LatestMysore

ಮೇ.19, ಸಾಲಿಗ್ರಾಮ ತಹಸೀಲ್ದಾರ್ ರುಖಿಯಾ ಬೇಗಂ ವಿರುದ್ಧ ನೌಕರರ ಪ್ರತಿಭಟನೆ

ಏಕವಚನದಲ್ಲಿ ನಿಂದನೆ, ಕಿರುಳದ ಆರೋಪ

ಸಾಲಿಗ್ರಾಮ(ಸಂಘಟನೆ ಮಂಜುನಾಥ್): ತಾಲೂಕು  ತಹಸಿಲ್ದಾರ್ ರುಖಿಯಾ ಬೇಗಂ ಅವರ ವರ್ತನೆ ವಿರುದ್ಧ ಸಿಡಿದೆದ್ದಿರುವ ನೌಕರರು ಮೇ.19ರಂದು ಮಂಗಳವಾರ ಸಾಲಿಗ್ರಾಮ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಂಡಿದ್ದಾರೆ.

ಈ ಸಂಬಂಧ ಗ್ರಾಮ ಅಡಳಿತ ಅಧಿಕಾರಿಗಳ ಸಂಘದ ರಾಜ್ಯಾ ಧ್ಯಕ್ಷ ಯೋಗೇಶ್ ನಾಯಕ್ ಮಾಹಿತಿ ನೀಡಿದ್ದು, ತಹಸೀಲ್ದಾರ್ ರವರು  ತಮ್ಮ ಅಧೀನ ನೌಕರರನ್ನು ಏಕವಚನದಲ್ಲಿ ಮತ್ತು ಅಶ್ಲೀಲ ಪದಗಳಿಂದ ನಿಂಧಿಸುತ್ತಿದ್ದು, ತನ್ನ ಅಧಿಕಾರವನ್ನು ಉಪಯೋಗಿಸಿಕೊಂಡು ಅಧೀನ ನೌಕರರನ್ನು ವಿನಾಕಾರಣ ಶಿಕ್ಷಿಸುವ ನೌಕರರಿಗೆ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತಿರುವ ಹಾಗೂ ಅಧೀನ ಸಿಬ್ಬಂದಿಗಳಿಗೆ ರಾಜೀನಾಮೆ  ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ.

ಅಲ್ಲದೆ ಅಮಾನವೀಯವಾಗಿ ಅಮಾನತ್ತು ಮಾಡುತ್ತಿರುವುದು ಸೇರಿದಂತೆ ಹಲವು ರೀತಿಯ ಕಿರುಕುಳ ನೀಡುತ್ತಿದ್ದು, ಅವರ ವಿರುದ್ಧ ರಾಜ್ಯ ಗ್ರಾಮಾಧಿಕಾರಿಗಳು ಮತ್ತು ಸಾಲಿಗ್ರಾಮ ತಾಲೂಕಿನ ಗ್ರಾಮಾಧಿಕಾರಿಗಳು ಜೊತೆಗೂಡಿ ತಹಸಿಲ್ದಾರ್ ಅವರ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.

ಸರ್ವಾಧಿಕಾರಿ ಧೋರಣೆ ತೋರುತ್ತಿರುವ ತಹಸಿಲ್ದಾರ್ ರುಖಿಯ ಬೇಗಂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮುಂದೆ ಇಂತಹ ಯಾವುದೇ ಕೆಳ ಅಧಿಕಾರಿಗಳಿಗೆ ತೊಂದರೆ ನೀಡದಂತೆ ನಡೆದುಕೊಳ್ಳಬೇಕೆಂದು ಒತಾಯಿಸಿ ನಮಗೆ ನ್ಯಾಯ ಸಿಗುವವರೆಗೂ ತಾಲೂಕು ಕಚೇರಿ ಮುಂಭಾಗ ಮೇ.19 ಬೆಳಗ್ಗೆ 9 ಗಂಟೆಯಿಂದ ಸಾಯಂಕಾಲ 6 ಗಂಟೆಯವರಿಗೆ ಸುಮಾರು 300 ಜನ ಗ್ರಾಮಾ ಧಿಕಾರಿಗಳು ನ್ಯಾಯ ಸಿಗುವವರೆಗೂ ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.

 

admin
the authoradmin

Leave a Reply

Translate to any language you want