ಹುಣಸೂರಿನಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 1,316 ಪ್ರಕರಣಗಳು ಇತ್ಯರ್ಥ… ಮುನಿಸು ಮರೆತು ಒಂದಾದ ದಂಪತಿ

ಹುಣಸೂರು(ಮನುಕುಮಾರ್): ನಗರದ ನ್ಯಾಯಾಲಯಗಳ ಆವರಣದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ 2026ರ ಸೆಪ್ಟೆಂಬರ್ ಅಂತ್ಯಕ್ಕೆ 10,657 ಪ್ರಕರಣಗಳು ಬಾಕಿ ಉಳಿದಿದ್ದು, ಈ ಪೈಕಿ 2,647 ಪ್ರಕರಣಗಳನ್ನು ಕೈಗೆತ್ತಿಕೊಂಡು ಇದರಲ್ಲಿ 1,316 ಪ್ರಕರಣಗಳು 2.91 ಕೋಟಿ ರೂ.ಗಳಿಗೆ ಇತ್ಯರ್ಥವಾಗಿವೆ. ಇದರ ಜೊತೆಗೆ ಮುನಿಸುಗೊಂಡಿದ್ದ ದಂಪತಿಯೂ ಒಂದಾಗಿ ಮನೆ ಸೇರಿರುವುದು ವಿಶೇಷವಾಗಿದೆ.
ನಗರದಲ್ಲಿರುವ ನಾಲ್ಕು ಕೋರ್ಟ್ ಗಳಲ್ಲಿ ಶನಿವಾರ ಮಧ್ಯಾಹ್ನ 2ಕ್ಕೆ ಎಲ್ಲ ನ್ಯಾಯಾಲಯಗಳಲ್ಲಿ ಏಕ ಕಾಲಕ್ಕೆ ಪ್ರಾರಂಭವಾದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ವಾದಿ ಮತ್ತು ಪಿರ್ಯಾಧಿಗಳ ನಡುವಿನ ರಾಜಿ ಒಪ್ಪಂದ ಮತ್ತು ಪ್ರಕರಣಗಳ ಇತ್ಯಾರ್ಥದಲ್ಲಿ ಒಟ್ಟು 1,316 ಪ್ರಕರಣಗಳು ಇತ್ಯರ್ಥಗೊಂಡಿವೆ.

ಈ ಪೈಕಿ 31 ಚೆಕ್ ಬೌನ್ ಪ್ರಕರಣಗಳು 68,86,357 ರೂಪಾಯಿಗೆ ಇತ್ಯರ್ಥಗೊಂಡಿವೆ, ಹಾಗೆ ಹಣ ರೂಪಾಯಿ ವಸೂಲಾತಿಯ 17 ಪ್ರಕರಣಗಳಲ್ಲಿ 41,03,462 ವಸೂಲಾತಿಯಾಗಿದೆ, ಅಲ್ಲದೆ ಆಸ್ತಿ ವಿವಾದ ಪ್ರಕರಣಗಳಲ್ಲಿ 16 ದಾವೆಗಳು ಇತ್ಯಾರ್ಥವಾಗಿವೆ ಹಾಗೂ ಮೋಟಾರ್‌ವಾಹನ ಕಾಯಿದೆ ಅಪರಾಧ ಪ್ರಕರಣದಲ್ಲಿ ಒಂದು ಪ್ರಕರಣ 1,75,000 ರೂಪಾಯಿಗೆ ಇತ್ಯರ್ಥವಾಗಿದೆ, ಒಟ್ಟು ಎಲ್ಲ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು 1,310 ಪ್ರಕರಣಗಳು ರೂ. 2,91,68,572 ರೂ. ಗಳಿಗೆ ಇತ್ಯರ್ಥವಾಗಿವೆ.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಸೆಪ್ಟೆಬರ್2026ಕ್ಕೆ 2,610 ಪ್ರಕರಣಗಳು ಬಾಕಿ ಇದ್ದು, ಈ ಪೈಕಿ 354 ಪ್ರಕರಣಗಳನ್ನು ಕೈಗೆತ್ತಿಕೊಂಡು 331 ಪ್ರಕರಣಗಳು. 57,63,097 ಕೈ ಇತ್ಯರ್ಥವಾಗಿವೆ. ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಸೆಪ್ಟೆಂಬರ್2026ಕ್ಕೆ 1,335 ಪ್ರಕರಣಗಳು ಬಾಕಿ ಇದ್ದು, ಈ ಪೈಕಿ 370 ಪ್ರಕರಣಗಳನ್ನು ಕೈಗೆತ್ತಿಕೊಂಡು 145 ಪ್ರಕರಣಗಳನ್ನು ರೂ. 1,49,26,168 ಕ್ಕೆ ಇತ್ಯರ್ಥವಾಗಿದೆ.

ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಸೆಪ್ಟೆಂಬರ್2026ಕ್ಕೆ 3,826 ಪ್ರಕರಣಗಳು ಬಾಕಿ ಇದ್ದು, ಈ ಪೈಕಿ478 ಪ್ರಕರಣಗಳನ್ನು ಕೈಗೆತ್ತಿಕೊಂಡು 460 ಪ್ರಕರಣಗಳನ್ನು 5. 59,58,951 ಇತ್ಯರ್ಥವಾಗಿವೆ. ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಸೆಪ್ಟೆಂಬರ್ 2026ಕ್ಕೆ 2,876 ಪ್ರಕರಣಗಳು ಬಾಕಿ ಇದ್ದು, ಈ ಪೈಕಿ 445 ಪ್ರಕರಣಗಳನ್ನು ಕೈಗೆತ್ತಿಕೊಂಡು 374 ಪ್ರಕರಣಗಳನ್ನು 5. 25,20,386 ಒಟ್ಟು ನಾಲ್ಕು ಎಲ್ಲಾ ನ್ಯಾಯಾಲಯಗಳಿಂದ ಸೆಪ್ಟೆಂಬರ್ 2026ಕ್ಕೆ 10,657 ಪ್ರಕರಣಗಳು ಬಾಕಿ ಇದ್ದು, ಈ ಪೈಕಿ 2,647 ಪ್ರಕರಣಗಳನ್ನು ಕೈಗೆತ್ತಿಕೊಂಡು 1,310 ಪ್ರಕರಣಗಳನ್ನು 5.2,91,68,572.ಕ್ಕೆ ಇತ್ಯರ್ಥವಾಗಿದೆ.
ನ್ಯಾಯಾಧೀಶರ ಮನವೊಲಿಕೆಯಿಂದ ತಮ್ಮ ತಪ್ಪನ್ನು ತಿದ್ದಿಕೊಂಡು ಮನಸು ಬದಲಾಯಿಸಿ ತಮ್ಮ ಮಕ್ಕಳ ಭವಿಷ್ಯದ ಹಿತದೃಷ್ಠಿಯಿಂದ ಒಂದಾದ ದಂಪತಿ ತಮ್ಮ ಮಕ್ಕಳೊಂದಿಗೆ ತೆರಳಿದ್ದು, ವಿಶೇಷವಾಗಿತ್ತು.







