LatestMysore

ಶಾಲೆಯೇ ಪವಿತ್ರವಾದ ದೇವಸ್ಥಾನ, ಶಾಲೆಯಲ್ಲಿರುವ ಮಕ್ಕಳೇ ನಿಜವಾದ ದೇವರು

ಅವಿರತ ಟ್ರಸ್ಟ್  ವತಿಯಿಂದ ಲೇಖನ ಸಾಮಗ್ರಿ ವಿತರಣೆ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಶಾಲೆಯೇ ಪವಿತ್ರವಾದ ದೇವಸ್ಥಾನ, ಶಾಲೆಯಲ್ಲಿರುವ ಮುಗ್ಧ ಮಕ್ಕಳೇ ನಿಜವಾದ ದೇವರು ಎಂದು ಮುಳ್ಳೂರು ಶಾಲಾ ಕ್ಲಸ್ಟರ್ ನ  ಸಂಪನ್ಮೂಲ ವ್ಯಕ್ತಿ ಎಸ್.ವಸಂತಕುಮಾರ ಹೇಳಿದರು

ಹುಣಸೂರು ತಾಲ್ಲೂಕಿನ ಗಾವಡಗೆರೆ ಹೋಬಳಿಯ ಮುಳ್ಳೂರು ಕ್ಲಸ್ಟರ್ ನ ತೊಂಡಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೆಂಗಳೂರಿನ ಅವಿರತ ಟ್ರಸ್ಟ್  ವತಿಯಿಂದ  ಅಂದಾಜು  25,000 ಮೌಲ್ಯದ ನೋಟ್ ಪುಸ್ತಕಗಳು, ಪೆನ್ನುಗಳು, ಪೆನ್ಸಿಲ್ ಮತ್ತು ಮಕ್ಕಳಿಗೆ ಬೇಕಾಗುವ ಎಲ್ಲಾ ರೀತಿಯ ಕಲಿಕಾ ಸಾಮಾಗ್ರಿಗಳನ್ನು ವಿತರಿಸಿದ ಮಾತನಾಡಿ ಶಾಲೆಯ ಎಲ್ಲಾ  ಮಕ್ಕಳಿಗೆ ಉಚಿತವಾಗಿ ನೀಡುವ ಕಲಿಕಾ ಪರಿಕರಗಳೇ ದೇವರಿಗೆ ನೀಡುವ ನೈಜ ಕಾಣಿಕೆಯಾಗಿದೆ ಎಂದರು.

ಪ್ರತಿಯೊಬ್ಬರೂ ಮುಗ್ಧ ಮಕ್ಕಳ ಕಲಿಕೆಗೆ ಸಹಾಯಹಸ್ತ ಚಾಚುವುದರ ಮೂಲಕ ಪ್ರತ್ಯೇಕವಾಗಿ ದೇವರನ್ನು ಕಾಣಲು ಸಾಧ್ಯ.  ದೇವರ ದರ್ಶನ ಪಡೆಯಲು ದೂರದ ಸ್ಥಳಗಳಿಗೆ,ಹೋಗಿ ಸಮಯ ಮತ್ತು ಹಣ ವ್ಯರ್ಥ ಮಾಡುವ ಬದಲು ಸರ್ಕಾರಿ ಶಾಲೆಗೆ ಬೇಟಿ ಕೊಟ್ಟು, ಮಕ್ಕಳ ಕಲಿಕೆಗೆ ನೆರವಾಗುವುದರ ಮೂಲಕ ನಿಜವಾದ ದೇವರ ದರ್ಶನ ಪಡೆದಂತೆ ಈ ಮೂಲಕ ಅರ್ಥಪೂರ್ಣ ಕಾರ್ಯವನ್ನು ನಿರ್ವಹಿಸುತ್ತಿರುವ  ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳಿಗೆ ಇಲಾಖೆಯ ಮತ್ತು ಶಾಲೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು ಎಂದು ಹೇಳಿದರು.

ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗೆ ರಶಪ್ರಶ್ನೆ ಕಾರ್ಯಕ್ರಮ ನೆಡಸಿ ಮಕ್ಕಳಿಗೆ ಬಹುಮಾನ ಮತ್ತು ಸಿಹಿತಿಂಡಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಟ್ರಸ್ಟ್ ಎಂಜಿನಿಯರ್ ಗಳಾದ ಕು.ಹೇಮಾ,ಕು.ಅನ್ನಪೂರ್ಣ, ಹಾಗೂ ಶ್ರೀಮತಿ ಭಾರ್ಗವಿಯವರನ್ನು ಅಭಿನಂದಿಸಿ-ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ಶ್ರೀನಿವಾಸ, ಸಹ ಶಿಕ್ಷಕರಾದ ದೇವರಾಜು, ದೀಪಾ, ಅಡುಗೆ ಸಿಬ್ಬಂದಿಗಳು, ಮತ್ತು ಶಾಲಾಮಕ್ಕಳು ಉಪಸ್ಥಿತರಿದ್ದರು.

admin
the authoradmin

Leave a Reply

Translate to any language you want