ArticlesLatest

ಬಡವನ ತಟ್ಟೆಯಿಂದ ಕುರಿಮಾಂಸ ಮಾಯವಾಗುವ ಕಾಲ ಬಂದಿದೆ..  ಏಕೆ ಹೀಗಾಯ್ತು?

ಇದು ಸಾಮಾಜಿಕ ಕಳಕಳಿಯ ಲೇಖನಗಳ ಸರಮಾಲೆ-25

 ಹಿಂದೆ 450-500 ರೂ. ಇದ್ದ ಕುರಿಮಾಂಸ ಇಂದು 750 ರಿಂದ 800 ರೂ.*ಗೆ ಏರಿದೆ! ಬ್ರಾಂಡೆಡ್ ಶಾಪ್ ಗಳಲ್ಲಿ *800+ ಕೂಡ ಇದೆ . ಸಾಮಾನ್ಯ ಕುಟುಂಬಕ್ಕೆ ತಿಂಗಳಿಗೆ ಒಮ್ಮೆ ಕುರಿಮಾಂಸ ತಿನ್ನಬೇಕು ಅಂದ್ರೆ 2 ಕೆಜಿ ತಗೊಂಡ್ರೂ 1500-1600 ರೂ. ಆಗುತ್ತೆ. ದಿನಗೂಲಿ ಮಾಡುವ, ಸಣ್ಣ ಸಂಬಳದ ಮಧ್ಯಮ ವರ್ಗದವರಿಗೆ ಇದು ಕನಸಿನ ಮಾತು…

ಇನ್ನು ದುಃಖದ ವಿಷಯ ಏನು ಅಂದ್ರೆ, ಸ್ಥಳೀಯವಾಗಿ ನಮ್ಮೂರಲ್ಲೇ ಸಾಕಿದ ಮೇಕೆಗಳಿಗೂ ಇದೇ ರೇಟ್ ಇದೆ!  ಟ್ರಾನ್ಸ್ಪೋರ್ಟ್ ಖರ್ಚು ಇಲ್ಲ, ಮಧ್ಯವರ್ತಿ ಇಲ್ಲ ಆದ್ರೂ ಬೆಲೆ ಕಡಿಮೆ ಆಗ್ತಿಲ್ಲ. ಮಾರುಕಟ್ಟೆಯಲ್ಲಿ “ಮಟನ್ ರೇಟ್” ಅಂತ ಒಂದೇ ರೇಟ್ ಫಿಕ್ಸ್ ಆಗಿಬಿಟ್ಟಿದೆ.

ಮೇಕೆ vs ಕುರಿ – ಪ್ರತ್ಯೇಕ ರೇಟ್ ಬೇಕೇ ಬೇಕು! ಇದು ಗ್ರಾಹಕರಿಗೆ ನೇರ ಅನ್ಯಾಯ.. ಕುರಿ ಹೊರ ರಾಜ್ಯದಿಂದ ಬರುತ್ತೆ. ಡೀಸೆಲ್, ಟೋಲ್, ಲೋಡಿಂಗ್ ಖರ್ಚು ಇದೆ. ಆದರೆ ಮೇಕೆ ನಮ್ಮೂರಲ್ಲೇ ಸಾಕಿ, ನಮ್ಮೂರಲ್ಲೇ ಮಾರೋದು. ಅದಕ್ಕೆ ಅಷ್ಟು ಖರ್ಚು ಎಲ್ಲಿದೆ?  ಆದರೂ ಎರಡಕ್ಕೂ 750-800 ರೂ.ನೇ ರೇಟ್. ಇದು ಸರಿಯಲ್ಲ!

ಬೆಲೆ ಏರಿಕೆಗೆ ಇನ್ನೊಂದು ಕಾರಣ.. ಸ್ಥಳೀಯ ಹಿಂದೂಗಳು ಮಟನ್ ಶಾಪ್ ಇಟ್ಟುಕೊಳ್ಳದೆ ಇರುವುದು ಸಹ ಬೆಲೆ ಏರಿಕೆಗೆ ಕಾರಣವಾಗಿರುವುದು.   ವ್ಯಾಪಾರ ಒಂದೇ ಕಡೆ ಕೇಂದ್ರೀಕೃತವಾದಾಗ ಸ್ಪರ್ಧೆ ಇರೋದಿಲ್ಲ! ಮಧ್ಯವರ್ತಿಗಳದ್ದೇ ಆಟ ಆಗುತ್ತೆ. ವ್ಯಾಪಾರದಲ್ಲಿ ಜಾತಿ, ಮತ ಇರಬಾರದು  ಯಾರು ಬೇಕಾದರೂ ಪ್ರಾಮಾಣಿಕವಾಗಿ ವ್ಯಾಪಾರ ಮಾಡುವ ಅವಕಾಶ ಎಲ್ಲರಿಗೂ ಸಿಗಬೇಕು.

 ಪ್ರಮುಖ ಬೇಡಿಕೆಗಳು…. ಮೇಕೆ ಮಾಂಸದ ರೇಟ್ 500 ರಿಂದ 550 ರೂ.ಗೆ ಫಿಕ್ಸ್ ಮಾಡಬೇಕು,    ಸ್ಥಳೀಯ ಉತ್ಪಾದನೆಗೆ ಇದು ನ್ಯಾಯವಾದ ಬೆಲೆ. ರೈತನಿಗೂ ಲಾಭ, ಗ್ರಾಹಕನಿಗೂ ಅನುಕೂಲ. ಮೇಕೆ ಮತ್ತು ಕುರಿಗೆ ಪ್ರತ್ಯೇಕ ಶಾಪ್ ಗಳು ಬರಬೇಕು!  ಲೋಕಲ್ ಗೋಟ್ ಶಾಪ್”  ಮತ್ತು “ಇಂಪೋರ್ಟೆಡ್ ಮಟನ್ ಶಾಪ್”  ಅಂತ ಪ್ರತ್ಯೇಕ ಬೋರ್ಡ್ ಇರಬೇಕು. ಗ್ರಾಹಕ ತನಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಲಿ.

ಸ್ಥಳೀಯವಾಗಿ ಎಲ್ಲಾ ವರ್ಗದ ಜನರಿಗೂ ಮಟನ್ ಶಾಪ್ ಲೈಸೆನ್ಸ್ ಸಿಗಬೇಕು,   ಜಾತಿ, ಮತ ಭೇದವಿಲ್ಲದೆ ಸ್ಥಳೀಯ ಯುವಕರು, ರೈತರು, ಮಹಿಳೆಯರು ಎಲ್ಲರೂ ಮಟನ್ ಶಾಪ್ ಇಡಲು ಅವಕಾಶ ಕೊಡಬೇಕು. ಕೋಆಪರೇಟಿವ್ ಮಾದರಿಯಲ್ಲಿ ರೈತನಿಂದ ನೇರ ಮಾರಾಟ ಆದರೆ ಮಧ್ಯವರ್ತಿ ಕಮಿಷನ್ ಉಳಿಯುತ್ತೆ. ಬೆಲೆ 150-200 ರೂ. ಇಳಿಯುತ್ತೆ!

ಸ್ಥಳೀಯ ಸಾಕಾಣಿಕೆಗೆ ಸರ್ಕಾರದ ಪ್ರೋತ್ಸಾಹ,   ಮೇಕೆ ಸಾಕಾಣಿಕೆಗೆ ಸಬ್ಸಿಡಿ, ಮೇವು ಸಹಾಯ, ಉಚಿತ ವೈದ್ಯಕೀಯ ಕೊಡಬೇಕು. ಉತ್ಪಾದನೆ ಜಾಸ್ತಿ ಆದರೆ ಬೆಲೆ ತಾನೇ ಕಡಿಮೆ ಆಗುತ್ತೆ.. ಹಬ್ಬದ ಸಮಯದಲ್ಲಿ ಬೆಲೆ ನಿಯಂತ್ರಣ     ರಂಜಾನ್, ಬಕ್ರೀದ್, ದಸರಾ ಸಮಯದಲ್ಲಿ ಬೆಲೆ 1000 ರೂ. ವರೆಗೂ ಹೋಗುತ್ತೆ .. ಈ ಸಮಯದಲ್ಲಿ ಸರ್ಕಾರ ಮಧ್ಯಪ್ರವೇಶಿಸಬೇಕು!

ಇದರಿಂದ ಏನಾಗುತ್ತೆ ಅಂದರೆ… ಸ್ಥಳೀಯರೇ ಶಾಪ್ ಇಟ್ಟಾಗ ಉದ್ಯೋಗ ಸೃಷ್ಟಿ ಆಗುತ್ತೆ. ಮಧ್ಯವರ್ತಿಗಳು ಕಡಿಮೆ ಆಗುತ್ತಾರೆ. ಸ್ಪರ್ಧೆ ಬಂದಾಗ ಬೆಲೆ ಆಟೋಮ್ಯಾಟಿಕ್ ಆಗಿ ಕಡಿಮೆ ಆಗುತ್ತೆ. ರೈತನಿಗೂ ನೇರ ಲಾಭ ಸಿಗುತ್ತೆ. ಮಾಂಸ ತಿನ್ನುವುದು ಐಷಾರಾಮಿ ಅಲ್ಲ! ಇದು ಲಕ್ಷಾಂತರ ಕುಟುಂಬಗಳ  ಪ್ರೋಟೀನ್ ಮೂಲ. ಬಡವನ ತಟ್ಟೆಯಿಂದ ಕುರಿಮಾಂಸ ಮಾಯವಾದರೆ ಅದು ಕೇವಲ ಆಹಾರದ ಸಮಸ್ಯೆ ಅಲ್ಲ, ಅದು ಆರೋಗ್ಯದ ಸಮಸ್ಯೆ

ರೈತನಿಗೂ ನ್ಯಾಯ ಸಿಗಬೇಕು, ಗ್ರಾಹಕನಿಗೂ ನೆಮ್ಮದಿ ಸಿಗಬೇಕು, ಸ್ಥಳೀಯರಿಗೂ ಉದ್ಯೋಗ ಸಿಗಬೇಕು.  ಸ್ಥಳೀಯವಾಗಿ ಸಾಕಿ, ಸ್ಥಳೀಯವಾಗಿ ಮಾರಿ, ನ್ಯಾಯವಾದ ಬೆಲೆಯಲ್ಲಿ ಕೊಡುವ ವ್ಯವಸ್ಥೆ ಬರಲಿ! .. ಇಂಥ ವಿಷಯದಲ್ಲಿ ಯಾರೂ ಪ್ರಶ್ನೆ ಮಾಡೋದಿಲ್ಲ ಎಂದು ಅರಿತು ಇಷ್ಟೊಂದು ಪ್ರಮಾಣದಲ್ಲಿ ಬೆಲೆ ಜಾಸ್ತಿ ಆಗಿರಬಹುದಾ? ಇಂತಹ ವಿಷಯಗಳು ಗಮನಕ್ಕೆ ಬಂದ ತಕ್ಷಣ ಬೆಲೆ ನಿಯಂತ್ರಣ ಮಾಡುವುದು ಆಡಳಿತ ವರ್ಗದ ಕರ್ತವ್ಯವಾಗಿದೆ.

ಯುವಜನರೇ, ಎಚ್ಚರ…! ಸತ್ಯವನ್ನು ಅರ್ಥಮಾಡಿಕೊಳ್ಳಿ.. ನಿಮ್ಮ ಹೆಸರಿನಲ್ಲಿ ರಾಜಕೀಯ ಆಟ!

ಯುವಜನರೇ, ಎಚ್ಚರ…! ಸತ್ಯವನ್ನು ಅರ್ಥಮಾಡಿಕೊಳ್ಳಿ.. ನಿಮ್ಮ ಹೆಸರಿನಲ್ಲಿ ರಾಜಕೀಯ ಆಟ!

admin
the authoradmin

Leave a Reply