LatestLife style

ಪುರುಷರ ಮೂತ್ರಕೋಶ ಕಂಠದ  ಸಮಸ್ಯೆ ನಿವಾರಣೆಗೆ  ಐ ಟಿಂಡ್ (ಐಟಿಐಎನ್ ಡಿ) ಚಿಕಿತ್ಸೆ

ಮೂತ್ರನಾಳದ ತಡೆಯು, ಪ್ರಾಸ್ಟೇಟ್ ಗ್ರಂಥಿಯು ದೊಡ್ಡದಾಗಿರುವ ಹಿರಿಯ ಪುರುಷರನ್ನು ಕಾಡುತ್ತಿರುವ ಸಮಸ್ಯೆ ಎಂದು ಪರಿಗಣಿಸಲಾಗಿತ್ತು. ಆದರೆ ಆರಂಭಿಕಹಂತದ ಮೂತ್ರನಾಳ ಕಂಠದ ಅಡಚಣೆ (ಪಿಬಿಎನ್ಒ) ಯಿಂದಾಗಿ ಯುವಕರೂ ಈ ಸಮಸ್ಯೆಯನ್ನು ಎದುರಿಸುತ್ತಿರುವ ಸಂದರ್ಭಗಳನ್ನು ಮೂತ್ರಕೋಶ ತಜ್ಞರು ಹೆಚ್ಚು ಹೆಚ್ಚಾಗಿ ನೋಡುತ್ತಿದ್ದಾರೆ. ಇದೊಂದು ನಗಣ್ಯ ಸಮಸ್ಯೆಯೆನಿಸಿದ್ದು ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳದಿದ್ದಲ್ಲಿ ಮೂತ್ರಕೋಶದ ಕಾರ್ಯಚಟುವಟಿಕೆ, ಜೀವನ ಗುಣಮಟ್ಟ ಮತ್ತು ಫಲವತ್ತತೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದನ್ನೂ ಓದಿ: ಐವತ್ತರ ನಂತರದ ಬದುಕಿಗೆ ಮಹಿಳೆಯರು ಮಾನಸಿಕ-ದೈಹಿಕವಾಗಿ ತಯಾರಾಗುವುದು ಹೇಗೆ?

ಇದುವರೆಗೆ ಪರಿಹರಿಸಲಾಗದ ಈ ವೈದ್ಯಕೀಯ ಸಮಸ್ಯೆಯನ್ನುನಿವಾರಿಸಲು, ಐ ಟಿಂಡ್ (ತಾತ್ಕಾಲಿಕವಾಗಿ ಒಳಸೇರಿಸಬಹುದಾದ ನಿಟಿನೋಲ್ ಸಾಧನ) ಅನ್ನು  ಅಪೋಲೋ ಹಾಸ್ಪಿಟಲ್ಸ್ ಪರಿಚಯಿಸಿದೆ. ಇದೊಂದು ಸರಳ ಚಿಕಿತ್ಸಾ ವಿಧಾನವಾಗಿದ್ದು ಜಾಗರೂಕತೆಯಿಂದ ಆಯ್ಕೆ ಮಾಡಲಾಗಿರುವ ಪಿಬಿಎನ್ ಒ ಪೀಡಿತ ಮತ್ತು ಪ್ರಾಸ್ಟೇಟ್ ಗ್ರಂಥಿ ಊತದಿಂದಾಗಿ ಮೂತ್ರ ತಡೆ ಎದುರಿಸುತ್ತಿರುವ ರೋಗಿಗಳಿಗೆ ಈ ಸಾಧನವನ್ನು ಅಳವಡಿಸಲಾಗಿದೆ.  ಇದರ ಮೂಲಕ ಈ ತಂತ್ರಜ್ಞಾನವನ್ನು ಬಳಸಿರುವ ಮತ್ತು 10 ಕಾರ್ಯವಿಧಾನಗಳಲ್ಲಿ ಯಶಸ್ವಿಯಾಗಿರುವ ಬೆಂಗಳೂರಿನ ಮಾತ್ರವಲ್ಲ ಕರ್ನಾಟಕದ ಪ್ರಥಮ  ಆರೋಗ್ಯ ಸಂಸ್ಥೆ ಎಂಬ ಗೌರವಕ್ಕೆ ಪಾತ್ರವಾಗಿದೆ.

ಸಾಮಾನ್ಯವಾಗಿ ಸಾಂಪ್ರದಾಯಿಕ ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿ ಪ್ರಾಸ್ಟ್ರೇಟ್ ಗ್ರಂಥಿಯ ಅಂಗಾಂಶವನ್ನು ತೆಗೆಯಲಾಗುತ್ತದೆ. ಆದರೆ ಐಟಿಂಡ್ ಚಿಕಿತ್ಸೆಯಲ್ಲಿ ಅಂಗಾಂಶವನ್ನು ಕತ್ತರಿಸದೇ ಅಥವಾ ದಹಿಸದೇ ಮೂತ್ರಕೋಶದ ಕಂಠ ಮತ್ತು ಪ್ರೊಸ್ಟೇಟ್ ಮೂತ್ರನಾಳವನ್ನು ತಾತ್ಕಾಲಿಕವಾಗಿ ಮರುರೂಪಿಸಲಾಗುತ್ತದೆ.

ಇದನ್ನೂ ಓದಿ: ಹಾಲುಣಿಸಿದರೆ ತಾಯಿಯ ಸೌಂದರ್ಯಕ್ಕೆ ಧಕ್ಕೆ ಬರುತ್ತಾ?

ನೂತನ ಚಿಕಿತ್ಸೆಯಲ್ಲಿ ಸೌಮ್ಯ ರೀತಿಯ ಅರಿವಳಿಕೆ ನೀಡಿ ಎಂಡೋಸ್ಕೋಪಿಕ್ ವಿಧಾನದ ಮೂಲಕ ಸಾಧನವನ್ನು ಅಳವಡಿಸಲಾಗುತ್ತದೆ. ಐದು ಅಥವಾ ಏಳು ದಿನಗಳ ನಂತರ ಅದನ್ನು ಹೊರತೆಗೆಯಲಾಗುತ್ತದೆ. ಸೂಕ್ತವಾಗಿ ಆಯ್ಕೆ ಮಾಡಲಾದ ರೋಗಿಗಳಲ್ಲಿ ಸ್ಖಲನ ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಸಂರಕ್ಷಿಸುವ ಜೊತೆಗೆ ಮೂತ್ರ ತಡೆಯನ್ನು ಸರಾಗಗೊಳಿಸುವುದು ಈ ಚಿಕಿತ್ಸಾ ವಿಧಾನದ ಮೂಲ ಉದ್ದೇಶವಾಗಿದೆ.

18ರಿಂದ 41 ವರ್ಷ ವಯೋಮಾನದ ಸುಮಾರು ಶೇ. 5-10ರಷ್ಟು ಪುರುಷರು ಪಿಬಿಎನ್ ಒ ಅಥವಾ ಅದಕ್ಕೆ ಸಂಬಂಧಿಸಿದ ಇತರ ಕಾರಣಗಳಿಂದಾಗಿ ಮೂತ್ರನಾಳದ ತಡೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಡಿಮೆ ಮೂತ್ರವಿಸರ್ಜನೆ, ಆಗಾಗ ಮೂತ್ರ ವಿಸರ್ಜನೆ ಮತ್ತು  ಮೂತ್ರ ವಿಸರ್ಜಿಸಲು ಶ್ರಮ ಪಡುವುದು ಮುಂತಾದ ಗುಣಲಕ್ಷಣಗಳು ಸಾಮಾನ್ಯವಾಗಿ ಯುವಕರ ಸಮಸ್ಯೆಯಲ್ಲವೆಂದು ಅವುಗಳನ್ನು ನಿರ್ಲಕ್ಷಿಸಲಾಗುತ್ತದೆ. ರೋಗನಿರ್ಣಯದಲ್ಲಿನ ವಿಳಂಬವು ಹಂತಹಂತವಾಗಿ ಮೂತ್ರಕೋಶ ಕಾರ್ಯವೈಫಲ್ಯ, ನಿರಂತರ ಮೂತ್ರಕೋಶ ಸೋಂಕು ಮೂತ್ರಕೋಶ ಹಾನಿ ಮುಂತಾದ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: ಮಹಿಳೆಯರಲ್ಲಿ ಫಲವಂತಿಕೆ ದರ ಇಳಿಯುತ್ತಿದೆಯಾ? ಇದಕ್ಕೆ ಕಾರಣಗಳೇನು?

ಶೇಷಾದ್ರಿಪುರಂ ಅಪೋಲೋ  ಆಸ್ಪತ್ರೆಯ ಮುಖ್ಯ ಮೂತ್ರಕೋಶ ತಜ್ಞ, ಮೂತ್ರ ನಾಳದ ಕ್ಯಾನ್ಸರ್ ತಜ್ಞ ಮತ್ತು ಅಂಗಾಂಗ ಕಸಿ ಶಸ್ತ್ರಚಿಕಿತ್ಸಕ ಡಾ. ಟಿ. ಮನೋಹರ್ ಹೇಳುವಂತೆ “ಬಹಳಷ್ಟು ಯುವಕರು ಈ ರೋಗಲಕ್ಷಣಗಳನ್ನು ಬಹುಕಾಲದಿಂದ ಎದುರಿಸುತ್ತಿದ್ದಾರೆ. ಏಕೆಂದರೆ ಅವರು ಮಾತ್ರವಲ್ಲ, ವೈದ್ಯಕೀಯ ವ್ಯವಸ್ಥೆಯೂ ಈ ಗುಣಲಕ್ಷಣಗಳು ಹಿರಿಯರಿಗೆ ಸಂಬಂಧಟ್ಟವುಗಳೆಂದು ಭಾವಿಸಿವೆ.

ದೀರ್ಘಕಾಲೀನ ಮೂತ್ರನಾಳದ ಅಡಚಣೆಯು ನಂತರದ ದಿನಗಳಲ್ಲಿ ಮೂತ್ರಕೋಶದ ಕಾರ್ಯನಿರ್ವಹಣೆಯ ಮೇಲೆ ಗಂಭೀರ ಪರಿಣಾಮ ಬೀರಲಿರುವುದರಿಂದ ಆರಂಭಿಕ ಹಂತದ ರೋಗನಿರ್ಣಯವು ನಿರ್ಣಾಯಕ. ಮೂತ್ರ ತಡೆಯನ್ನು ನಿವಾರಿಸುವುದರ ಜೊತೆಗೆ ಲೈಂಗಿಕ ಕ್ರಿಯೆ ಮತ್ತು ಫಲವತ್ತತೆ ಉಳಿಸಿಕೊಳ್ಳಲು ಪೂರಕವಾಗುವ, ಸರಳ ಚಿಕಿತ್ಸಾ ವಿಧಾನವಾದ ಐಟೆಂಡ್  ಚಿಕಿತ್ಸೆ, ಸೂಕ್ತ ರೋಗಿಗಳಿಗೆ ಒಂದು ಉತ್ತಮ ಆಯ್ಕೆಯಾಗಿದೆಯಂತೆ.

ಇದನ್ನೂ ಓದಿ: ನೀವು ತಡವಾಗಿ ವಿವಾಹವಾಗಿದ್ದೀರಾ…? ಆದಷ್ಟು ಬೇಗ ಮಗು ಪಡೆಯುವ ಬಗ್ಗೆ ಆಲೋಚಿಸಿ…

ಐಟಿಂಡ್ ಚಿಕಿತ್ಸಾ ವಿಧಾನವು ಸಣ್ಣ ಪುಟ್ಟ ಪ್ರೊಸ್ಟೇಟ್ ಸಮಸ್ಯೆಗಳಿಗೆ ಅಪೋಲೋ ಆಸ್ಪತ್ರೆ ಒದಗಿಸುವ  ವಿವಿಧ ರೀತಿಯ ಸರಳ ಶಸ್ತ್ರಚಿಕಿತ್ಸೆಗಳ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಇದುವರೆಗೆ  ಆಸ್ಪತ್ರೆಯು 2,500 ಕ್ಕೂ ಹೆಚ್ಚು ಚಿಕಿತ್ಸೆಗಳನ್ನು ಕೈಗೊಂಡಿದ್ದು, ಹೋ-ಲೆಪ್, ಮೋ-ಲೆಪ್, ಮಿಮಿ ಮೋಲೆಪ್, ರೆಝೂಮ್, ಯೂರೋಲಿಫ್ಟ್ ಮತ್ತು ಯಂತ್ರಮಾನವನ ಬೆಂಬಲಿತ ಶಸ್ತ್ರಚಿಕಿತ್ಸೆ ಸೇರಿದಂತೆ ಹಲವಾರು ಚಿಕಿತ್ಸೆಗಳನ್ನು ನೀಡಿದೆ.  ಇವುಗಳಿಂದ ರೋಗಿಯ ವಯಸ್ಸು, ದೇಹರಚನೆ, ರೋಗಲಕ್ಷಣ ಮತ್ತು ಸಂತಾನೋತ್ಪತ್ತಿ ಗುರಿಗಳಿಗೆ ಅನುಗುಣವಾಗಿ ಚಿಕಿತ್ಸೆನೀಡಲು ವೈದ್ಯರಿಗೆ  ಸಾಧ್ಯವಾಗಿದೆ ಎಂದು ಹೇಳುತ್ತಾರೆ.

ಇದನ್ನೂ ಓದಿ: ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ನಾವೇನು ಮಾಡಬೇಕು? ಯಾವ ಆಹಾರ ಸೇವಿಸಬೇಕು?

ಬೆಂಗಳೂರಿನ ಶೇಷಾದ್ರಿಪುರಂ ಅಪೋಲೋ ಹಾಸ್ಪಿಟಲ್ಸ್ ಉಪಾಧ್ಯಕ್ಷರಾದ ಶ್ರೀ ಉದಯ್ ದಾವ್ಡಾ  ಪ್ರಕಾರ “ಮೂತ್ರಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ವಯಸ್ಸಾದವರನ್ನು ಮಾತ್ರ ಕಾಡುತ್ತದೆ ಎಂಬ ಭಾವನೆ ಸಾಮಾನ್ಯವಾಗಿರುವುದರಿಂದ, ನಿರಂತರ ಮೂತ್ರಕೋಶ ಸಮಸ್ಯೆಗಳನ್ನು ಎದುರಿಸುತ್ತಿರುವ ಯುವಕರು ರೋಗ ಪತ್ತೆ ಕಾರ್ಯವನ್ನು ವಿಳಂಬ ಮಾಡುತ್ತಿದ್ದಾರೆ.

ಐಟಿಂಡ್ ಚಿಕಿತ್ಸೆಯ ಪರಿಚಯವು, ಅಗತ್ಯವಿರುವ ರೋಗಿಗಳಿಗೆ ವೈದ್ಯಕೀಯವಾಗಿ ಪ್ರಮಾಣೀಕೃತಗೊಂಡಿರುವ ಸರಳ ಚಿಕಿತ್ಸೆಯನ್ನು ಒದಗಿಸುವ ನಮ್ಮ ಬದ್ಧತೆಯನ್ನು ಬಿಂಬಿಸುತ್ತದೆ. ನೂತನ ಚಿಕಿತ್ಸಾ ವಿಧಾನಗಳಿಗೆ ಪ್ರವೇಶವಕಾಶವನ್ನು ವಿಸ್ತರಿಸುವ ಮೂಲಕ,  ಆರಂಭಿಕ ಹಂತದ ಚಿಕಿತ್ಸೆ, ಜೀವನ ಗುಣಮಟ್ಟದ ಸಂರಕ್ಷಣೆ  ಮತ್ತು ಪ್ರತಿ ರೋಗಿಯ ವೈದ್ಯಕೀಯ ಅಗತ್ಯದ ಪೂರೈಕೆ  ಎಂಬ ಉದ್ದೇಶವನ್ನು ಸಾಧಿಸಲು ಸಾಧ್ಯವಾಗಿದೆ ಎನ್ನುತ್ತಾರೆ.

ಇದನ್ನೂ ಓದಿ: ಹೃದಯಾಘಾತಕ್ಕೆ ಬದಲಾದ ಜೀವನ ಶೈಲಿ ಕಾರಣವೇ..? 

ವಯಸ್ಸು ಯಾವುದೇ ಇರಲಿ,  ನಿರಂತರವಾದ ಮೂತ್ರಕೋಶದ ಸಮಸ್ಯೆ ಗುಣಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಸರಳ ರೋಗಪತ್ತೆ ವಿಧಾನಗಳಾದ ಯೂರೋಫ್ಲೋ ಮೆಟ್ರಿ  ಮತ್ತು ತಜ್ಞ ವೈದ್ಯರ ತಪಾಸಣೆಗಳು,  ಮೂತ್ರ ನಾಳದ ಅಡಚಣೆ  ಸಮಸ್ಯೆಯನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಲು ,  ಮೂತ್ರಕೋಶಕ್ಕೆ ಶಾಶ್ವತ ಹಾನಿಯಾಗುವ ಮುನ್ನ, ಸಕಾಲಕ್ಕೆ ಚಿಕಿತ್ಸೆ ಒದಗಿಸಲು ನೆರವಾಗುತ್ತವೆ ಎಂಬುದಂತು ನಿಜ.

admin
the authoradmin

Leave a Reply