡೇವರೆಗು
ಸಂಪಾದಿಸುವ ನಿಷ್ಠಾವಂತ ಕರ್ಮಯೋಗಿ
ಪೋಷಣೆ ಮಾಡಲು ಉಸಿರಿರೋವರೆಗು
ಕಾಳಜಿತೋರುವ ಕುಟುಂಬಚಿಂತಕ ಧರ್ಮಜೋಗಿ

ನಿನ್ನತ್ಯಾಗ ಬಲಿದಾನ ನಮಗೆಲ್ಲ ಜೀವದಾನ
ಅನ್ನಬಟ್ಟೆಸೂರು ನೀಡುವ ನೀನೆ ಚಿನ್ನಾರನ್ನ
ನಮ್ಮ ಜೀವನ ಯಾನದ ದಯಾಮಯ
ನಿತ್ಯ ಸತ್ಯ ಶ್ಲಾಘನಾರ್ಹ ಪೂಜನೀಯ

ಭೋರ್ಗರೆವ ಝರಿ ನದಿಯಂತೆ ನೀನು
ತುಂಬಿದ ಕೆರೆತೊರೆಯಂತೆ ನಿಸ್ವಾರ್ಥನು
ನಮಗೆ ಸಾರ್ಥಕ ಸರಿದಾರಿ ತೋರಿಸುವೆ
ನಮ್ಮೆಲ್ಲರ ಹಸಿವು ದಾಹವ ಇಂಗಿಸುವೆ
ವರ್ಷವಿಡೀ ಕಳೇತೆಗೆದು ಬೆಳೆಯಬೆಳೆದು

ಮಹಿಳೆ ಮಕ್ಕಳ ಹೊಟ್ಟೆಯ ತುಂಬಿಸುವೆ
ಚಪ್ಪಲಿ ಹೊಲೆದು ಬಿದಿರುಬಟ್ಟೆ ನೇಯ್ದು
ಸ್ವಾಭಿಮಾನ ಶೀಲವನ್ನ ಕಾಪಾಡುವೆ
ಎಲ್ಲೇಇರಲಿ ಎಷ್ಟೇತರಲಿ ಏನೇಆಗಲಿ
ಮೊದಲ ಆದ್ಯತೆ ಪರಿವಾರಕ್ಕೆ ನೀಡುವೆ

ಯಾವ್ದೇ ಹಾಳಾಗ್ಲಿ ಯಾರೇ ಕೂಗಾಡಲಿ
ನೀ,ಮೊದಲು ಎದೆಯೊಡ್ಡಿ ಮುನ್ನುಗ್ಗುವೆ
ನಂಬಿಕೆ ದ್ರೋಹ ಮಾಡಿದ ಮಗನಿಗೂ
ನಿಂದಿಸಿ ಆಚೆಗೆ ದೂಡಿದ ಮಗಳಿಗೂ

ಅಬಲೆ ರೋಗಿಯಾದ ಧರ್ಮಪತ್ನಿಗೂ
ಕನಸುಮನಸಲ್ಲು ಕೇಡುಬಗೆಯದ ನೀನು
ಮಡದಿ ಮಕ್ಕಳಿಗೆ ಸಮಾಧಾನ ಹೇಳುವೆ
ನಿನ್ನತಂದೆ ತಾಯನ್ನೆಂದು ದೂಷಿಸಿನಿಂದಿಸದೆ

ಪಾಲಿಗೆ ಬಂದದ್ದು ಪಂಚಾಮೃತ ಎನ್ನುವೆ
ನಿನ್ನಗುಣ ನಡತೆಗೆ ಯಾರಿಲ್ಲ ಸರಿಸಾಟಿ
ಓ, ನನ್ನ ಅಪ್ಪಾ….ನಿನಗೆ ನೀನೇ ಸಾಟಿ
ವಂದೇ ಪಿತಾಮಹನೆ…. ನಿನಗೆ ವಂದನೆ
ಜಗವೇ ನಮಿಸುತ್ತಿದೆ ನಿನಗಾಗಿ ಇಂದು
ಹೀಗೇ ವಂದಿಸುತ್ತಿರಲಿ ಪಿತೃದೇವಗೆ ಎಂದೆಂದು

admin
the authoradmin

6 ಪ್ರತಿಕ್ರಿಯೆಗಳು

ನಿಮ್ಮದೊಂದು ಉತ್ತರ